ವೆಂಕಟೇಶ ಹೂಗಾರ ರಾಯಚೂರು, ಡಿ.09:
ರಾಯಚೂರು ನಗರದಲ್ಲಿ ಬೀದಿ ನಾಯಿಗಳ ಹಾವಳಿಗೆ ಹೈರಾಣಾಗಿರುವ ನಾಗರಿಕರ ಬವಣೆ ತಪ್ಪಿಿಸಲು ಮುಂದಾಗಿರುವ ಮಹಾನಗರ ಪಾಲಿಕೆ ಬೀದಿ ನಾಯಿಗಳ ಆಶ್ರಯಣ ತಾಣ ನಿರ್ಮಿಸಲು ಮುಂದಾಗಿದೆ.
ನಗರದ ಬಹುತೇಕ ವಾರ್ಡ್ಗಳಲ್ಲಿ ಬೀದಿ ನಾಯಿಗಳ ಗುಂಪು, ಜನರ, ಹಿರಿಯರ, ಮಕ್ಕಳ ಮೇಲೆ ದಾಳಿಯಿಂದ ನಲುಗಿದ ಜನರ ಆಕ್ರೋೋಶಕ್ಕೆೆ ಪಾಲಿಕೆ ಮಣಿದಿದೆ.ಅಲ್ಲದೆ, ಸುಪ್ರೀಂ ಕೋರ್ಟ್ ಆದೇಶದಂತೆ ಅದಕ್ಕೊೊಂದು ಪರಿಹಾರ ಹುಡುಕಲು ಮುಂದಾಗಿದೆ.
ಬೀದಿ ನಾಯಿಗಳ ಹಾವಳಿಯಿಂದ ಅನೇಕರಿಗೆ ಗಾಯಗಳಾಗಿವೆ, ದಾಳಿಗೆ ಮಕ್ಕಳು ನಲುಗಿ ಆಸ್ಪತ್ರೆೆಗಳಿಗೆ ದಾಖಲಾಗಿ ಚಿಕಿತ್ಸೆೆ ಪಡೆದದ್ದು ಆಗಿದೆ. ನಾಯಿಗಳ ಗುಂಪೊಂದು ಗುದ್ದಾಾಟುತ್ತ ಬಂದು ಎರಗಿದ್ದರಿಂದ ಓರ್ವ ಯುವತಿ ಸಾವನ್ನಪ್ಪಿಿದ್ದಾಾಳೆ ಎಂಬ ಆಪಾದನೆ ಪೊಲೀಸ್ ಠಾಣೆ ಮೆಟ್ಟಿಿಲು ಹತ್ತಿಿತ್ತುಘಿ. ಅಲ್ಲದೆ, ನಾಯಿಗಳ ದಾಳಿಯಿಂದ ಸಾವನ್ನಪ್ಪಿಿಲ್ಲ ಎಂಬ ವರದಿಯೂ ಬಂದು ಗಾಬರಿಯಿಂದ ಸಾವನ್ನಪ್ಪಿಿರಬಹುದು ಎಂದು ಅಂದಾಜಿಸಿದ್ದೂ ಆಗಿದೆ.
ಇಷ್ಟೆೆಲ್ಲ ಸಮಸ್ಯೆೆಘಿ, ಆತಂಕಗಳ ಮಧ್ಯೆೆಯೂ ಪಾಲಿಕೆಯ ಆಡಳಿತ ಮಂಡಳಿ, ಆಯುಕ್ತರು, ಅಧಿಕಾರಿಗಳು ಬೀದಿ ನಾಯಿಗಳ ಹಿಡಿದು ದೂರ ಸಾಗಣೆಯ ಒತ್ತಾಾಯಕ್ಕೆೆ ಆರಂಭದಲ್ಲಿ ಮಣಿದರೂ ಅದಕ್ಕೆೆ ಪ್ರಾಾಣಿದಯ ಸಂಘ, ನ್ಯಾಾಯಾಲಯಗಳ ಆದೇಶದ ಹಿನ್ನೆೆಲೆಯಲ್ಲಿ ಅವುಗಳಿಗೆ ಸಂತಾನ ಹರಣ ಚಿಕಿತ್ಸೆೆಯ ನಿಯಮ ಪಾಲಿಸಿದೆ.
