ಸುದ್ದಿಮೂಲ ವಾರ್ತೆ ಬಳ್ಳಾರಿ, ೆ.06:
ಬಳ್ಳಾಾರಿಯಲ್ಲಿ ಇರುವ ಐತಿಹಾಸಿಕ ಪ್ರಸಿದ್ಧ ಏಕಶಿಲಾ ಬೆಟ್ಟದ ಪಕ್ಕದಲ್ಲಿ ಇರುವ ನಾಗಲಕೆರೆಯ ವೀರ ಬಾಲಾಂಜನೇಯ ಸ್ವಾಾಮಿ ದೇವಸ್ಥಾಾನದ ಒಳಭಾಗದ ಪ್ರಾಾಂಗಣದಲ್ಲಿ ಕಪ್ಪುು ಬಣ್ಣದ ಪ್ಲಾಾಸ್ಟಿಿಕ್ ಕವರ್ನಲ್ಲಿ ಮಾಂಸದ ತುಂಡುಗಳು ಶುಕ್ರವಾರ ನಸುಕಿನಲ್ಲಿ ಸಿಕ್ಕಿಿದ್ದು, ಈ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಶುಕ್ರವಾರ ಬೆಳಿಗ್ಗೆೆ 5:30ರ ವೇಳೆಗೆ ದೇವಸ್ಥಾಾನಕ್ಕೆೆ ಆಗಮಿಸಿದ ಅರ್ಚಕರು ಪ್ರಾಾಂಗಣದಲ್ಲಿ ಸುತ್ತಾಾಡುತ್ತಿಿದ್ದಾಾಗ, ಕಪ್ಪುು ಬಣ್ಣದ ಕವರ್ ನೋಡಿ, ಅದರಲ್ಲಿ ಮಾಂಸದ ತುಂಡುಗಳು ಇರುವುದನ್ನು ಗಮನಿಸಿ, ತಕ್ಷಣವೇ ಕೌಲ್ಬಜಾರ್ ಪೊಲೀಸರಿಗೆ ಮಾಹಿತಿ ನೀಡಿದ್ದಾಾರೆ.
ಸ್ಥಳಕ್ಕೆೆ ತಕ್ಷಣವೇ ಆಗಮಿಸಿದ ಪೊಲೀಸರು, ಪರಿಶೀಲನೆ ನಡೆಸಿರು. ಸ್ಥಳಕ್ಕೆೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಐಜಿಪಿ ಹರ್ಷ ಅವರು, ‘ಆಂಜಿನೇಯ ದೇವಸ್ಥಾಾನದಲ್ಲಿ ಮಾಂಸದ ಕವರ್ ಪತ್ತೆೆಯಾಗಿದೆ. ಕ್ರಿಿಮಿನಲ್ ಪ್ರಕರಣವನ್ನು ದಾಖಲಿಸಿಕೊಂಡು ಪಾರದರ್ಶಕವಾಗಿ ತನಿಖೆ ನಡೆಸಲಾಗುತ್ತದೆ. ತನಿಖೆ ಪೂರ್ಣಗೊಳ್ಳುವವರೆಗೂ ಕಾಯಬೇಕು. ಯಾರೊಬ್ಬರೂ ಬೇರೆ ಯಾವುದೇ ಘಟನೆಗಳನ್ನು (ಬ್ಯಾಾನರ್ ಗಲಭೆ) ಈ ವಿಷಯಕ್ಕೆೆ ಹೋಲಿಸಬಾರದು ಎಂದು ಅವರು ಮನವಿ ಮಾಡಿದರು.

