ಸುದ್ದಿಮೂಲ ವಾರ್ತೆ ಯಾದಗಿರಿ, ಡಿ.30:
ಮುಂದಿನ 6ನೇ ವೈಜ್ಞಾನಿಕ ಸಮ್ಮೇಳನವನ್ನು ರಾಜ್ಯದ ಗಡಿಜಿಲ್ಲೆ, ಕುಂದಾನಗರಿ ಬೆಳಗಾವಿಯಲ್ಲಿ ನಡೆಸಲು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿಿನ ಕಾರ್ಯಕಾರಿ ಸಮಿತಿಯು ಸರ್ವಾನುಮತದಿಂದ ನಿರ್ಣಯ ಕೈಗೊಂಡಿದೆ.
ಯಾದಗಿರಿಯ 5ನೇ ವೈಜ್ಞಾನಿಕ ಸಮ್ಮೇಳನದ ಮೂರನೇ ಮತ್ತು ಅಂತಿಮ ದಿನವಾದ ಮಂಗಳವಾರ ನಡೆದ ಪರಿಷತ್ತಿಿನ ಮಹಾಧಿವೇಶನದಲ್ಲಿ ಬೆಳಗಾವಿಯಲ್ಲಿ 2026ರ 6ನೇ ವೈಜ್ಞಾನಿಕ ಸಮ್ಮೇಳನವನ್ನು ನಡೆಸುವುದು ಸೂಕ್ತ ಎನ್ನುವ ನಿಲುವಿಗೆ ಪರಿಷತ್ತು ಒಪ್ಪಿಿಗೆ ನೀಡಿತು.
ಪರಿಷತ್ತಿಿನ ಸಂಸ್ಥಾಾಪಕ ಅಧ್ಯಕ್ಷರು ಹಾಗೂ ಖ್ಯಾಾತ ವಿಚಾರವಾದಿ ಡಾ. ಹುಲಿಕಲ್ ನಟರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾ ಅಧಿವೇಶನ ದಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಪರಿಷತ್ತಿಿನ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಒಮ್ಮತದಿಂದ ಸಮ್ಮತಿ ನೀಡಿದರು. ಇದಕ್ಕೂ ಮುನ್ನ ಮಹಾಧಿವೇಶನದ ಮುಂದೆ 6ನೇ ವೈಜ್ಞಾನಿಕ ಸಮ್ಮೇಳನದ ಬಗ್ಗೆೆ ಪರಿಷತ್ತಿಿನ ರಾಜ್ಯ ಸಂಘಟನಾ ಕಾರ್ಯದರ್ಶಿ ವಿ ಟಿ ಸ್ವಾಾಮಿ ಪ್ರಸ್ತಾಾವನೆ ಮಂಡಿಸಿದರು. ಅದರಂತೆ, ಸಚಿವ ಸತೀಶ್ ಜಾರಕಿಹೊಳಿ ಅವರು ಮುಂದಿನ ವೈಜ್ಞಾನಿಕ ಸಮ್ಮೇಳನ ನಮ್ಮ ತವರು ಜಿಲ್ಲೆ ಬೆಳಗಾವಿಯಲ್ಲಿ ನಡೆಸುವಂತೆ ಮನವಿ ಮಾಡಿದ್ದರ ಬಗ್ಗೆೆಯೂ ಚರ್ಚಿಸಲಾಯಿತು.
