ಸುದ್ದಿಮೂಲ ವಾರ್ತೆ
ಹೊಸಕೋಟೆ, ಆ.25: ಗ್ರಾಮಗಳಲ್ಲಿ ಪರಸ್ಪರ ಸಾಮರಸ್ಯ ಬೆಳೆಸುವಲ್ಲಿ ದೇವಾಲಯಗಳು ಸಹಕಾರಿಯಾಗುತ್ತವೆ. ಧಾರ್ಮಿಕ ಕಾರ್ಯಕ್ರಮಗಳು ಗ್ರಾಮದಲ್ಲಿನ ಎಲ್ಲಾ ವರ್ಗದ ಜನರನ್ನು ಒಗ್ಗೂಡಸಲಿವೆ ಎಂಬ ನಂಬಿಕೆ ಪುರಾತನ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಬೆಳೆದು ಬಂದಿದೆ ಎಂದು ವಿಧಾನ ಪರಿಷತ್ತಿನ ಸದಸ್ಯರಾದ ಎಂಟಿಬಿ ನಾಗರಾಜ್ ತಿಳಿಸಿದರು.
ಹೊಸಕೋಟೆ ತಾಲೂಕಿನ ಶಿವನಾಪುರ ಗ್ರಾಪಂ. ವ್ಯಾಪ್ತಿಯ ಮೋತಕದಹಳಿ ಗ್ರಾಮದಲ್ಲಿ ನಡೆದ ಶ್ರೀ
ರಾಧಾ ರುಕುಮಣಿ ಸಮೇತ ಶ್ರೀ ವೇಣುಗೋಪಾಲ ಸ್ವಾಮಿ ಜೀರ್ಣೋದ್ಧಾರ ಪ್ರತಿಷ್ಠಾಪನೆ ಹಾಗೂ ಶ್ರೀ ಮಹಾಗಣಪತಿ ಶ್ರೀ ಮಹಾಲಕ್ಷ್ಮಿ ಹಾಗೂ ನವಗ್ರಹಗಳ ಸ್ಥಿರ ಬಿಂಬ ವಿಮಾನ ಗೋಪುರ ಹಾಗೂ ಮಹಾ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮನುಷ್ಯನಲ್ಲಿ ಮಾನವೀಯ ಸದ್ಗುಣಗಳನ್ನು ಬೆಳೆಸುವ ಪುಣ್ಯ ಕ್ಷೇತ್ರಗಳು ದೇವಾಲಯ ಆಗಿರುವುದರಿಂದ, ನೆಮ್ಮದಿ ಸುಖ ಶಾಂತಿ ಪಡೆಯಲು ಎಲ್ಲರೂ ದೇವರ ಮೊರೆ ಹೋಗಬೇಕಾಗುತ್ತದೆ. ಪುರಾತನ ಕಾಲದಿಂದಲೂ ಹಿಂದೂ ಧರ್ಮದಲ್ಲಿ ದೇವಾಲಯಗಳಲ್ಲಿ ಮಾನವನಿಗೆ ಶಕ್ತಿ ಸಿಗುತ್ತದೆ. ದೇವಾಲಯಗಳಿಗೆ ಹೋಗುವುದರಿಂದ ಮನಸ್ಸು ಶುದ್ದವಾಗುತ್ತದೆ. ದೇವಸ್ಥಾನಗಳಿಂದ ಮನುಷ್ಯ ಶಾಂತಿ ನೆಮ್ಮದಿ ಕಾಣಬಹುದೆಂದು ಪ್ರತಿಯೊಂದು ಹಳ್ಳಿಯಲ್ಲಿಯೂ ಧಾರ್ಮಿಕ ಕಾರ್ಯಗಳು ನಡೆಯುತ್ತದೆ. ಮನುಷ್ಯನಿಗೆ ಸಮಸ್ಯೆಯಾದರೆ ಶಾಂತಿಗಾಗಿ
ಹುಡುಕುವುದು ದೇವರನ್ನು, ಆದ್ದರಿಂದ ದೇವಾಲಯಗಳು ಶಾಂತಿಗೆ ಪೂರಕ ವಾತಾವರಣ ನಿರ್ಮಿಸಬೇಕು. ದೇವಾಲಯಗಳಲ್ಲಿ ಆಡಂಬರಬೇಕಿಲ್ಲ ಎಂದು ಹೇಳಿದರು.
ಉದ್ಯಮಿ ಚಿಕ್ಕ ರೇವಣ್ಣ ಮಾತನಾಡಿ, ಆಧುನಿಕತೆ ಬೆಳೆದಂತೆ ಮೌಢ್ಯ ಇಂದಿನ ಯುವ ಸಮುದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ದೇವರ ಮೇಲಿನ ಭಯ ಇಲ್ಲದಂತಾಗಿದೆ. ದೇವರ ಅಪ್ಪಣೆ ಇಲ್ಲದೆ ಭೂಮಿಯ ಮೇಲೆ ಒಂದು ಹುಲ್ಲು ಕಡ್ಡಿ ಅಲುಗಾಡುವುದಿಲ್ಲ ಇದನ್ನು ಪ್ರತಿಯೊಬ್ಬರು ಅರಿತು ಕೊಂಡು ನ್ಯಾಯ ನೀತಿ ಧರ್ಮದ ಹಾದಿಯಲ್ಲಿ ನಡೆದು ಜೀವನ ಸಾಗಿಸುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುಳಾ ಮುನಿರಾಜು .ಮಾಜಿ ಅಧ್ಯಕ್ಷ ಕೆ ಸಿ ನಾರಾಯಣಪ್ಪ, ಗ್ರಾಮ ಪಂಚಾಯತಿ ಸದಸ್ಯರುಗಳಾದ ಶ್ರೀನಾಥ್ ನಂದಿನಿ ಚೆನ್ನಕೇಶವ. ಭಾಗ್ಯ ಮುನಿಕೃಷ್ಣಪ್ಪ ಮಾಜಿ ಸದಸ್ಯರಾದ ಪ್ರಸಾದ್. ಡಿ ಮಂಜುನಾಥ್ ಎಂ ಪಿ ಸಿ ಎಸ್ ಕಾರ್ಯದರ್ಶಿ ಎಂ ಎಂ ಮುನಿರಾಜು ಮುಖಂಡರದ ಎಂ ಎನ್ ಶ್ರೀನಿವಾಸ್ ಟ್ರಸ್ಟಿನ ಅಧ್ಯಕ್ಷರಾದ ರಾಜಣ್ಣ ಇನ್ನು ಅನೇಕ ಮುಖಂಡರುಗಳು ಭಾಗವಹಿಸಿದ್ದರು.