ಸುದ್ದಿಮೂಲ ವಾರ್ತೆ
ಹೊಸಕೋಟೆ, ಸೆ.27: ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಗಳು ನಮ್ಮ ದೇಶದ ಕೀರ್ತಿ ಉತ್ತಂಗಕ್ಕೆ ಹೋಗುವುದಕ್ಕೆ ಇಂಥ ಕಾರ್ಯಕ್ರಮಗಳು ಕಾರಣವಾಗುತ್ತವೆ ಎಂದು ತಹಶಿಲ್ದಾರ್ ವಿಜಯ್ ಕುಮಾರ್ ಹೇಳಿದರು.
ಹೊಸಕೋಟೆ ನಗರದ ಜೆಕೆಬಿಎಂಎಸ್ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ 2023-24ನೇ ಸಾಲಿನ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು.
ಖಾಸಗಿ ಶಾಲೆಯ ಮಾದರಿಯಲ್ಲಿ ಸರ್ಕಾರಿ ಶಾಲೆಯಲ್ಲೂ ಸಹ ಅವರಿಗಿಂತ ಏನು ಕಮ್ಮಿಇಲ್ಲ ಸರ್ಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಈ ಪ್ರತಿಭಾ ಕಾರಂಜಿಯನ್ನು ಕೆಳಮಟ್ಟದಿಂದ 22 ಕ್ಲಸ್ಟರ್ ಕಾರ್ಯಕ್ರಮ ನಡೆಸಿ ಅತ್ಯುತ್ತಮರನ್ನು ಆಯ್ಕೆ ಮಾಡಿಕೊಂಡು ಇಲ್ಲಿ ತಾಲೂಕು ಮಟ್ಟದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳು ಅವರ ಪ್ರತಿಭೆ ಹೊರಹಾಕಲು ಈ ವೇದಿಕೆಯನ್ನು ನಿರ್ಮಾಣ ಮಾಡಿದ್ದಾರೆ ಎಂದರು.
ಈ ಕಾರ್ಯಕ್ರಮ ಬಹಳ ಅದ್ಭುತವಾಗಿದೆ. ಶಾಲೆಯಲ್ಲಿ ವಿದ್ಯೆ ಒಂದೇ ಸಾಲದು ವಿವಿಧ ಹಂತಗಳಲ್ಲಿ ಮಕ್ಕಳು ಅವರ ಪ್ರತಿಭೆಯನ್ನು ಹೊರಗೆ ತರುವಂತಹ ಕಾರ್ಯಕ್ರಮವೇ ಈ ಪ್ರತಿಭಾ ಕಾರಂಜಿ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಹಲವಾರು ಗುಣಗಳು ಇರುತ್ತವೆ. ಒಬ್ಬೊಬ್ಬರು ಒಂದೊಂದು ವಿಚಾರದಲ್ಲಿ ವೈಶಿಷ್ಟ್ಯ ಹೊಂದಿರುವಂತಹ ಮಕ್ಕಳು ಇರುತ್ತಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನಾವು ಎಲ್ಲದರಲ್ಲೂ ಮುಂಚೂಣಿಯಲ್ಲಿ ಇರಬೇಕಾದರೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಅಭಿವೃದ್ಧಿಪಥಕ್ಕೆ ತೆಗೆದುಕೊಂಡು ಹೋದಾಗ ನಮ್ಮ ದೇಶದ ಕೀರ್ತಿ ಉತ್ತಂಗಕ್ಕೆ ಹೋಗುವುದಕ್ಕೆ ಇಂಥ ಕಾರ್ಯಕ್ರಮಗಳು, ಕಾರಣ ಆಗುತ್ತವೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪದ್ಮನಾಭ,ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಡಿ.ಎಸ್.ರಾಜಕುಮಾರ್ ಮಾತನಾಡಿದರು. ಇದೇ ಸಂದರ್ಭದಲ್ಲಿ 22 ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಂಘದ ಪದಾಧಿಕಾರಿಗಳು ನೋಡಲ್ ಅಧಿಕಾರಿಗಳು ವೇದಿಕೆಯಲ್ಲಿ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕರ ಸಂಘದ ಅಲ್ಲಾಭಕ್ಷ್,ಕಾರ್ಯದರ್ಶಿ ಗಂಗಾಧರ್, ಸುಬ್ರಯಪ್ಪ, ಸೋಣ್ಣಪ್ಪ, ಮುನಿಶಾಮಪ್ಪ, ಅಶ್ವಥ್, ಪಿ.ರಾಜಣ್ಣ, ಅಣ್ಣಯ್ಯಪ್ಪ, ಇಸಿಓ ರವಿಕುಮಾರ್, ಭವ್ಯ ಇ ಸಿ ಓ, ಯೋಗೇಶ್ ಕುಮಾರ್ ಬಿ ಆರ್ ಪಿ, ಹೇಮಲತಾ ಬಿ ಆರ್ ಪಿ ,ಮುನಿರಾಜು ಬಿ ಐಇ ಆರ್ ಟಿ, ನಿರ್ಮಲ ಬಿ ಐಇ ಆರ್
ಟಿ, ಪ್ರೇಮಕುಮಾರಿ ಬಿ ಐಇ ಆರ್ ಟಿ, ತ್ಯಾಗರಾಜ್ ಸಿಆರ್ ಪಿ, ನಟರಾಜು ಸಿ ಆರ್ ಪಿ, ಡಿ ಎಸ್ ಲೋಕೇಶ್ ಪಿ ಎಚ್ ಎಂ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಲ್ಲ ಭಕ್ಷ,ಪ್ರಧಾನ ಕಾರ್ಯದರ್ಶಿ ಗಂಗಾಧರಯ್ಯ, ಸಂಘದಪದಾಧಿಕಾರಿಗಳು,ನೋಡಲ್ ಅಧಿಕಾರಿಗಳು ಪಾಲ್ಗೊಂಡಿದ್ದರು.