ಸುದ್ದಿಮೂಲ ವಾರ್ತೆ ಹೊಸಪೇಟೆ, ಡಿ.09:
ತುಂಗಭದ್ರಾಾ ಜಲಾಶಯದ 33 ಕ್ರಸ್ಟ್ ಗೇಟ್ಗಳ ಪೈಕಿ 18 ನೇ ನಂಬರ್ ಗೇಟ್ನ್ನು ಯಶ್ವಸಿಯಾಗಿ ತೆರವುಗೊಳಿಸಿದ ಬಳಿಕ ಇದೀಗ 20 ನೇ ಗೇಟ್ ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ.ತುಂಗಭದ್ರಾಾ ಮಂಡಳಿ ಈ ಕಾರ್ಯ ಕೈಗೆತ್ತಿಿಕೊಂಡಿದೆ ಎಂದು ಮಂಡಳಿಯ ಅಧಿಕೃತ ಮೂಲಗಳು ತಿಳಿಸಿವೆ.
ಉಳಿದ ಗೇಟ್ ಗಳನ್ನು ಹಂತ, ಹಂತವಾಗಿ ತೆರವುಗೊಳಿಸಿದ ಬಳಿಕ ಹೊಸ ಗೇಟ್ ಅಳವಡಿಸಲು ಮಂಡಳಿ ನಿರ್ಧರಿಸಿದೆ. ಪ್ರಸ್ತುತ ಜಲಾಶಯದಲ್ಲಿ 63.998 ಟಿಎಂಸಿ ನೀರು ಸಂಗ್ರಹ ಇದೆ. ಈ ನೀರನ್ನು ಕಡಿಮೆಗೊಳಿಸಿ, 43 ಟಿಎಂಸಿ ಮಟ್ಟಕ್ಕೆೆ ತರ ಬೇಕಿದೆ. ಆಗ ಗೇಟಿನ ಪೂರ್ಣ ಭಾಗ ತೆರವುಗೊಳಿಸಲು ಸಾಧ್ಯವಾಗಲಿದೆ. ಈ ಹಿನ್ನೆೆಲೆಯಲ್ಲಿ ಜಲಾಶಯದ ನೀರಿನ ಮಟ್ಟ ಇಳಿಸುವ ಕುರಿತು ರಾಜ್ಯ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳ ಸೂಪರಿಂಟೆಂಡಿಂಗ್ ಎಂಜಿನಿಯರ್ಗಳ ಮಟ್ಟದ ವರ್ಚುವಲ್ ಸಭೆಯನ್ನು ಮಂಗಳವಾರ ನಡೆಸಲಾಯಿತು.
ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ಆಯಾ ರಾಜ್ಯಗಳಿಗೆ ಹರಿಸಬಹುದಾದ ನೀರನ್ನು ಕಾಲುವೆ ಹಾಗೂ ನದಿಯ ಮೂಲಕ ಹರಿಸಲು ಸಭೆ ನಿರ್ಣಯ ಕೈಗೊಂಡಿತು. ಆಯಾ ರಾಜ್ಯಗಳ ಅಗತ್ಯಕ್ಕೆೆ ಅನುಗುಣವಾಗಿ ಕುಡಿಯುವ ನೀರನ್ನು ಬಿಡುಗಡೆ ಮಾಡಲು ಸಹ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯ ತೀರ್ಮಾನದಂತೆ ಮೊದಲ ಹಂತದಲ್ಲಿ ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಿಗೆ ಜಲಾಶಯದಿಂದ ನದಿಯ ಮೂಲಕ 5500 ಕ್ಯೂಸೆಕ್ ನೀರು ಇಂದು ಹರಿಸಲಾಗಿದೆ. ಡಿ.20ರಿಂದ ಹಳೇ ಗೇಟ್ ತೆರವು ಸೇರಿದಂತೆ ಹೊಸಗೇಟ್ ಅಳವಡಿಕೆಗೆ ಕಾರ್ಯ ಚುರುಕುಗೊಳ್ಳಲಿದೆ ಎಂದು ಮಂಡಳಿಯ ಅಧಿಕೃತ ಮೂಲಗಳು ತಿಳಿಸಿವೆ.