ಪರಿಷತ್ತಿಿನ ಚಿಕ್ಕೋೋಡಿ ಜಿಲ್ಲಾಧ್ಯಕ್ಷ ಸಂಗಮೇಶ್ ಹಚ್ಚಡದ ಮಾತನಾಡಿ, ಸಚಿವ ಸತೀಶ್ ಜಾರಕಿಹೊಳಿಯವರು ಮುಂದಿನ 6ನೇ ವೈಜ್ಞಾನಿಕ ಸಮ್ಮೇಳನವನ್ನು ಬೆಳಗಾವಿಯಲ್ಲೇ ನಡೆಸುವಂತೆ ಬೆಳಗಾವಿ ಜಿಲ್ಲಾಧ್ಯಕ್ಷರ ಮೂಲಕ ಈಗಾಗಲೇ ಪರಿಷತ್ತಿಿನ ಸಂಸ್ಥಾಾಪಕ ಅಧ್ಯಕ್ಷ ಡಾ. ಹುಲಿಕಲ್ ನಟರಾಜ್ ಅವರಿಗೆ ಒಪ್ಪಿಿಗೆ ಪತ್ರ ಕಳುಹಿಸಿದ್ದಾರೆ. ಅಲ್ಲದೆ, ಸಚಿವರು ಸ್ವತಃ ಉದ್ಘಾಾಟನಾ ಸಮಾರಂಭದ ವೇದಿಕೆಯಲ್ಲೂ ಬಹಿರಂಗವಾಗಿ ಬೆಳಗಾವಿಯಲ್ಲಿ 6ನೇ ಸಮ್ಮೇಳನ ನಡೆಸಲು ಮನವಿ ಮಾಡಿಕೊಂಡಿದ್ದಾರೆ. ಪರಿಷತ್ತು ಅನುಮತಿ ಕೊಟ್ಟರೆ ಬೆಳಗಾವಿ ಮತ್ತು ಚಿಕ್ಕೋೋಡಿ ಶೈಕ್ಷಣಿಕ ಜಿಲ್ಲೆಗಳ ಸಮಿತಿಗಳ ಜೊತೆಗೂಡಿ ಸಮ್ಮೇಳನವನ್ನು ಐತಿಹಾಸಿಕಗೊಳಿಸುತ್ತೇವೆ. ಇದಕ್ಕೆೆ ಸರ್ವ ಸದಸ್ಯರು ಒಪ್ಪಿಿಗೆ ನೀಡಬೇಕೆಂದು ಮನವಿ ಮಾಡಿದರು.
ಈ ಬಗ್ಗೆೆ ಮಹಾಧಿವೇಶನದಲ್ಲಿ ಬೆಳಗಾವಿಯಲ್ಲಿ ಮುಂದಿನ ಸಮ್ಮೇಳನ ನಡೆಸುವಂತೆ ಸಚಿವ ಸತೀಶ್ ಜಾರಕಿಹೊಳಿಯವರೇ ಸ್ವತಃ ಕೇಳಿಕೊಂಡಿರುವುದರಿದ ಮುಂದೆ ಯಾವುದೇ ಸಮಸ್ಯೆೆ ಎದುರಾಗದು. ಅವರೊಬ್ಬ ವೈಚಾರಿಕ ಚಿಂತಕರು; ಆರ್ಥಿಕ ಸೇರಿದಂತೆ ಎಲ್ಲ ರೀತಿಯಿಂದಲೂ ಶಕ್ತಿಿವುಳ್ಳವರು. ಅವರ ಕಡೆ ಬಹಳ ಸೇನೆಯೇ ಇದೆ. ಹಾಗಾಗಿ ಬೆಳಗಾವಿಯ ಸಮ್ಮೇಳನವು ಐತಿಹಾಸಿಕ ಆಗಬಹುದು ಪರಿಷತ್ತಿಿನ ಪದಾಧಿಕಾರಿಗಳು ಒಕ್ಕೊೊರಲಿನಿಂದ ತೀರ್ಮಾನ ಕೈಗೊಂಡರು.
ಖ್ಯಾಾತ ವಿಜ್ಞಾನಿ ಹಾಗೂ ಪರಿಷತ್ತಿಿನ ಮಹಾ ಪೋಷಕ ಡಾ. ಎ.ಎಸ್. ಕಿರಣ್ ಕುಮಾರ್ ಅವರು ಬೆಳಗಾವಿಯಲ್ಲಿ 6ನೇ ವೈಜ್ಞಾನಿಕ ಸಮ್ಮೇಳನ ನಡೆಸುವ ಬಗ್ಗೆೆ ಅನುಮೋದನೆ ನೀಡಿದರು. ನಂತರ ಮುಂದಿನ ನಮ್ಮ ವೈಜ್ಞಾನಿಕ ನಡೆ- ಕುಂದಾನಗರಿ ಬೆಳಗಾವಿ ಕಡೆ ಎಂದು ಸಂಸ್ಥಾಾಪಕ ಅಧ್ಯಕ್ಷ ಡಾ. ಹುಲಿಕಲ್ ನಟರಾಜ್ ಘೋಷಿಸಿದರು. ಸರ್ವಸದಸ್ಯರೆಲ್ಲರೂ ಚಪ್ಪಾಾಳೆ ತಟ್ಟಿಿ ಬೆಂಬಲಿಸಿದರು.
