ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.23:
ತಾವು ಸಿಎಂ ಆಗಿದ್ದಾಗ ಕಲಬುರಗಿ ಜಿಲ್ಲೆಯಲ್ಲಿ ಲಕ್ಷ ಜನರಿಗೆ ಉದ್ಯೋೋಗವಕಾಶ ಕಲ್ಪಿಿಸುವ ಮಹತ್ವದ ಪಿಎಂ ಮಿತ್ರ ಮೆಗಾ ಟೆಕ್ಸ್ ಟೈಲ್ ಪಾರ್ಕ್ಗೆ ಅಡಿಗಲ್ಲು ಹಾಕಲಾಗಿದೆ. ಆದರೆ, ರಾಜ್ಯ ಸರ್ಕಾರದ ಇಚ್ಚಾಾಶಕ್ತಿಿ ಕೊರತೆಯಿಂದ ಯೋಜನೆ ಸಾಕಾರಗೊಳ್ಳುತ್ತಿಿಲ್ಲ ಎಂದು ಮಾಜಿ ಮುಖ್ಯಮಂತ್ರಿಿ, ಸಂಸದ ಬಸವರಾಜ ಬೊಮ್ಮಾಾಯಿ ಅಸಮಾಧಾನ ಹೊರ ಹಾಕಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಮುಖವಾಗಿ ರಾಜ್ಯ ಸರ್ಕಾರದ ಆಸಕ್ತಿಿ ಮೇರೆಗೆ ಆ್ಯಂಕರ್ ಇಂಡಸ್ಟ್ರೀಸ್ ಬರಬೇಕಿತ್ತು. ಭೂಮಿ ಸಹ ನೀಡಲಾಗಿದ್ದರೂ ಜತೆಗೆ ಕಾರ್ಯಾರಂಭಕ್ಕೆೆ ಅಂತಹ ಅಡ್ಡಿಿ ಆತಂಕಗಳಿರಲಿಲ್ಲ. ಈ ಕುರಿತು ಈಗಾಗಲೇ ರಾಜ್ಯದ ಜವಳಿ ಸಚಿವ ಶಿವಾನಂದ ಪಾಟೀಲ್ ಅವರೊಂದಿಗೆ ಮಾತನಾಡಲಾಗಿದೆ. ಪ್ರಮುಖವಾಗಿ ತಾವು ಸಂಸತ್ತಿಿನ ಕಾರ್ಮಿಕ, ಜವಳಿ ಮತ್ತು ಕೌಶಾಲ್ಯಾಾಭಿವೃದ್ದಿ ಸ್ಥಾಾಯಿ ಸಮಿತಿ ಅಧ್ಯಕ್ಷರಾಗಿದ್ದು, ಹೀಗಾಗಿ ಮುಂದಿನ ತಿಂಗಳು ಬೆಂಗಳೂರಿನಲ್ಲಿ ಇದಕ್ಕೆೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಸಚಿವರಾದ ಶಿವಾನಂದ ಪಾಟೀಲ್, ಕೌಶಲ್ಯಾಾಭಿವೃದ್ಧಿಿ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಕೇಂದ್ರದ ಜವಳಿ ಸಚಿವಾಲಯದ ಹಿರಿಯ ಅಧಿಕಾರಿಗಳು ಹಾಗೂ ರಾಜ್ಯದ ಅಧಿಕಾರಿಗಳು ಪಾಲ್ಗೊೊಳ್ಳಲಿದ್ದು, ಇಲ್ಲಿಯವರೆಗೆ ಆಗಿರುವ ಕಾರ್ಯ ಪರಿಶೀಲನೆ ಜತೆಗೆ ಮುಂದೆ ಆಗಬೇಕಿರುವ ಕಾರ್ಯಗಳ ಕುರಿತಾಗಿ ಅವಲೋಕನ ನಡೆಸಲಾಗುವುದು. ರಾಜ್ಯ ಸರ್ಕಾರ ತನ್ನ ಕಾರ್ಯಗಳನ್ನು ಪೂರ್ಣಗೊಳಿಸಿದ್ದಲ್ಲಿ ಕೇಂದ್ರ ಸರ್ಕಾರ ತನ್ನೆೆಲ್ಲ ಸೌಕರ್ಯಗಳನ್ನು ಕಲ್ಪಿಿಸಿ ಯೋಜನೆ ಸಂಪೂರ್ಣ ಕಾರ್ಯಕ್ಕೆೆ ಕೈ ಜೋಡಿಸುತ್ತದೆ ಎಂದು ತಿಳಿಸಿದರು.