ಅಲ್ಲದೆ, ಸುಪ್ರೀಂ ಕೋರ್ಟ್ ನವೆಂಬರ್ 17ರಂದು ಸ್ವತಂತ್ರ ದೂರು ವಿಚಾರಣೆಯ ಅನ್ವಯ ನೀಡಿದ ಮಹತ್ವದ ತೀರ್ಪಿನ ಅನ್ವಯ ಎಚ್ಚೆೆತ್ತ ರಾಯಚೂರು ಮಹಾನಗರ ಪಾಲಿಕೆ ಬೀದಿ ನಾಯಿಗಳ ಹಾವಳಿ ತಪ್ಪಿಿಸಲು ಅವುಗಳಿಗೊಂದು ಆಶ್ರಯ ನೀಡಲು ಮುಂದಾಗಿದೆ.
ಅದಕ್ಕಾಾಗಿಯೇ ರಾಯಚೂರು ನಗರದ ಹೊರವಲಯದ ಪೋತಗಲ್ ಬಳಿಯ ಸರ್ವೆ ನಂ.321ರಲ್ಲಿ ಸುಮಾರು 6 ಎಕರೆ ಪ್ರದೇಶದಲ್ಲಿ ಬೀದಿ ನಾಯಿಗಳ ಆಶ್ರಯ ತಾಣ ನಿರ್ಮಿಸಲು ಸಜ್ಜಾಗಿದೆ.ಅದಕ್ಕಾಾಗಿ ವಿಸ್ತೃತ ಪ್ರಸ್ತಾಾವನೆಯೊಂದು ಸಿದ್ದಪಡಿಸಿಕೊಂಡು ನಗರಾಭಿವೃದ್ದಿ ಹಾಗೂ ಪೌರ ಸೇವಾ ಇಲಾಖೆ ಸಲಹೆ ಪಡೆದು ಅನುಮೋದನೆಗೆ ಮುಂದಾಗಿದೆ.
ಅದಕ್ಕಾಾಗಿ ಬರೋಬ್ಬರಿ 5 ಕೋಟಿ ಅನುದಾನದ ಬೇಡಿಕೆ ಇರಿಸಿದ್ದು ಸಿವಿಲ್ ಕಾಮಗಾರಿ ನಿರ್ವಹಿಸಲು ತುರ್ತು ಇದ್ದು ಯಾವ ಮೂಲದಿಂದ ಅನುದಾನ ಒದಗಿಸಬೇಕೆಂಬುದರ ಸಲಹೆ ಕೇಳಿರುವುದಾಗಿ ಗೊತ್ತಾಾಗಿದೆ.
ಬೀದಿ ನಾಯಿಗಳ ಹಾವಳಿ, ದಾಳಿ ತಪ್ಪಿಿಸಲು ಅವುಗಳಿಗೆ ಸಂತಾನ ಹರಣ ಚಿಕಿತ್ಸೆೆ ಮಾಡಿಸಬೇಕೆಂಬ ಒತ್ತಾಾಯ ಕೇಳಿ ಬಂದ ಹಿನ್ನೆೆಲೆಯಲ್ಲಿ ಜೂನ್ನಿಂದ ಅಕ್ಟೋೋಬರ್ ವರೆಗೆ ವಿವಿಧ ಬಡಾವಣೆಯಲ್ಲಿ ಸುಮಾರು 1500 ಬೀದಿ ನಾಯಿಗಳ ಹಿಡಿದು ಅವುಗಳಿಗೆ ಸಂತಾನ ಹರಣ ಚಿಕಿತ್ಸೆೆ ಮಾಡಲು ಬರೋಬ್ಬರಿ ಪಾಲಿಕೆ ತನ್ನ ಸಾಮಾನ್ಯ ನಿಧಿಯಲ್ಲಿ 24 ಲ 75 ಸಾವಿರ ರೂಗಳ ಅನುದಾನ ಕಾಯ್ದಿಿರಿಸಿದ್ದಲ್ಲದೆ, ಇದುವರೆಗೆ ಪ್ರತಿ ನಾಯಿ ಹಿಡಿದು ಸಂತಾನ ಹರಣ ಚಿಕಿತ್ಸೆೆಗೊಳಪಡಿಸಲು 1650ರೂಗಳಂತೆ ಖರ್ಚು ಮಾಡಲಾಗಿದೆ. ಈಗಲೂ ಆ ಕಾರ್ಯ ಪ್ರಗತಿಯಲ್ಲಿದೆ ಎಂದು ಪಾಲಿಕೆಯ ಆಯುಕ್ತರು ಇತ್ತೀಚೆಗೆ ಸಚಿವರ ಪ್ರಶ್ನೆೆಯೊಂದಕ್ಕೆೆ ಉತ್ತರಿಸಿದ್ದರು.
