ಸುದ್ದಿಮೂಲ ವಾರ್ತೆ ಬೆಂಗಳೂರು, ನ.13:
ರಾಯಚೂರು ಜಿಲ್ಲೆಯ ಮಾನ್ವಿಿ ತಾಲೂಕಿನ ಮದ್ಲಾಾಪುರ ಏತ ನೀರಾವರಿ ಯೋಜನೆ ಅಡಿ ಉಳಿದಿರುವ ಬಾಕಿ ಕೆಲಸ ಹಾಗೂ ನೀರಾವರಿ ಯೋಜನೆಯ ಪುನರುಜ್ವೀವನ ಕಾಮಗಾರಿ ಕೈಗೊಳ್ಳಲು 21 ಕೋಟಿ ರೂ. ಮೊತ್ತ ಬಿಡುಗಡೆ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಸಚಿವ ಸಂಪುಟ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಿಯಲ್ಲಿ ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆೆ ಮಾಹಿತಿ ನೀಡಿದರು.
ಈ ಯೋಜನೆಯಡಿ ತುಂಗಭದ್ರ ಎಡದಂಡೆ ನಾಲೆಯ ವಿತರಣಾ ನಾಲೆ ನಂ.85 ರಡಿ ಬರುವ ಭಾದಿತ ಅಚ್ಚುಕಟ್ಟು ಪ್ರದೇಶದಲ್ಲಿ 1154 ಹೆಕ್ಟೇರ್ಪ್ರದೇಶಕ್ಕೆೆ ತುಂಗಭದ್ರ ನದಿಯಿಂದ ಮದ್ಲಾಾಪುರ ಕೆರೆಗೆ ಏತ ನೀರಾವರಿ ಯೋಜನೆಯ ಮೂಲಕ ನೀರು ತುಂಬಿಸಿ ನೀರಾವರಿ ಸೌಲಭ್ಯ ಕಲ್ಪಿಿಸಲು ಉದ್ದೇಶಿಸಲಾಗಿದೆ. ಅಲ್ಲದೆ ಅಂತರ್ಜಲ ಮಟ್ಟವು ಅಭಿವೃದ್ಧಿಿಯಾಗುವುದಾಗಿ ಪ್ರಸ್ತಾಾಪಿಸಲಾಗಿತ್ತು. ಈ ಬಗ್ಗೆೆ ಚರ್ಚೆ ನಡೆದು ಕಾಮಗಾರಿಗೆ ಅನುಮೋದನೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮದ್ಲಾಾಪುರ ಏತ ನೀರಾವರಿ ಯೋಜನೆಯ ಅಚ್ಚುಕಟ್ಟು ಪ್ರದೇಶ ಒಣ ಭೂಮಿಯಾಗಿದೆ. ಅಲ್ಲದೆ ಮಳೆಯನ್ನೇ ಆಶ್ರಯಿಸಿದೆ. ಅಂತರ್ಜಲ ಕೂಡ ಕುಸಿದಿರುವ ಹಿನ್ನೆೆಲೆಯಲ್ಲಿ ತುಂಗಭದ್ರ ನಾಲೆಯಿಂದ ನೀರು ಹರಿಸಿ ಆ ಮೂಲಕ ಒಣ ಪ್ರದೇಶವನ್ನು ನೀರಾವರಿ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ ಎಂದರು.
ಗೌರಮ್ಮ ಬಂಡಿ ಏತ ನೀರಾವರಿಗೆ ಅಧಿಕ ಅನುದಾನ:
ರಾಯಚೂರು ಜಿಲ್ಲೆ, ಮಾನ್ವಿಿ ತಾಲ್ಲೂಕಿನ ದದ್ದಲ್ ಗ್ರಾಾಮದ (ಗೌರಮ್ಮ ಬಂಡಿ) ಏತ ನೀರಾವರಿ ಯೋಜನೆಯ ಬಾಕಿ ಕೆಲಸಗಳು ಹಾಗೂ ಪುನರುಜ್ಜೀವನ ಕಾಮಗಾರಿಗಳನ್ನು ರೂ.34.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
ತುಂಗಭದ್ರ ಎಡದಂಡೆ ನಾಲೆಯ ವಿತರಣಾ ನಾಲೆ ನಂ.89/9/1 ರಡಿ ಕೊನೆ ಭಾಗದಲ್ಲಿ ಬರುವ ಬಾಧಿತ ಅಚ್ಚುಕಟ್ಟು ಪ್ರದೇಶದಲ್ಲಿ ದದ್ದಲ್, ಕೊರವಿ ಮತ್ತು ಸಾದಾಪುರ ಗ್ರಾಾಮಗಳಿಗೆ ಸೇರಿದ 3,500 ಎಕರೆ ಪ್ರದೇಶಕ್ಕೆೆ ನೀರಾವರಿ ಸೌಲಭ್ಯ ಕಲ್ಪಿಿಸಲು ಉದ್ದೇಶಿಸಲಾಗಿದೆ ಎಂದರು ಸಚಿವರು ಮಾಹಿತಿ ನೀಡಿದರು.