ಎಲ್ಲೆ ಮೀರಿದ ಅಕ್ರಮ:
ರಾಜ್ಯದಲ್ಲಿ ಅಕ್ರಮಗಳು ಸಹ ವ್ಯಾಾಪಕಗೊಂಡು ಸಮಾಜದ ಸ್ವಾಾಸ್ಥ್ಯ ಹಾಳಾಗುತ್ತಿಿದೆ. ಅಕ್ರಮ ಮದ್ಯ ಎಲ್ಲೆಡೆ ಮಾರಾಟ ಒಂದೆಡೆಯಾದರೆ, ಮಟಕಾ ಜೂಜಾಟಕ್ಕೆೆ ಅಂಕೆ ಇಲ್ಲದಂತಾಗಿದೆ. ಪೊಲೀಸರೇ ಮುಂದೆ ನಿಂತು ಇದನ್ನೆೆಲ್ಲ ಮಾಡಿಸುತ್ತಿಿದ್ದಾರೆ ಹಾಗೂ ದಂಧೆಯಲ್ಲಿ ಪಾಲ್ಗೊೊಳ್ಳುತ್ತಿಿದ್ದಾರೆ. ವರ್ಗಾವಣೆಗೆ ಹಣ ಕ್ರೋೋಢೀಕರಿಸಲು ಪೊಲೀಸರು ಇಂತಹ ಅಕ್ರಮಗಳನ್ನು ತಡೆಯಲು ಮುಂದಾಗುತ್ತಿಿಲ್ಲ ಎಂದು ಬೊಮ್ಮಾಾಯಿ ಕಿಡಿ ಕಾರಿದರು.
ಕೇಂದ್ರದ 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆೆ ಅನುದಾನ ಬಂದಿಲ್ಲ ಹಾಗೂ ಜೆಜೆಎಂ ಕಾಮಗಾರಿಗೂ ಹಣ ಬಂದಿಲ್ಲ ಎನ್ನಲಾಗುತ್ತದೆ. ಆದರೆ ವಾಸ್ತವವಾಗಿ ಅನುದಾನ ಬಳಕೆ ಪ್ರಮಾಣ ಪತ್ರ ಸಮರ್ಪಕವಾಗಿ ಸಲ್ಲಿಸಿಲ್ಲ ಎಂದು ಮಾಜಿ ಸಿಎಂ ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಡಾ. ಉಮೇಶ ಜಾಧವ್, ಶಾಸಕರಾದ ಬಸವರಾಜ ಮತ್ತಿಿಮಡು, ಶರಣು ಸಲಗರ, ಡಾ. ಸಿದ್ದು ಪಾಟೀಲ್, ಮಾಜಿ ಶಾಸಕರಾದ ದತ್ತಾಾತ್ರೇೇಯ ಪಾಟೀಲ್ ರೇವೂರ, ಬಿಜೆಪಿ ಕಲಬುರಗಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಸೇರಿದಂತೆ ಮುಂತಾದವರಿದ್ದರು.
ಕಲಬುರಗಿಯಲ್ಲಿ ಟೆಕ್ಸ್ ಟೈಲ್ ಪಾರ್ಕ್ ಮುಂದಿನ ತಿಂಗಳು ಉನ್ನತ ಮಟ್ಟದ ಸಭೆ: ಬಸವರಾಜ ಬೊಮ್ಮಾಾಯಿ

