ಸುದ್ದಿಮೂಲ ವಾರ್ತೆ ಮಸ್ಕಿಿ, ಅ.24:
ಈಗಷ್ಟೇ ಕನಸು ಕಟ್ಟಿಿಕೊಂಡು ಬದುಕು ನಡೆಸುವ ಉತ್ಸಾಾಹದಲ್ಲಿದ್ದ ಮಸ್ಕಿಿಯ 22 ವರ್ಷದ ಯುವಕ ಆರ್ಯನ್ ವಸದ್ ಹುಟ್ಟು ಹಬ್ಬದ ದಿನದಂದೆ ಇಹಲೋಕ ತ್ಯಜಿಸಿದ್ದು ಆತನ ಕುಟುಂಬ ಮಾತ್ರ ಸಾವಿನಲ್ಲೂ ಸಾರ್ಥಕತೆ ಸಾರುವ ನಿರ್ಧಾರ ಮಾಡಿ ಮಾದರಿಯಾಗಿದೆ.
ಮಸ್ಕಿಿ ಪಟ್ಟಣದ ನಿವಾಸಿಗಳಾಗಿರುವ ಹೇಮಲತಾ ಮತ್ತು ಗವಿಸ್ವಾಾಮಿ ದಂಪತಿಗಳ ಕಿರಿಯ ಪುತ್ರ ಆರ್ಯನ್ ವಸದ್ ಗವಿಸ್ವಾಾಮಿ ಮೂಲತಃ ಕೊಪ್ಪಳ ಜಿಲ್ಲೆ ಕನಕಗಿರಿಯವರು.
ತಾಯಿ ಹೇಮಲತಾ ಮಸ್ಕಿಿ ಗ್ರಾಾಮದವರು. ಇವರ ಪುತ್ರ ಆರ್ಯನ್ ವಸದ್ ಓದಿದ್ದು ಡಿಪ್ಲೊೊಮ ಇನ್ ಅನಿಮೇಷನ್ ಕೋರ್ಸ್. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋೋಗ ಮಾಡುತ್ತ ಹೊಟೇಲ್ ಉದ್ಯಮ ಆರಂಭಿಸುವ ಕನಸು ಹೊತ್ತಿಿದ್ದ , ಅದು ನನಸಾಗುವ ಮೊದಲೇ ಪ್ರಾಾಣ ಪಕ್ಷಿಿ ಹಾರಿ ಹೋಗಿದೆ.
ಕಳೆದ ಹದಿನೈದು ದಿನಗಳ ಹಿಂದಷ್ಟೆೆ ಸ್ನೇಹಿತರೊಡಗೂಡಿ ಬೈಕ್ ಮೇಲೆ ಗೋವಾ ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ಹಿಂತಿರುಗುತ್ತಿಿದ್ದಾಗ ಹಾಸನದಲ್ಲಿ ಅಪಘಾತವಾಗಿ ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆೆಗೆ ದಾಖಲಾಗಿದ್ದ. ಬೆನ್ನುಹುರಿಗೆ ಬಲವಾದ ಪೆಟ್ಟು ಬಿದ್ದು ಮೂಳೆ ಮುರಿದು ಹೋಗಿ ಕೋಮಾದಲ್ಲಿದ್ದಾಾನೆ ಎಂದು ವೈದ್ಯರು ಹದಿನೈದು ದಿನಗಳಿಂದ ಚಿಕಿತ್ಸೆೆ ನೀಡಿ ಎಲ್ಲಾ ರೀತಿಯ ಪ್ರಯತ್ನ ಮಾಡಿದಾಗಲೂ ಜೀವ ಉಳಿಸಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆೆ ಬಂದಿದ್ದರು.
ತಂದೆ ತಾಯಿ ಹೃದಯ ಗಟ್ಟಿಿಮಾಡಿಕೊಂಡು ಮಗನ ಜೀವ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಮಗನ ವಿವಿಧ ಅಂಗಾಂಗಗಳಾದರೂ ಇನ್ನೊೊಬ್ಬರಿಗೆ ಸಹಾಯವಾಗುವ ಮುಖಾಂತರ ಮಗನ ಮರು ಹುಟ್ಟು ಆಗಲಿ ಎಂಬ ನಿರ್ಧಾರ ತೆಗೆದುಕೊಂಡಿರುವುದು ಪುತ್ರ ಶೋಕದ ಮಧ್ಯೆೆಯೂ ಇಡೀ ರಾಜ್ಯಕ್ಕೆೆ ಮಾದರಿಯಾಗಿ ನಿಂತಿದ್ದಾಾರೆ.
ಆರ್ಯನ್ ವಸದ್ನ ಕಣ್ಣು, ಕಿಡ್ನಿಿ, ಲಿವರ್ ಮತ್ತು ಪ್ಯಾಾಂಕ್ರಿಿಯಾಸ್ ಅನ್ನು ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆೆಗೆ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಆರ್ಯನ್ ವಸದ್ ಅಗಲಿಕೆಯಿಂದ ಕುಟುಂಬದವರಲ್ಲಿ ದುಃಖ ಮಡುಗಟ್ಟಿಿತ್ತು. ಆರ್ಯನ್ ವಸದ್ನ ಅಂತಿಮ ಸಂಸ್ಕಾಾರ ಆತನ ಹುಟ್ಟೂರಾದ ಕನಕಗಿರಿಯಲ್ಲಿ ಶನಿವಾರ ಜರುಗಲಿದೆ ಎಂದು ಕುಟುಂಬ ವರ್ಗ ತಿಳಿಸಿದೆ.
ಒಟ್ಟಾಾರೆ, ಮಗನ ಕಳೆದುಕೊಂಡ ದುಃಖದಲ್ಲಿದ್ದರೂ ತಂದೆತಾಯಿ ಇಬ್ಬರೂ ಮಗನ ಕನಸನ್ನು ಮತ್ತೊೊಬ್ಬರಲ್ಲಿ ಕಾಣೋಣ ಎಂಬ ಮಹತ್ತರ ಆಶಯದೊಂದಿಗೆ ತೆಗೆದುಕೊಂಡ ನಿರ್ಧಾರಕ್ಕೆೆ ಜೈ ಎನ್ನಲೇಬೇಕು.

