ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.09:
ಬೆಳಗಾವಿಯ ಸುವರ್ಣ ಸೌಧದ ಪಶ್ಚಿಿಮ ದಿಕ್ಕಿಿನ ಮೆಟ್ಟಿಿಲುಗಳ ಮೇಲೆ ಜಗತ್ತಿಿನ ಎರಡನೇ ಅತೀ ದೊಡ್ಡ ಖಾದಿ ತ್ರಿಿವರ್ಣ ಧ್ವಜ ಮುಖ್ಯಮಂತ್ರಿಿ ಸಿದ್ದರಾಮಯ್ಯ ಮಂಗಳವಾರ ಅನಾವರಣಗೊಳಿಸಿದರು. ಸುವರ್ಣ ವಿಧಾನಸೌಧ ಅಧಿವೇಶನ ಮುಕ್ತಾಾಯದವರೆಗೂ ಸೌಧಕ್ಕೆೆ ಭೇಟಿ ನೀಡುವ ಸಾರ್ವಜನಿಕರೂ ಸೇರಿದಂತೆ ಶಾಲಾ ಕಾಲೇಜುಗಳ ಮಕ್ಕಳಲ್ಲಿ ರಾಷ್ಟ್ರಭಕ್ತಿಿ ಪ್ರೇೇರೇಪಿಸುವ ಉದ್ದೇಶದೊಂದಿಗೆ 200 ಕೆಜಿ ತೂಕದ ಈ ಧ್ವಜವನ್ನು ಪ್ರದರ್ಶಿಸಲಾಗಿದೆ.
ಬೆಂಗಳೂರು ವಿಧಾನಸೌಧದ ಆವರಣದಲ್ಲಿ ಪ್ರದರ್ಶಿಸಬೇಕಾಗಿದ್ದ ಧ್ವಜ ಬೆಂಗಳೂರಿನಲ್ಲಿ ಆಗಾಗ ಸುರಿಯುತ್ತಿಿರುವ ಮಳೆಯ ಕಾರಣದಿಂದಾಗಿ ಬೆಳಗಾವಿ ಸುವರ್ಣ ಸೌಧದ ಆವರಣದಲ್ಲಿ ಸುವರ್ಣ ಸೌಧದ ಆವರಣ ಪ್ರವೇಶಿಸುವಾಗಲೇ ಕಣ್ಣಿಿಗೆ ಬೀಳುವಂತೆ ಪ್ರದರ್ಶಿಸಲಾಗಿದೆ.
ಮಂಗಳವಾರ ಚರಕವನ್ನು ತಿರುಗಿಸುವ ಮೂಲಕ ಮುಖ್ಯಮಂತ್ರಿಿ ಸಿದ್ದರಾಮಯ್ಯ ಬೃಹತ್ ಧ್ವಜ ಅನಾವರಣಗೊಳಿಸಿದರು.
ಕಲ್ಬುರ್ಗಿ ಜಿಲ್ಲೆಯ ಕಮಲಾಪುರದ ವಿನೋದ್ ಕುಮಾರ್ ರೇವಪ್ಪ ಬಮ್ಮಣ್ಣ ಅವರು ಸಮನ್ವಯದೊಂದಿಗೆ ಈ ಖಾದಿ ಧ್ವಜ ನಿರ್ಮಾಣ ಮಾಡಲಾಗಿದ್ದು ಸರ್ಕಾರದ ಪರವಾಗಿ ಧ್ವಜ ಅನಾವರಣಗೊಳಿಸಿದ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅಭಿನಂದಿಸಿದರು. ಸದ್ಯ ನಡೆಯುತ್ತಿಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನ ಪೂರ್ಣಗೊಳ್ಳುವವರೆಗೂ ಈ ಬೃಹತ್ ಧ್ವಜ ಸಾರ್ವಜನಿಕ ವೀಕ್ಷಣೆಗೆ ಲಭ್ಯ ಇರಲಿದೆ.
75ನೇ ಸ್ವಾಾತಂತ್ರ್ಯೋೋತ್ಸವ ಸ್ಮರಣೆಗಾಗಿ ನೇಯಲಾದ ಈ ಧ್ವಜವನ್ನು ಗರಗ ಕ್ಷೇತ್ರಿಿಯ ಸೇವಾ ಸಂಘದ ನುರಿತ ಮಹಿಳಾ ಖಾದಿ ಕುಶಲಕರ್ಮಿಗಳಿಂದ ಅರು ವಾರಗಳ ಕಾಲ ನೇಯ್ಗೆೆ ಮಾಡಲಾಗಿದೆ. ಇದು 75್ಡ50 ಅಡಿ ಗಾತ್ರ ಮತ್ತು 200 ಕೆ.ಜಿ.ಯಷ್ಟು ತೂಕ ಹೊಂದಿದೆ.
