ಸುದ್ದಿಮೂಲವಾರ್ತೆ
ಕೊಪ್ಪಳ ಆ 02: ನಗರದ ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯ ಹಾಗೂ ಮಾರ್ಗದರ್ಶಿ ಸ್ಟಡಿ ಸರ್ಕಲ್ ಇವರ ಸಹಯೋಗದಲ್ಲಿ ಎರಡು ದಿನಗಳ ಕಾಲ ಟಿ ಇ ಟಿ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭವು ಬುಧವಾರದಂದು ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದ ಸಭಾಭವನದಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೇರವೆರಿಸಿದ ಗ ವಿ ವ ಟ್ರಸ್ಟ ಕಾರ್ಯದರ್ಶಿ ಡಾ. ಆರ್.ಮರೇಗೌಡ ಮಾತನಾಡಿ ಯಾವ ವ್ಯಕ್ತಿಗಳು ಪರಿಪೂರ್ಣರಲ್ಲ. ನಿರಂತರ ಅಧ್ಯಯನ ಸತತ ಪ್ರಯತ್ನ ಮಾಡಿ ಜ್ಞಾನ ಗಳಿಸುವುದರ ಮೂಲಕ ಜೀವನದಲ್ಲಿ ಪರಿಪೂರ್ಣತೆ ಗಳಿಸಲು ಸಾಧ್ಯ. ಪ್ರಶಿಕ್ಷಣಾರ್ಥಿಗಳಲ್ಲಿ ಉತ್ತಮ ಮನೋಭಾವನೆಯನ್ನು ಬೆಳೆಸುವಲ್ಲಿ ಇಂತಹ ಪೂರ್ವ ಸಿದ್ಧತಾ ಕಾರ್ಯಗಾರಗಳು ಅತ್ಯಂತ ಮಹತ್ವಪೂರ್ಣ ವಹಿಸಲಿವೆ ಎಲ್ಲಾ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಸಕ್ರೀಯವಾಗಿ ಭಾಗವಹಿಸಿ ಎಂದು ಹೇಳಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗ ವಿ ವ ಟ್ರಸ್ಟ ಆಡಳಿತಾಧಿಕಾರಿ ಪ್ರೊ. ಎಸ್.ಎ.ಪಾಟೀಲ್ ಮಾತನಾಡಿ ಶಿಕ್ಷಣ ಮಹಾವಿದ್ಯಾಲಯವು ಉತ್ತಮ ಕಾರ್ಯಚಟುವಟಿಕೆ ಹಮ್ಮಿಕೊಂಡಿದ್ದು ಇದರ ಸದುಪಯೋಗ ಪಡೆದು ಹೆಚ್ಚು ವಿದ್ಯಾರ್ಥಿಗಳು ಟಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಎಂದು ಹೇಳಿದರು.
ಇರಕಲ್ಲಗಡದ ಸ.ಪ್ರ.ದ.ಕಾ. ಸಹಾಯಕ ಪ್ರಾಧ್ಯಾಪಕರಾದ ಶಂಕ್ರಯ್ಯ ಅಬ್ಬಿಗೇರಿಮಠ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸಂಸ್ಥೆಯ ಪ್ರಾಚಾರ್ಯರಾದ ಡಾ ಎಸ್.ಬಿ.ಕಂಬಾರ ಅವರು ಒಂದು ತಿಂಗಳ ಕಾಲ ನಡೆಯುವ ಕಾರ್ಯಾಗಾರದ ಸದುದ್ಧೇಶದ ಕುರಿತು ಮಾತನಾಡಿದರು.
ಸಮಾರಂಭದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಗಂಗಾಧರ ಸೊಪ್ಪಿಮಠ ಆನಂದರಾವ್ ದೇಸಾಯಿ, ಶೈಲಜಾ ಅರಳಲೇಮಠ, ನೀಲಾಂಭಿಕೆ ಹುದ್ಧಾರ,ಶ್ರೀಧರ ಪೂಜಾರಿ, ಕಾಂಚನಗಂಗಾ,ಶಿವಕುಮಾರ,ಜಂಭಯ್ಯ,ಅನಿತಾ,ದೇವೆAದ್ರ,ದೇವರಾಜ ಸೇರಿದಂತೆ ಪ್ರಥಮ ಹಾಗೂ ದ್ವಿತಿಯ ವರ್ಷದ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.ದೇವಿಕಾ ನಿರೂಪಿಸಿದರು.ಪೂಜಮ್ಮ ಪ್ರಾರ್ಥಿಸಿದರು.ಅಂದೇಶ ಸ್ವಾಗತಿಸಿದರು, ಪರಿಚಯಿಸಿದರು.ಶರಣಪ್ಪ ವಂದಿಸಿದರು.