ಭಾಲ್ಕಿಿ ಇನ್ನು ಮುಂದೆ ನಗರಸಭೆ:
ಬೀದರ್ ಜಿಲ್ಲೆಯ ಭಾಲ್ಕಿಿ ಪುರಸಭೆಯನ್ನು ಮೇಲ್ದರ್ಜೆಗೇರಿಸಿ ನಗರ ಸಭೆಯನ್ನಾಾಗಿ ರಚಿಸಲು ಸಚಿವ ಸಂಪುಟ ಸಭೆ ನಿರ್ಣಯಿಸಿದೆ. ಕರ್ನಾಟಕ ಪೌರಸಭೆಗಳ ಕಾಯ್ದೆೆ 1964ರ ಕಲಂ-3, 9 ಮತ್ತು 361 ರನ್ವಯ ಶೆಡ್ಯೂಲ್-ಎ ರಲ್ಲಿ ಒಳಗೊಂಡ ಪ್ರದೇಶ ಹಾಗೂ ಶೆಡ್ಯೂಲ್-ಬಿ ರಲ್ಲಿ ಆ ಪ್ರದೇಶದ ಗಡಿರೇಖೆ ಗುರುತಿಸಿರುವಂತೆ ಬೀದರ್ ಜಿಲ್ಲೆಯ ಭಾಲ್ಕಿಿ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಿ ಭಾಲ್ಕಿಿ ನಗರಸಭೆ ಪ್ರದೇಶವೆಂದು ಉದ್ಘೋೋಷಿಸಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ಬೀದರ್ ಜಿಲ್ಲೆಯ ಭಾಲ್ಕಿಿ ಪುರಸಭೆಯಲ್ಲಿ 2011ರ ಜನಗಣತಿ ಪ್ರಕಾರ 40,333 ಜನಸಂಖ್ಯೆೆ ಇದ್ದು, 14.71 ಚ.ಕಿ.ಮೀ ವಿಸ್ತೀರ್ಣ ಇರುತ್ತದೆ ಮತ್ತು ಜನಸಾಂದ್ರತೆ ಪ್ರತಿ ಚ.ಕಿ.ಮೀ.ಗೆ 2,741 ಇದ್ದು, ಕೃಷಿಯೇತರ ಚಟುವಟಿಕೆಗಳು ಶೇ.73 ರಷ್ಟು ಇರುತ್ತದೆ. ಆದ್ದರಿಂದ ಭಾಲ್ಕಿಿ ಪುರಸಭೆಯನ್ನು ನಗರಸಭೆಯನ್ನಾಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾಾಪಿಸಲಾಗಿತ್ತು. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆೆ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಕಮಲನಗರ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆ:
ಬೀದರ್ ಜಿಲ್ಲೆಯ ಕಮಲ ನಗರ ಗ್ರಾಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿಯಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಕರ್ನಾಟಕ ಪೌರಸಭೆಗಳ ಕಾಯ್ದೆೆ 1964ರ ಕಲಂ-3, 4, 9, 349, 350, 351 ಮತ್ತು 355 ರನ್ವಯ ಶೆಡ್ಯೂಲ್-ಎ ರಲ್ಲಿ ಒಳಗೊಂಡ ಪ್ರದೇಶ ಹಾಗೂ ಶೆಡ್ಯೂಲ್-ಬಿ ರಲ್ಲಿ ಆ ಪ್ರದೇಶದ ಗಡಿರೇಖೆ ಗುರುತಿಸಲಾಗಿರುವಂತೆ ಬೀದರ್ ಜಿಲ್ಲೆಯ ಕಮಲನಗರ ಗ್ರಾಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯನ್ನು ರಚಿಸಿ ಸದರಿ ಪ್ರದೇಶವನ್ನು ಕಮಲನಗರ ಪಟ್ಟಣ ಪಂಚಾಯಿತಿ ಎಂದು ಉದ್ಘೋೋಷಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ಕಮಲನಗರ ಗ್ರಾಾಮ ಪಂಚಾಯಿತಿಯಲ್ಲಿ 2011ರ ಜನಗಣತಿ ಅನ್ವಯ 12,494 ಜನ ಸಂಖ್ಯೆೆ ಇದೆ. ಗ್ರಾಾಮ 22.67 ಚ.ಕಿ.ಮೀ ವಿಸ್ತೀರ್ಣ ಹೊಂದಿದೆ. ಜನಸಾಂದ್ರತೆ ಪ್ರತಿ ಚ.ಕಿ.ಮೀಗೆ 551 ಇದೆ. ಇಲ್ಲಿ ಕೃಷಿಯೇತರ ಚಟುವಟಿಕೆಗಳು ಶೇ.60ರಷ್ಟು ಇರುವುದರಿಂದ ಬೀದರ್ ಜಿಲ್ಲೆಯ ಕಮಲನಗರ ಗ್ರಾಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾಾಪಿಸಲಾಗಿತ್ತು. ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಪಟ್ಟಣ ಪಂಚಾಯಿತಿಯಾಗಿ ಘೋಷಿಸಲಾಯಿತು ಎಂದು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