ಬೃಹತ್ ಧ್ವಜ ಅನಾವರಣಗೊಳಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಭಾರತದ ತ್ರಿಿವರ್ಣ ಧ್ವಜ ಕೇವಲ ಖಾದಿ ವಸವಾಗಿರದೇ, ಭಾರತದ ಹೆಮ್ಮೆೆ ಮತ್ತು ಸ್ವಾಾಭಿಮಾನದ ಸಂಕೇತ ಎಂದು ಹೇಳಿದರು.
ಸ್ವಾಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ತ್ರಿಿವರ್ಣ ಧ್ವಜ ಜಾರಿಗೆ ತಂದರು. ತ್ರಿಿವರ್ಣ ಧ್ವಜ ಕೇವಲ ಖಾದಿ ವಸವಲ್ಲ, ಇದು ಭಾರತದ ಹೆಮ್ಮೆೆ ಮತ್ತು ಸ್ವಾಾಭಿಮಾನದ ಸಂಕೇತ. ಈ ಧ್ವಜದಲ್ಲಿ ಮೂರು ವರ್ಣ ಮತ್ತು ಅಶೋಕ ಚಕ್ರ ಒಳಗೊಂಡಿದೆ. ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳಿದ್ದು, ದೇಶದ ಸ್ವಾಾಭಿಮಾನ, ಆರ್ಥಿಕತೆ ಮತ್ತು ತ್ಯಾಾಗಬಲಿದಾನ ಹಾಗೂ ಶಾಂತಿಯ ಸಂದೇಶವನ್ನು ಸಾರುವ ಹಾಗೂ ಭಾರತೀಯರಿಗೆ ರಾಷ್ಟ್ರಭಕ್ತಿಿ ಸಾರುವ ಸಂದೇಶ ನೀಡುತ್ತದೆ ಎಂದರು.
ಬಿಳಿಬಣ್ಣ ಶಾಂತಿ ಮತ್ತು ಸತ್ಯವನ್ನು ಪ್ರತಿನಿಧಿಸಿದರೆ, ಹಸಿರು ಸಮೃದ್ಧಿಿಯನ್ನು ಬಿಂಬಿಸುತ್ತದೆ. ಅಶೋಕ ಚಕ್ರ ನಿರಂತರವಾಗಿ ದೇಶದ ಆರ್ಥಿಕತೆ , ಹಾಗೂ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಿಸುವುದರ ಸಂಕೇತವಾಗಿದೆ ಎಂದು ವಿವರಿಸಿದರು.
ಸಂವಿಧಾನದ ಪೀಠಿಕೆ ಓದು ಕಾರ್ಯಕ್ರಮ
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಪೀಠಿಕೆ ಶಾಲಾ ಕಾಲೇಜುಗಳಲ್ಲಿ ಓದಿಸುವ ಕೆಲಸ ಮಾಡುತ್ತಿಿದ್ದೇವೆ. ಅದಕ್ಕಾಾಗಿಯೇ ಇಂಥ ಐತಿಹಾಸಿಕ ಕಾರ್ಯಕ್ರಮ ಮಾಡುತ್ತಿಿದ್ದೇವೆ ಎಂದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ರಾಜ್ಯದ ಜನರ ಪರವಾಗಿ ಸ್ಪೀಕರ್ ಹಾಗೂ ಅವರ ತಂಡಕ್ಕೆೆ ಅಭಿನಂದನೆ ತಿಳಿಸುತ್ತೇನೆ. ಇದು ಎಲ್ಲರಿಗೂ ಮಾದರಿಯಾಗುವ ಅತ್ಯುತ್ತಮ ಕೆಲಸ. ಇದನ್ನು ಸಾರ್ವಜನಿಕರ ದರ್ಶನಕ್ಕೆೆ ಅವಕಾಶ ಮಾಡಿಕೊಡಬೇಕು. ಕಾಂಗ್ರೆೆಸ್ಸಿಿಗರ ಹೆಗಲ ಮೇಲೆ ರಾಷ್ಟ್ರಧ್ವಜ, ಎದೆಯ ಒಳಗೆ ರಾಷ್ಟ್ರಭಕ್ತಿಿ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿವಿಧಾನಸಭೆ ಸ್ಪೀಕರ್ ಯು. ಟಿ. ಖಾದರ್, ಸಚಿವರಾದ ಎಚ್ .ಕೆ. ಪಾಟೀಲ್, ಮಹದೇವಪ್ಪ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಮ್ ಅಹ್ಮದ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತಿಿತರರು ಉಪಸ್ಥಿಿತರಿದ್ದರು.
ಸುವರ್ಣ ವಿಧಾನಸೌಧದಲ್ಲಿ ದೇಶದ ಎರಡನೇ ಅತಿ ದೊಡ್ಡ ರಾಷ್ಟ್ರಧ್ವಜ ಅನಾವರಣ

