ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.21: ಭಾರತೀಯ ಪ್ರಜಾಪ್ರಭುತ್ವಕ್ಕೆ ಇಂದು ಅತ್ಯಂತ ಕರಾಳ ದಿನ, ಪ್ರಧಾನಿ ಮೋದಿ ಅವರ ಕಚೇರಿ ದೇಶಕ್ಕೆ ಅಪಮಾನ ಮಾಡಿದೆ. ಪ್ರಧಾನಿ ಮೋದಿ ಅವರು ಅಪರಾಧ ಕೃತ್ಯವನ್ನು ಎಸಗಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಈ ದಿನ ಪ್ರಧಾನಿ ನರೇಂದ್ರ ಮೋದಿ ಅವರು 40% ಕಮಿಷನ್ ಭ್ರಷ್ಟಾಚಾರಕ್ಕೆ ಅಂಕಿತ ಹಾಕಿದ ದಿನವಾಗಿ ಉಳಿಯಲಿದೆ. ಈ ದಿನ ಮೋದಿ ಅವರು ಕರ್ನಾಟಕದ ಬಿಜೆಪಿ ಕಾರ್ಯಕರ್ತರ ಜೀವಕ್ಕೆ ಬೆಲೆ ಇಲ್ಲ ಎಂದು ಹೇಳಿದ ದಿನ. ಮೋದಿ ಅವರು ರಾಜಕೀಯ ಲಾಭ ಹಾಗೂ ಮತ ಗಳಿಕೆಗೆ ಮೋದಿ ಹಾಗೂ ಬಿಜೆಪಿ ಯಾವುದೇ ಹಂತಕ್ಕೆ ಬೇಕಾದರೂ ಹೋಗುತ್ತಾರೆ ಎಂದು ಸಾಬೀತಾಗಿರುವ ದಿನ. ಇಂದು ಮೋದಿ ಅವರು ಸತ್ಯಪಾಲ್ ಮಲಿಕ್ ಅವರ ಪ್ರಧಾನಿಗೆ ಭ್ರಷ್ಟಾಚಾರದ ಮೇಲೆ ದ್ವೇಷವಿಲ್ಲ ಎಂಬ ಹೇಳಿಕೆಯನ್ನು ಸಾಬೀತು ಮಾಡಿರುವ ದಿನ.
ಅವರು ಇಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದರು.
ಪ್ರಧಾನಿ ಮೋದಿ ಅವರು ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಅವರ ಸಾವಿಗೆ ಕಾರಣಕರ್ತರಾದ ಮಾಜಿ ಸಚಿವ ಈಶ್ವರಪ್ಪ ಅವರಿಗೆ ಕರೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿರುವ ವಿಡಿಯೋ ನಾವೆಲ್ಲರೂ ನೋಡಿದ್ದೇವೆ. ಭಾರತದ ಪ್ರಜೆಯಾಗಿ ನಾವು ಪ್ರಧಾನಿಗೆ ಪ್ರಶ್ನೆ ಕೇಳಬಸುತ್ತೇವೆ. ಈಶ್ವರಪ್ಪ ಅವರಿಗೆ 40% ಕಮಿಷನ್ ನೀಡಲಾಗದೇ ಆತ್ಮಹತ್ಯೆ ಮಾಡಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ಕ್ರಾಯಕರ್ತ ಸಂತೋಷ್ ಪಾಟೀಲ್ ಆತ್ಮಹತ್ಯೆ ಪತ್ರ ಬರೆದು ಪ್ರಾಣ ಕಳೆದುಕೊಳ್ಳಲಿಲ್ಲವೇ? ಈ ಬಗ್ಗೆ ಮೋದಿ ಅವರು ಸಂತೋಷ್ ಪಾಟೀಲ್ ಅವರ ಕುಟುಂಬದ ಮನೆಯವರ ಜತೆ ಮಾತನಾಡಿ ಸಂತಾಪ ಸೂಚಿಸಿದ್ದಾರಾ? ಮೋದಿ ಅವರು ಬೆಳಗಾವಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಂತೋಷ್ ಪಾಟೀಲ್ ಅವರ ಮನೆಗೆ ಭೇಟಿ ನೀಡ್ದದರೇ? ಡಬಲ್ ಇಂಜಿನ್ ಸರ್ಕಾರದಿಂದ ಡಬಲ್ ದ್ರೋಹ ಬಗೆಯಲಾಗಿದೆ ಎಂಬುದು ಸಾಬೀತಾಗಿದೆ.
