ಸುದ್ದಿಮೂಲ ವಾರ್ತೆ ಸಿಂಧನೂರು, ನ.30:
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬೇಕಾದರೆ ಪೂರ್ವ ತಯಾರಿ ಅಗತ್ಯವಾಗಿದೆ. ಪೂರ್ವ ತಯಾರಿಗಾಗಿ ಇಂತಹ ತರಬೇತಿಗಳು ಪೂರಕವಾಗಲಿವೆ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.
ಅವರು ನಗರದ ಸುಕಾಲಪೇಟೆಯ ಕನಕದಾಸ ಬಿ.ಇಡಿ. ಕಾಲೇಜಿನಲ್ಲಿ ರಾಯಚೂರು ಜಿಲ್ಲಾಾ ಹಾಗೂ ಸಿಂಧನೂರು ತಾಲೂಕ ಕನಕ ನೌಕರರ ಸಂಘ ಮತ್ತು ಕನಕದಾಸ ಶಿಕ್ಷಣ ಸಂಸ್ಥೆೆಯ ಸಹಯೋಗದಲ್ಲಿ ಭಾನುವಾರ ಹಮ್ಮಿಿಕೊಂಡಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆಯ ಪೂರ್ವಭಾವಿ ಒಂದು ದಿನದ ಕಾರ್ಯಾಗಾರ ಉದ್ಘಾಾಟಿಸಿ ಅವರು ಮಾತನಾಡಿದರು. ಸುಪ್ರೀೀಮ್ ಕೋರ್ಟ ಆದೇಶದಂತೆ ಶಿಕ್ಷಕರ ಅರ್ಹತಾ ಪರೀಕ್ಷೆ ಕಡ್ಡಾಾಯ ಇರುವುದರಿಂದ ಡಿಸೆಂಬರ್ 7 ರಂದು ನಡೆಯುವ ಟಿಇಟಿ. ಪರೀಕ್ಷೆಯನ್ನು ಚೆನ್ನಾಾಗಿ ಬರೆಯಬೇಕೆನ್ನುವ ಸದುದ್ದೇಶದಿಂದ ಇಂದು ಕನಕದಾಸ ಬಿಇಡಿ. ಕಾಲೇಜಿನಲ್ಲಿ ಒಂದು ದಿನದ ಕಾರ್ಯಾಗಾರ ಹಮ್ಮಿಿಕೊಂಡಿರುವುದು ಉತ್ತಮ ಕಾರ್ಯ. ಪರೀಕ್ಷಾರ್ಥಿಗಳೆಲ್ಲರೂ ಉತ್ಸಾಾಹದಿಂದ ಸರಿಯಾಗಿ ಅಭ್ಯಾಾಸ ಮಾಡಿ ಟಿ.ಇ.ಟಿ. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿ ಶಿಕ್ಷಕ ಹುದ್ದೆೆ ಪಡೆಯಲು ಹೆಚ್ಚಿಿನ ಪ್ರಯತ್ನ ಮಾಡಬೇಕು. ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದರು.
ಸಾನಿಧ್ಯ ವಹಿಸಿದ್ದ ತುರುವಿಹಾಳದ ಅಮೋಘ ಸಿದ್ದೇಶ್ವರ ಮಠದ ಪೀಠಾಧಿಪತಿ ಮಾದಯ್ಯ ಗುರುವಿನ ಮಾತನಾಡಿ, ಜೀವನದಲ್ಲಿ ಯಶಸ್ವಿಿಯಾಗಬೇಕಾದರೆ ಕಾರ್ಯಪ್ರವೃತ್ತಿಿ ಬೆಳೆಸಿಕೊಳ್ಳಬೇಕು. ಶಿಕ್ಷಕರಾಗಬಯಸುವವರು ಹೆಚ್ಚಿಿನ ಅಧ್ಯಯನಶೀಲತೆ, ಪ್ರಯತ್ನ ಅವಶ್ಯಕವೆಂದು ಹೇಳಿದ ಅವರು, ದೊರೆಯುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದರು.
ಜಿಲ್ಲಾಾ ಕನಕ ನೌಕರ ಸಂಘದ ಅಧ್ಯಕ್ಷ ನಾಗರಾಜ ಅರಳಿಮರದ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಜಾಲಿಬೆಂಚಿ, ತಾಲೂಕ ಕನಕ ನೌಕರರ ಸಂಘದ ಅಧ್ಯಕ್ಷ ಗ್ಯಾಾನಪ್ಪ ಕನ್ನಾಾಪೇಟೆ, ಮಸ್ಕಿಿ ತಾಲೂಕ ಕನಕ ನೌಕರರ ಸಂಘದ ಅಧ್ಯಕ್ಷ, ವೀರೇಶ ನಾರಬಂಡಿ ಸರಕಾರಿ ನೌಕರರ ಸಂಘದ ಮಾಜಿ ತಾಲೂಕ ಅಧ್ಯಕ್ಷ ಬಸವರಾಜ ವಿ., ಸಾಹಿತಿ ಬೀರಪ್ಪ ಶಂಭೋಜಿ, ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಿಗಳಾದ ಉಪನ್ಯಾಾಸಕ ಶರಣಪ್ಪ ಹೊಸಳ್ಳಿಿ, ಮುದುಕಪ್ಪ ತುರುವಿಹಾಳ, ಯಮನೂರಪ್ಪ ವಠಾರ, ಬಸವರಾಜ ಆನೆಗುಂದಿ, ಮಲ್ಲಪ್ಪ ಬಸಾಪುರ, ಬೀರಪ್ಪ ಹಂಚಿನಾಳ, ಹನುಮಂತಪ್ಪ ಹಗೆದಾಳ, ವೀರೇಶ ನಾರಬಂಡಿ ಮಸ್ಕಿಿ ತಾಲೂಕ ಅಧ್ಯಕ್ಷ, ಬೀರೇಂದ್ರ ಮೇಟಿ, ಶಂಕರ ಗುರಿಕಾರ, ಮಲ್ಲಿಕಾರ್ಜುನ ಕುರಕುಂದಿ, ದೈಹಿಕ ಶಿಕ್ಷಣ ಶಿಕ್ಷಕ ಆಂಜನೇಯ, ಹುಚ್ಚಪ್ಪ ನೇಗಲಿ ಉಪಸ್ಥಿಿತರಿದ್ದರು. 150 ಅಭ್ಯರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಕನಕ ನೌಕರರ ಸಂಘದಿಂದ ಶಿಕ್ಷಕರ ಅರ್ಹತಾ ಪರೀಕ್ಷಾ ತರಬೇತಿ ಕಾರ್ಯಾಗಾರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ ಅಗತ್ಯ ; ಕೆ.ವಿರೂಪಾಕ್ಷಪ್ಪ