ರಾಯಚೂರು ನಗರದ 35 ವಾರ್ಡಿನ ದೇವಸ್ಥಾಾನ, ಸಮುದಾಯ ಭವನ, ಶಾಲೆ, ಬಸ್ ನಿಲ್ದಾಾಣ, ರೈಲ್ವೆೆ ನಿಲ್ದಾಾಣ ಸೇರಿ ಬಹುತೇಕ ಕಡೆ ಸುಮಾರು 3752 ಬೀದಿ ನಾಯಿಗಳು ಇವೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆೆ ಸರ್ಕಾರಿ, ಖಾಸಗಿ ಶಾಲೆ,ಕಾಲೇಜುಗಳ ಆಡಳಿತ ಮಂಡಳಿಗಳು ಯಾವುದೇ ಬೀದಿ ನಾಯಿಗಳು ತಮ್ಮ ಆವರಣ ಪ್ರವೇಶಿಸದಂತೆ ಅಗತ್ಯ ಸುರಕ್ಷತೆ ಕ್ರಮ ವಹಿಸಿಕೊಂಡು ಆ ಬಗ್ಗೆೆ ಪಾಲಿಕೆಗೆ ದೃಢೀಕರಣ ಸಲ್ಲಿಸಲು ಆಯುಕ್ತರು ಆದೇಶಿಸಿದ್ದರು
ಬೀದಿ ನಾಯಿಗಳ ಕುರಿತು ನಾಗರಿಕರ ಸಹಭಾಗಿತ್ವದ ಬಗ್ಗೆೆ ಚರ್ಚಿಸಲು ಮಹಾನಗರ ಪಾಲಿಕೆ ಆಯುಕ್ತರ ಅಧ್ಯಕ್ಷತೆಯಲ್ಲಿ ಕರೆದ ಸಭೆ ಸಮನ್ವಯತೆ ಕೊರತೆಯಿಂದಲೆ ಮುಂದೂಡಿಕೆಯಾಗಿದೆ. ಅಲ್ಲದೆ, ಬೀದಿ ನಾಯಿಗಳ ನಿಯಂತ್ರಣ, ದತ್ತು ಸ್ವೀಕಾರಕ್ಕೆೆ ಸಂಬಂಧಿಸಿದ ಸ್ವಿಿಡನ್ ದೇಶದಲ್ಲಿನ ಪದ್ದತಿಯ ಚರ್ಚೆಗೆ ಸಭೆ ನಿಗದಿಯಾಗಿತ್ತು ಎನ್ನಲಾಗಿದೆ. ಸಭೆಗೆ ಪ್ರಾಾಣಿದಯಾ ಸಂಘ, ಪಶು ಚಿಕಿತ್ಸಾಾಲಯ, ವೈದ್ಯರ ಪ್ರಾಾಣಿ ಕಲ್ಯಾಾಣ ಸಮಿತಿಯವರಿಗೂ ಆಹ್ವಾಾನಿಸಿದ್ದರೂ ಖುದ್ದು ಮಾಹಿತಿ ನೀಡುವಲ್ಲಿ ಅಧಿಕಾರಿಗಳು ವಿಲರಾಗಿದ್ದರಿಂದ ಸಭೆ ಮುಂದೂಡಿಕೆಯಾಗಿದೆ ಎಂದು ಗೊತ್ತಾಾಗಿದೆ.
* ಆರು ಎಕರೆ ಪ್ರದೇಶ ಗುರುತು * 5 ಕೋಟಿ ಅನುದಾನದ ನಿರೀಕ್ಷೆೆ ಬೀದಿ ನಾಯಿಗಳಿಗೆ ಜನ ಹೈರಾಣ, ಆಶ್ರಯ ತಾಣಕ್ಕೆೆ ಪಾಲಿಕೆ ಗಮನ