ಈಶ್ವರಪ್ಪ ಬಿಜೆಪಿ ನಾಯಕರಾಗಿರಬಹುದು, ಆದರೆ ಅವರನ್ನು ಭ್ರಷ್ಟಾಚಾರ ಆರೋಪದ ಮೇರೆಗೆ ಸಚಿವಸ್ಥಾನದಿಂದ ಕೆಳಗಿಳಿಸಲಾಗಿತ್ತು. ಇವರ ಮೇಲಿನ ಆರೋಪ ಕಾಂಗ್ರೆಸ್ ಪಕ್ಷ ಮಾಡಿಲ್ಲ, ಪ್ರಾಣ ಬಿಟ್ಟ ಸಂತೋಷ್ ಪಾಟೀಲ್ ತನ್ನ ಆತ್ಮಹತ್ಯೆ ಪತ್ರದಲ್ಲಿ ಆರೋಪ ಮಾಡಲಾಗಿದೆ. ಸಂತೋಷ್ ಪಾಟೀಲ್ ಅವರ ಸಾವಿಗೆ ಈಶ್ವರಪ್ಪ ಕಾರಣವಲ್ಲದಿದ್ದರೆ, ಅವರನ್ನು ಸಚಿವಸ್ಥಾನದಿಂದ ಕೆಳಗೆ ಇಳಿಸಿದ್ದು ಯಾಕೆ? ಅವರಿಗೆ ಟಿಕ್ಟೆ ಯಾಕೆ ನೀಡಲಿಲ್ಲ? ಮೋದಿ ಅವರು ಈಶ್ವರಪ್ಪ ಅವರಿಗೆ ಕರೆ ಮಾಡಿ ಪ್ರಶಂಸೆ ಮಾಡುವ ಮೂಲಕ ರಾಜ್ಯದಲ್ಲಿ 40% ಕಮಿಷನ್ ಭ್ರಷ್ಟಾಚಾರಕ್ಕೆ ಅನುಮೋದನೆ ನೀಡಿದ್ದಾರೆ. ಪ್ರಧಾನಿ ಅವರ ಈ ನಡೆ ನೋಡಿ ದೇಶದ ಪ್ರಜೆಯಾಗಿ ನನಗೆ ನಾಚಿಕೆಯಾಗುತ್ತಿದೆ. ಪ್ರಧಾನಿ ಮೋದಿ ಅವರು ರೌಡಿ ಶೀಟರ್ ಫೈಟರ್ ರವಿ ಅವರಿಗೆ ತಲೆ ಬಾಗಿ ನಮಸ್ಕರಿಸುತ್ತಾರೆ.
ಜಮ್ಮು ಕಾಶ್ಮೀರ ಹಾಗೂ ಗೋವಾ ರಾಜ್ಯಪಾಲ ಸ್ಥಾನಕ್ಕೆ ನರೇಂದ್ರ ಮೋದಿ ಅವರೇ ನೇಮಿಸಿದ ಸತ್ಯಪಾಲ ಮಲಿಕ್ ಅವರು ತಮ್ಮ ಸಂದರ್ಶನದಲ್ಲಿ ಗೋವಾದಲ್ಲಿ ಮುಖ್ಯಮಂತ್ರಿಗಳ ಮನೆಯಲ್ಲೇ ಲಂಚ ಪಡೆದು ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಪ್ರಧಾನಿಗೆ ಕರೆ ಮಾಡಿದಾಗ ಪ್ರಧಾನಮಂತ್ರಿಗಳು ಯಾವುದೇ ಕ್ರಮ ಕೈಗೊಳ್ಳಿಲ್ಲ. ಸತ್ಯಪಾಲ್ ಮಲಿಕ್ ಅವರು ಜಮ್ಮು ಕಾಶ್ಮೀರ ರಾಜ್ಯಪಾಲರಾಗಿದ್ದ ಸಂದರ್ಭದಲ್ಲಿ ರಾಮ್ ಮಾದವ್ ಅವರು ಬಂದು 300 ಕೋಟಿಯ ಡೀಲ್ ತೆಗೆದುಕೊಂಡು ಬಂದಿದ್ದರು. ಈ ಬಗ್ಗೆ ಮೋದಿ ಅವರ ಗಮನಕ್ಕೆ ತರಲಾಯಿತಾದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆಮೂಲಕ ಈ ಸರ್ಕಾರ ನಾ ಖಾವೂಂಗಾ ನಾ ಖಾನೇದೂಂಗಾ ಸರ್ಕಾರವಲ್ಲ, ಇದು 40% ಕಮಿಷನ್ ಭ್ರಷ್ಟಾಚಾರವನ್ನು ಪೋಷಿಸುತ್ತಿರುವ ಸರ್ಕಾರವಾಗಿದೆ. ಇದೇ ಕಾರಣಕ್ಕೆ ಗುತ್ತಿಗೆದಾರರ ಸಂಘ, ರುಪ್ಸಾ, ಲಿಂಗಾಯತ ಸಮುದಾಯದ ಸ್ವಾಮೀಜಿಗಳ ಭ್ರಷ್ಟಾಚಾರದ ಆರೋಪದ ಬಗ್ಗೆ ಮೋದಿ ಅವರು ಯಾವುದೇ ಮಾತನಾಡುತ್ತಿಲ್ಲ.
