ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.11:
ಕೆಕೆಆರ್ಟಿಸಿ ಬಸ್ ಹಾಗೂ ಕಮಾಂಡರ್ ಜೀಪ್ ನಡುವೆ ಭೀಕರ ರಸ್ತೆೆ ಅಪಘಾತ ಸಂಭವಿಸಿ ಕಮಾಂಡರ್ ಜೀಪ್ ನಲ್ಲಿದ್ದ ಮೂರು ಜನ ಸಾವನ್ನಪ್ಪಿಿರುವ ಘಟನೆ ತಾಲೂಕಿನ ಹಡಗಿಲ್ ಹಾರುತಿ ಕ್ರಾಾಸ್ ಬಳಿ ನಡೆದಿದೆ.
ಅಜಲಪುರ ತಾಲ್ಲೂಕಿನ ತೆಲ್ಲುಣಗಿ ಗ್ರಾಾಮದ ನಿವಾಸಿಗಳಾದ ಡ್ರೈವರ್ಮಿಟ್ಟೆೆಸಾಬ್ (35), ಸುಲೋಚನಾ (70) ಹಾಗೂ ಚಂದ್ರಕಾಂತ್ (82) ಮೃತರು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇನ್ನೂ ಮೂರು ಜನರಿಗೆ ಗಾಯವಾಗಿದ್ದು, ಗಾಯಾಳುಗಳನ್ನ ಖಾಸಗಿ ಆಸ್ಪತ್ರೆೆಗೆ ದಾಖಲಿಸಿ ಚಿಕಿತ್ಸೆೆ ನೀಡಲಾಗುತ್ತಿಿದೆ.
ಕಲಬುರಗಿಯಿಂದ ಅಜಲಪುರ ಕಡೆಗೆ ಹೋರಟ್ಟಿಿದ ಕಮಾಂಡರ್ ಜೀಪ್ ಹಾಗೂ ಅಜಲಪುರದಿಂದ ಕಲಬುರಗಿ ಕಡೆಗೆ ಬರ್ತಿದ್ದ ಕೆಕೆಆರ್ಟಿಸಿ ಬಸ್ ನಡುವೆ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆೆ ಕಲಬುರಗಿ ಪೊಲೀಸ್ ಆಯುಕ್ತ ಡಾ.ಶರಣಪ್ಪ ಢಗೆ ಅವರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಖಾಸಗಿ ಆಸ್ಪತ್ರೆೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ಹಾಗೂ ಕಮಾಂಡರ್ ಜೀಪ್ ನಡುವೆ ಭೀಕರ ಅಪಘಾತ ; ಮೂವರ ಸಾವು

