ಸುದ್ದಿಮೂಲ ವಾರ್ತೆ
ರಾಯಚೂರು,ಮೇ 12: ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಮೇ.13 ರಂದು ನಡೆಯಲಿದ್ದು ಸುಮಾರು 21 ಸುತ್ತುಗಳಲ್ಲಿ ಎಣಿಕೆ ಪ್ರಕ್ರಿಯೆ ಮುಗಿಯಲಿದೆ ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಹೇಳಿದರು.
ಅವರಿಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ನಾಳೆ ಬೆಳಿಗ್ಗೆ 8 ರಿಂದ ಮತ ಎಣಿಕೆ ಕಾರ್ಯ ನಗರದ ಎಸ್ ಆರ್ ಪಿ ಎಸ್ ಮತ್ತು ಎಲ್ ವಿ.ಡಿ ಕಾಲೇಜಿನಲ್ಲಿ ಪ್ರಾರಂಭಗೊಳ್ಳಲಿದ್ದು ಮಧ್ಯಾಹ್ನ 1 ರಿಂದ 2 ಗಂಟೆ ವೇಳೆಗೆ ಫಲಿತಾಂಶ ಹೊರಬೀಳಲಿದೆ.
61 ಅಭ್ಯರ್ಥಿಗಳಿದ್ದು ಪ್ರತಿ ವಿಧಾನಸಭೆಗೆ 14 ರಂತೆ 98. ಟೇಬಲ್ ವ್ಯವಸ್ಥೆ ಮಾಡಲಾಗಿದೆ
126 ಕೌಂಟಿಂಗ್ ಅಬ್ಸರ್ವರ್ ಸೇರಿ 378 ಸಿಬ್ಬಂದಿ ಇರಲಿದ್ದು ಆಯೋಗದಿಂದ ಐದು ಜನ ಮುಖ್ಯ ವೀಕ್ಷಕರು ಆಗಮಿಸಿದ್ದಾರೆ ಎಂದರು. ಪೋಸ್ಟಲ್ ಮತದಾನ ಹೊರತು ಪಡಿಸಿ ಒಟ್ಟು 70.03ರಷ್ಟು ಮತದಾನವಾಗಿದೆ ಎಂದು ಮಾಹಿತಿ ನೀಡಿದರು.
ಅಂದು ಬೆಳಿಗ್ಗೆಯಿಂದಲೇ ನಗರ ಹಾಗೂ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿಯಲ್ಲಿರಲಿದ್ದು ವಿಜಯೋತ್ಸವ , ಮೆರವಣಿಗಗೆ , ಪಟಾಕಿ ಸಿಡಿಸಲು ನಿಷೇಧಿಸಲಾಗಿದೆ ಎಂದರು. ಮತ ಎಣಿಕೆ ಕಾರ್ಯ ಅತ್ಯಂತ ಪಾರದರ್ಶಕವಾಗಿ ನೆರವೇರಲಿದ್ದು ಸಿಸಿ ಟಿವಿ ಅಳವಡಿಸಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಮಾತನಾಡಿ ಭದ್ರತೆಗೆ 1 ಎಸ್ಪಿ,1 ಎಎಸ್ ಪಿ, 2 ಡಿಎಸ್ಪಿ,12 ಸಿಪಿಐ,25 ಪಿಇಎಸ್ ಐ, 52 ಎಎಸ್ ಐ,350 ಪಿಸಿ, 100 ಹೋಮಗಾರ್ಡ್, 3 ಕೇಂದ್ರ ಮೀಸಲು ಪಡೆ,2 ಕೆಎಸ್ ಆರ್ ಪಿ ತುಕಡಿ, 2 ಜಿಲ್ಲಾ ಸಶಸ್ತ್ರ ಪಡೆ ತುಕಡಿ ನಿಯೋಜಿಸಲಾಗಿದ್ದು ಅದೆ ರೀತಿ ಎಲ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು ಅಭ್ಯರ್ಥಿಗಳಿಗೆ ಭದ್ರತೆ ನೀಡಲಾಗುತ್ತದೆ ಎಂದ ಅವರು ಮತ ಎಣಿಕೆ ಕೇಂದ್ರದಲ್ಲಿ ಅನುಮತಿ ಪತ್ರ ಇಲ್ಲದವರಿಗೆ ಪ್ರವೇಶ ನಿರಾಕರಿಸಲಾಗಿದ್ದು ನೀತಿ ಸಂಹಿತೆ ಉಲ್ಲಂಘಿಸಿದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಮಸ್ಕಿಯಲ್ಲಿ ಶಾಸಕರ ಸಹೋದರನ ಮೇಲೆ ಹಲ್ಲೆ ಪ್ರಕರಣ ಸಂಬಂಧಿಸಿದಂತೆ 12 ಜನರ ಮೇಲೆ ಸ್ವಯಂ ಪ್ರಕರಣ ದಾಖಲಾಗಿದ್ದು ಮಾಜಿ ಶಾಸಕರಿಗೆ ಜೀವ ಬೆದರಿಕೆ ಬಗ್ಗೆ ದೂರು ದಾಖಲಾಗಿದ್ದು ಸೂಕ್ತ ಭದ್ರತೆ ನೀಡಲಾಗುತ್ತದೆ ಜಿಲ್ಲೆಯಾದ್ಯಂತ ಸುಮಾರು 39 ಕಡೆಗಳಲ್ಲಿ ಚುನಾವಣೆಗೆ ಸಂಬಂಧಿಸಿದ ಸಣ್ಣ ಪುಟ್ಟ ಘಟನೆಗಳು ನಡೆದಿದ್ದು ಒಟ್ಟಾರೆ ಶಾಂತಿಯುತ ಮತದಾನಕ್ಕೆ ಎಲ್ಲರು ಸಹಕಾರ ನೀಡಿದ್ದಾಗಿ ಹೇಳಿದರು.