ಮೋದಿ ಅವರು ಇಂದು ಭ್ರಷ್ಟಾಚಾರದ ಕಳಂಕ ಹೊತ್ತಿರುವ ಈಶ್ವರಪ್ಪ ಅವರಿಗೆ ಕರೆ ಮಾಡಿ ಪ್ರಶಂಸೆ ಮಾಡಿರುವುದು ಬಿಜೆಪಿ ಸರ್ಕಾರ ಭ್ರಷ್ಟಾಚಾರವನ್ನು ಬೆಂಬಲಿಸಲಿದೆ ಎಂಬುದಕ್ಕೆ ಸಾಕ್ಷಿ. ರಾಜ್ಯದ ಜನ ಇದನ್ನು ಕ್ಷಮಿಸುವುದಿಲ್ಲ.
ಬಿಜೆಪಿ ಮಾಜಿ ನಾಯಕ ಆಯನೂರು ಮಂಜುನಾಥ್ ಅವರು ಈಶ್ವರಪ್ಪ ಅವರ ಮಾಡಿದ್ದ ಆರೋಪಗಳ ಬಗ್ಗೆ ಕೇಳಿದಾಗ, ‘ಆಯನೂರು ಮಂಜುನಾಥ್ ಅವರಾಗಲಿ, ಜಗದೀಶ್ ಶೆಟ್ಟರ್, ಸವದಿ ಅವರಾಗಲಿ, ಅನೇಕ ಬಿಜೆಪಿ ನಾಯಕರು ಬಿಜೆಪಿ ಸರ್ಕಾರ ಅಢಿಯಿಂದ ಮುಡಿಯವರೆಗೂ ಭ್ರಷ್ಟಾಚಾರದಿಂದ ತುಂಬಿದೆ ಎಂದು ಹೇಳಿದ್ದಾರೆ. ಅವರ ನಾಯಕ ನೆಹರೂ ಓಲೇಕರ್ ಅವರು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು 40% ಕಮಿಷನ್ ಭ್ರಷ್ಟಾಚಾರದ ಏಜೆಂಟ್ ಎಂದು ಕರೆದರು. ಇದಕ್ಕೆ ಬೊಮ್ಮಾಯಿ ಅವರು ಮಾತಾಡಲಿಲ್ಲ. ಅವರ ಚರಿತ್ರೆ ಸ್ವಚ್ಛವಾಗಿದ್ದರೆ ಇಷ್ಟು ಹೊತ್ತಿಗೆ ಮಾನನಷ್ಟ ಮೊಕದ್ದಮೆ ಹಾಕುತ್ತಿದ್ದರು. ಅವರ ಮೌನ ಈ ಆರೋಪವನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಕರ್ನಾಟಕದ ಪುಣ್ಯಭೂಮಿಯಿಂದ ಭ್ರಷ್ಟ ಬಿಜೆಪಿ ಸರ್ಕಾರವನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಕಿತ್ತೊಗೆಯಬೇಕು’ ಎಂದು ತಿಳಿಸಿದರು.
