ಸುದ್ದಿಮೂಲ ವಾರ್ತೆ ರಾಯಚೂರು, ಅ.15:
ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಆಯೋಗದ ರಾಜ್ಯ ಮಾಹಿತಿ ಆಯುಕ್ತರಾಗಿ ರಾಯಚೂರಿನ ಸುದ್ದಿಮೂಲ ಪತ್ರಿಿಕೆ ಪ್ರಧಾನ ವರದಿಗಾರ ಬಿ.ವೆಂಕಟಸಿಂಗ್ ಸೇರಿ ಮೂವರು ನೇಮಕವಾಗಿದ್ದಾರೆ.
ಅವರೊಂದಿಗೆ ನಿವೃತ್ತ ಐಎಎಸ್ ಅಧಿಕಾರಿ ವಿನ್ಸಂಟ್ ಡಿಸೋಜಾ ಮತ್ತು ವಿಧಾನ ಪರಿಷತ್ ಸಭಾಪತಿಯವರ ವಿಶೇಷ ಕರ್ತವ್ಯಾಾಧಿಕಾರಿ ಮಹೇಶ ವಾಳ್ವೇಕರ ನೇಮಕಗೊಂಡಿದ್ದಾರೆ.
ನಾಳೆ ಬೆಳಿಗ್ಗೆೆ 10:30ಕ್ಕೆೆ ರಾಜ ಭವನದಲ್ಲಿ ರಾಜ್ಯಪಾಲ ಥಾವರ್ಚಂದ ಗೆಹ್ಲೋೋಟ್ ಅವರು ಈ ಮೂರು ಜನ ರಾಜ್ಯ ಮಾಹಿತಿ ಆಯುಕ್ತರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
ರಾಯಚೂರಿನ ಹಿರಿಯ ಪತ್ರಕರ್ತರಾಗಿರುವ ಬಿ.ವೆಂಕಟಸಿಂಗ್ ಅವರು ಕಲ್ಯಾಾಣ ಕರ್ನಾಟಕ ಭಾಗದಲ್ಲಿ ಪ್ರಥಮರಾಗಿ ರಾಜ್ಯದ ಮಾಹಿತಿ ಆಯೋಗದ ಆಯುಕ್ತರಾದ ಕೀರ್ತಿ ಸಲ್ಲುತ್ತದೆ.
ಸುದ್ದಿಮೂಲದ ಮೂಲಕ ಪತ್ರಕರ್ತ ವೃತ್ತಿಿ ಜೀವನ ಆರಂಭಿಸಿದ ಅವರು ಕಳೆದ 38 ವರ್ಷಗಳಿಂದ ಸುದ್ದಿಮೂಲ ಪ್ರಧಾನ ವರದಿಗಾರರಾಗಿ, ದೂರದರ್ಶನ ವರದಿಗಾರರಾಗಿ ಆಕಾಶವಾಣಿಯ ರಾಯಚೂರು ಜಿಲ್ಲೆೆಯ ವರದಿಗಾರರಾಗಿ ಕಳೆದ 38 ವರ್ಷಗಳಿಂದ ಸೇವೆ ಸಲ್ಲಿಸುತ್ತಿಿರುವ ಅವರು, ಎರಡು ಬಾರಿ ಮಾಧ್ಯಮ ಅಕಾಡೆಮಿ, ಮಾಧ್ಯಮ ಮಾನ್ಯತಾ ಸಮಿತಿ ಸದಸ್ಯರಾಗಿ ಒಂದು ಬಾರಿ ಸೇವೆ ಸಲ್ಲಿಸಿದ್ದಾರೆ.
ಅವರು ಮಾಧ್ಯಮ ಆಕಾಡೆಮಿ ಪ್ರಶಸ್ತಿಿ ಪುರಸ್ಕೃತರಾಗಿ, ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಸಮಿತಿಯ ಎರಡು ಅವಧಿಗೆ ಕಾರ್ಯದರ್ಶಿಯಾಗಿ, ಎರಡು ಬಾರಿ ಸದಸ್ಯರಾಗಿ, ರಾಯಚೂರು ಜಿಲ್ಲಾ ಅಧ್ಯಕ್ಷರಾಗಿ ಎರಡು ಬಾರಿ, ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷರಾಗಿ ಎರಡು ಬಾರಿ ಹಾಗೂ ಅಖಿಲ ಭಾರತ ಮಟ್ಟದ ಐಎ್ಡಬ್ಲುಜೆ ಪತ್ರಕರ್ತರ ಸಂಘಕ್ಕೆೆ ಎರಡು ಬಾರಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ರಾಯಚೂರು ಜಿಲ್ಲೆೆಯಲ್ಲಿನ ನೀರಾವರಿ, ಜ್ವಲಂತ ಸಮಸ್ಯೆೆಗಳ ಮೇಲೆ ಬೆಳಕು ಚೆಲ್ಲುವ ವರದಿಗಳ ಮಾಡಿ ಸಂಬಂಧಿಸಿದ ಸಚಿವರ, ಸರ್ಕಾರದ ಗಮನ ಸೆಳೆದು ಕೆಲವುಗಳಿಗೆ ಪರಿಹಾರ ಕೊಡಿಸಿದ ಉದಾಹರಣೆಗಳಿವೆ.
ಪತ್ರಕರ್ತ ಬಿ.ವೆಂಕಟಸಿಂಗ್ ಸೇರಿ ಮೂವರು ಮಾಹಿತಿ ಆಯುಕ್ತರ ನೇಮಕ