ಇದೇ ವೇಳೆ ಯಾದಗಿರಿಯಲ್ಲಿ ನಡೆದ ಮೂರು ದಿನಗಳ 5ನೇ ಸಮ್ಮೇಳನವು ಅತ್ಯಂತ ಯಶಸ್ವಿಿಯಾಗಿದ್ದು;ಇದಕ್ಕೆೆ ಪರಿಷತ್ತು ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಇದೇ ವೇಳೆ ಜಿಲ್ಲಾಧ್ಯಕ್ಷ ಗುಂಡಪ್ಪ ಕಲಬುರಗಿ ದಂಪತಿಯನ್ನು ಅಭಿನಂದಿಸಲಾಯಿತು. ಅಲ್ಲದೇ, ಸಮ್ಮೇಳನದ ಯಶಸ್ವಿಿಗೆ ಶ್ರಮಿಸಿದ ಗುರುಮಠಕಲ್ ಖಾಸಮಠದ ಶ್ರೀ ಶಾಂತವೀರ ಗುರು ಮುರುಘಾರಾಜೇಂದ್ರ ಸ್ವಾಾಮೀಜಿ, ಚಿಗರಹಳ್ಳಿಿ ಶಂಕರಪೀಠದ ಶ್ರೀ ಸಿದ್ಧಬಸವ ಕಬೀರಾನಂದ ಸ್ವಾಾಮೀಜಿ ಅವರಿಗೆ ಗೌರವ ಸಮರ್ಪಿಸಲಾಯಿತು.
ಮಹಾಧಿವೇಶನದಲ್ಲಿ ಸಮ್ಮೇಳನ ಸರ್ವಾಧ್ಯಕ್ಷ ವಿಶ್ವಾಾರಾಧ್ಯ ಸತ್ಯಂಪೇಟೆ, ಪರಿಷತ್ತಿಿನ ಮಹಾ ಪೋಷಕ ಡಾ. ಎ.ಎಸ್. ಕಿರಣ್ ಕುಮಾರ, ಗೌರವ ಮಾರ್ಗದರ್ಶಕ ಡಾ. ಸಿ. ಸೋಮಶೇಖರ, ಉಪಾಧ್ಯಕ್ಷರಾದ ಡಾ. ಆಂಜನಪ್ಪ, ರಾಮಚಂದ್ರ, ರವಿಕುಮಾರ್ ಗೌಡ, ಡಾ. ಉಷಾದೇವಿ ಹಿರೇಮಠ್, ಪ್ರೊೊ. ಸುಧಾ ಹುಚ್ಚಣ್ಣವರ, ಪಿ.ವಿ. ಸಿದ್ದಲಿಂಗಮ್ಮ ನಟರಾಜ್, ಕಾರ್ಯದರ್ಶಿ ಡಾ. ಓಂಕಾರ್ ನಾಯ್ಕ್, ಸಂಘಟನಾ ಕಾರ್ಯದರ್ಶಿ ವಿ.ಟಿ. ಸ್ವಾಾಮಿ, ಕೋಶಾಧ್ಯಕ್ಷ ಎಸ್.ವೈ. ಹೊಂಬಾಳ್ ಸೇರಿದಂತೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಎಲ್ಲ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಉಪಸ್ಥಿಿತರಿದ್ದರು.
ಸಂಸ್ಥಾಾಪಕ ಅಧ್ಯಕ್ಷ ಡಾ. ಹುಲಿಕಲ್ ನಟರಾಜ್ ಅಧ್ಯಕ್ಷತೆಯ ಯಾದಗಿರಿ ಮಹಾಧಿವೇಶನ ತೀರ್ಮಾನ ಸಚಿವ ಸತೀಶ್ ಜಾರಕಿಹೊಳಿ ಆಶಯಕ್ಕೆೆ ಸಮ್ಮತಿ ಬೆಳಗಾವಿಯಲ್ಲಿ 2026ರ 6ನೇ ವೈಜ್ಞಾನಿಕ ಸಮ್ಮೇಳನ