ಶಿವಕುಮಾರ್ ಅವರ ನಾಮಪತ್ರ ತಿರಸ್ಕೃತವಾಗುವ ಭೀತಿಯಿಂದ ಡಿ.ಕೆ. ಸುರೇಶ್ ಅವರ ನಾಮಪತ್ರ ಸಲ್ಲಿಕೆ ಮಾಡಲಾಗಿದೆಯಾ ಎಂಬ ಪ್ರಶ್ನೆಗೆ, ‘ಈ ಚುನಾವಮೆಯಲ್ಲಿ ಭೀತಿ, ಆತಂಕ ಎಲ್ಲವೂ ಎದುರಾಳಿ ಪಕ್ಷದಲ್ಲಿದೆ. ಪ್ರತಿಯೊಬ್ಬರು ಬೆಂಬಲಿತ ಅಭ್ಯರ್ಥಿಯನ್ನು ಹೊಂದುವುದು ಸಾಮಾನ್ಯ. ಕೆಲವೊಮ್ಮೆ ಪತ್ನಿ, ಸಹೋದರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಎರಡನೇ ನಮಪತ್ರ ಸಲ್ಲಿಸುತ್ತಾರೆ’ ಎಂದು ತಿಳಿಸಿದರು.
ಕಾಂಗ್ರೆಸ್ ತಾರಾ ಪ್ರಚಾರಕರಲ್ಲಿ ಕ್ರಿಮಿಲ್ ಗಳ ಜತೆ ನಂಟು ಹೊಂದಿರುವವರನ್ನು ಒಳಗೊಳ್ಳಲಾಗಿದೆ ಎಂಬ ಬಿಡಜೆಪಿ ಆರೋಪದ ಬಗ್ಗೆ ಪ್ರಶ್ನಿಸಿದಾಗ, ‘ರಾಜ್ಯದಲ್ಲಿ ಹಿಂದೂ ಮುಸಲ್ಮಾನರ ನಡುವಣ ಸಂಘರ್ಷ ಹಾಗೂ ಕೋಮುವಾದದ ರಾಜಕಾರಣ ಯಶಸ್ವಿಯಾಗುವುದಿಲ್ಲ. ಬಿಜೆಪಿ ಅವರು ಈ ವಿಚಾರವಾಗಿ ಜನರನ್ನು ಮೂರ್ಖರನ್ನಾಗಿಸುವ ಪ್ರಯತ್ನ ಮಾಡುತ್ತಾರೆ ಎಂದು ಜನರಿಗೆ ಅರಿವಾಗಿದೆ. ಬಿಜೆಪಿ ಮೀಸಲಾತಿ, ಕೋಮುವಾದ, ಜಾತಿಗಳ ವಿಚಾರಗಳ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ಮಾಡುತ್ತದೆ. ಈಗ ಅವ್ಯಾವು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಬಿಜೆಪಿಯ ಈ ಕುತಂತ್ರವನ್ನು ಜನ ನಿರ್ಲಕ್ಷಿಸಬೇಕು. ಅವರು 5 ಸಾವಿರ ವರ್ಷಗಳ ಹಿಂದಿನ ವಿಚಾರ ಇಟ್ಟುಕೊಂಡು ಮಾತನಾಡುತ್ತಾರೆ. ರಾಜ್ಯ ಈ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ತನ್ನ ಸಾಧನೆ ಏನು ಎಂದು ಹೇಳಬೇಕು. ಐದು ವರ್ಷಗಳ ಹಿಂದೆ ಪರೇಶ್ ಮೇಸ್ತಾ ಅವರ ಸಾವಿನ ವಿಚಾರವಾಗಿ ಇದೇ ಶೋಭಾ ಕರಂದ್ಲಾಜೆ, ಸಿ.ಟಿ ರವಿ ಅವರು ಮಾನಸಿಕ ಅಸ್ವಸ್ಥರಂತೆ ಮಾತನಾಡುತ್ತಿದ್ದರು. ಅವರು ಈ ಸಾವಿನ ಪ್ರಕರಣದಲ್ಲಿ ಸಾಕಷ್ಟು ಅರಚಾಡಿದ್ದರು, ಆದರೆ ಆ ಪ್ರಕರಣ ತನಿಖೆ ಮಾಡಿದ ಸಿಬಿಐ ವರದಿಯಲ್ಲಿ ಏನು ಹೇಳಿತು? ಈ ನಾಯಕರ ಆರೋಪಗಳು ಶುದ್ಧ ಸುಳ್ಳು ಎಂದು ಹೇಳಿದೆ. ಬಿಜೆಪಿ ನಾಯಕರು ಇಂತಹ ಸುಳ್ಳನ್ನು ಹೇಳುತ್ತಲೇ ಇರುತ್ತಾರೆ’ ಎಂದು ತಿಳಿಸಿದರು.