ಸುದ್ದಿಮೂಲ ವಾರ್ತೆ ರಾಯಚೂರು, ಜ.03:
ಸದಾಕಾಲಕ್ಕೂ ಜೀವಂತವಾಗಿರುವ ಭಾರತೀಯ ಶಿಲ್ಪಕಲಾ ಕೌಶಲ್ಯಕ್ಕೆೆ ಅಮರಶಿಲ್ಪಿಿ ಜಕಣಾಚಾರಿಯವ ಕೊಡುಗೆ ಅಪಾರವಾಗಿದೆಎಂದು ಎಂದು ರಾಯಚೂರು ತಹಶಿಲ್ದಾಾರ್ ಸುರೇಶ್ ವರ್ಮಾ ಅವರು ಹೇಳಿದರು.
ಜನವರಿ 03ರ ಶನಿವಾರ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಯಚೂರು ಇವರ ಸಹಯೋಗದಲ್ಲಿ ಹಮ್ಮಿಿಕೊಳ್ಳಲಾಗಿದ್ದ ವಿಶ್ವಕರ್ಮ ಅಮರಶಿಲ್ಪಿಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮಕ್ಕೆೆ ಚಾಲನೆ ನೀಡಿ ಮಾತನಾಡಿದರು.
ಭಾರತ ಸೇರಿದಂತೆ ವಿಶ್ವದ ವಿವಿಧ ಕಡೆ ಜಕಣಾಚಾರಿಯವರ ಶಿಲ್ಪಕಲೆಗಳು ಇಂದಿಗೂ ಜೀವಂತವಾಗಿದೆ. ಶಿಲ್ಪಕಲೆಗೆ ಅವರು ನೀಡಿರುವ ಕೊಡುಗೆಗೆ ಇವುಗಳೇ ಸಾಕ್ಷಿ. ಬೇಲೂರು, ಹಳೇಬೀಡು, ಸೋಮನಾಥಪುರ ದೇವಾಲಯಗಳಲ್ಲಿನ ಶಿಲ್ಪಕಲೆ ವಿಶ್ವಕರ್ಮರ ಪ್ರಸ್ತುತತೆ ಬಿಂಬಿಸುತ್ತಿಿದೆ. ನಶಿಸಿಹೋಗುತ್ತಿಿರುವ ವಿಶ್ವಕರ್ಮರ ಕುಲಕಸುಬುಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿ, ಮುಂದುವರಿಸಲು ಎಲ್ಲರೂ ಪ್ರಯತ್ನಿಿಸಬೇಕು ಎಂದರು.
ವಿಶ್ವಕರ್ಮ ಅಮರಶಿಲ್ಪಿಿ ಜಕಣಾಚಾರಿ ಅವರ ಆಚಾರ ವಿಚಾರ ಸಮಾಜದ ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು. ಇಂದಿನ ಮಕ್ಕಳಿಗೆ ಅವರ ಆಚಾರ, ವಿಚಾರಗಳ ಮಾಹಿತಿ ಒದಗಿಸುವ ಕೆಲಸ ಪೋಷಕರು ಮಾಡಬೇಕೆಂದರು.
ಈ ವೇಳೆ ಉಪನ್ಯಾಾಸಕರಾಗಿ ಎಸ್.ಆರ್.ಕೆ. ಶಿಕ್ಷಣ ಮಹಾವಿದ್ಯಾಾಲಯದ ಸಹಾಯಕ ಪ್ರಾಾಧ್ಯಾಾಪಕ ಡಾ.ಸವಿತಾ ಪಂಪಾಪತಿ ಬಡಿಗೇರ್ ಮಾತನಾಡಿದರು.
ಶಾಸಕರಿಂದ ಮಾಲಾರ್ಪಣೆ: ಇದಕ್ಕೂ ಮುಂಚೆ ನಗರದ ಕಾಳಿದೇವಿ ಆವರಣದಲ್ಲಿ ವಿಶ್ವಕರ್ಮ ಅಮರಶಿಲ್ಪಿಿ ಜಕಣಾಚಾರಿ ಅವರ ಅದ್ದೂರಿ ಭಾವಚಿತ್ರ ಮೆರವಣಿಗೆಗೆ ರಾಯಚೂರು ನಗರ ಕ್ಷೇತ್ರದ ಶಾಸಕ ಡಾ.ಎಸ್.ಶಿವರಾಜ ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಎ.ವಸಂತ ಕುಮಾರ್ ಅವರು ಚಾಲನೆ ನೀಡಿ, ಮಾಲಾರ್ಪಣೆ ಸಲ್ಲಿಸಿ ಗೌರವ ಅರ್ಪಿಸಿದರು. ಈ ವೇಳೆ ವಿವಿಧ ಗಣ್ಯರು ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಸಾಥ್ ನೀಡಿದರು.
ಇದೇ ಸಂದರ್ಭದಲ್ಲಿ ದೇವದುರ್ಗದ ಮೂಲ ಪೀಠದ ವಿಶ್ವಕರ್ಮ ಶ್ರೀಮದ್ ಮದಾನೆಗುಂದಿ ಸರಸ್ವತಿ ಸಂಸ್ಥಾಾನದ ಶ್ರೀಶ್ರೀ ಮೌನೇಶ್ವರ ಮಹಾಸ್ವಾಾಮಿಗಳು, ಸೂರ್ಯ ನಾರಾಯಣ ಸ್ವಾಾಮಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉತ್ತರಾದೇವಿ, ಸಮಾಜದ ಮುಖಂಡರಾದ ಎ. ಈರಣ್ಣ ಬಡಿಗೇರ, ವಕೀಲರಾದ ಬ್ರಹ್ಮ ಗಣೇಶ್, ಕೆ.ರಾಮು ಗಾಣಧಾಳ, ಹಿರಿಯ ಪತ್ರಕರ್ತರಾದ ಮಾರುತಿ ಬಡಿಗೇರ, ನಾಗರಾಜ ಪತ್ತಾಾರ್, ಡಾ.ವೆಂಕಟೇಶ ಅನ್ವರಿ, ಗಿರೀಶ್ ಆಚಾರಿ, ಜಯಂತ್ ಆಚಾರಿ, ಕೆ.ನರಸಪ್ಪ, ಮಲೇಶ, ಪ್ರಕಾಶ್ ಗುಂಜಹಳ್ಳಿಿ, ಸುರೇಶ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಇದ್ದರು.
ಸಂಸ್ಮರಣಾ ದಿನಾಚರಣೆಯಲ್ಲಿ ತಹಶೀಲ್ದಾರ್ ಅಭಿಮತ ‘ಶಿಲ್ಪಕಲೆಗೆ ಜಕಣಾಚಾರಿ ಕೊಡುಗೆ ಅಪಾರ’

