ಸುದ್ದಿಮೂಲ ವಾರ್ತೆ ಬೀದರ್, ಜ.12:
ಕಳೆದ ಮುಂಗಾರು ಹಂಗಾಮಿನಲ್ಲಿ ಅತೀ ಹೆಚ್ಚು ಮಳೆಯಿಂದಾಗಿ ಸಂಭವಿಸಿದ ಬೆಳೆ ಹಾಗೂ ಮೂಲಭೂತ ಸೌಕರ್ಯಗಳ ಹಾನಿಯ ಕುರಿತು ಸೋಮವಾರ ಬೀದರ ಜಿಲ್ಲೆಗೆ ಭೇಟಿ ನೀಡಿದ ಕೇಂದ್ರ ಸರ್ಕಾರದ ತಂಡಕ್ಕೆೆ ಜಿಲ್ಲಾಡಳಿತ ಪರವಾಗಿ ಮನವರಿಕೆ ಮಾಡಿಕೊಡಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಈ ಕುರಿತು ಜರುಗಿದ ಸಭೆಯಲ್ಲಿ ಕೇಂದ್ರ ಸರಕಾರದ ಗೃಹ ಹಾಗೂ ಸಂಸದೀಯ ವ್ಯವಹಾರಗಳ ಜಂಟಿ ಕಾರ್ಯದರ್ಶಿ ರಾಜೀವಕುಮಾರ ನೇತೃತ್ವದ ತಂಡವು ಬೀದರನಲ್ಲಿ ಮುಂಗಾರು ಪ್ರವಾಹದ ಹಾನಿ ಕುರಿತಾದ ಮಾಹಿತಿ ಪಡೆದರು. ಕೇಂದ್ರ ಸರಕಾರದ ಕೃಷಿ ಹಾಗೂ ಎಣ್ಣೆೆ ಕಾಳು ಅಭಿವೃದ್ಧಿಿ ನಿಗಮದ ನಿರ್ದೇಶಕ ಡಾ.ಪೊನ್ನುಸ್ವಾಾಮಿ ಹಾಗೂ ಗ್ರಾಾಮೀಣ ಅಭಿವೃದ್ಧಿಿ ಇಲಾಖೆಯ ಅಧೀನ ಕಾರ್ಯದರ್ಶಿ ಜಯಶ್ರೀ ಕಕ್ಕರ್ ಉಪಸ್ಥಿಿತರಿದ್ದರು.
ರಾಜ್ಯ ಸರಕಾರದ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಪ್ರಧಾನ ಕಾರ್ಯದರ್ಶಿ ಮುನೀಶ್ ಮೌದ್ಗಿಿಲ್ ಹಾಗೂ ಜಿಲ್ಲಾಧಿಕಾರಿ ಶಿಲ್ಪಾಾ ಶರ್ಮಾ ಕೇಂದ್ರ ತಂಡಕ್ಕೆೆ ಮುಂಗಾರು ಮಳೆಯಿಂದಾದ ಹಾನಿಯ ತೀವ್ರತೆ ಬಗ್ಗೆೆ ಮನವರಿಕೆ ಮಾಡಿಕೊಟ್ಟರು. ಆರಂಭದಲ್ಲಿ ಕೇಂದ್ರ ತಂಡದ ಜೊತೆ ವಿಡಿಯೋ ಸಂವಾದದ ಮೂಲಕ ಮಾತನಾಡಿದ ಕಂದಾಯ ಇಲಾಖೆಯ ಸಚಿವ ಕೃಷ್ಣ ಭೈರೆಗೌಡ ಅವರು ಇಡೀ ರಾಜ್ಯದಲ್ಲಾದ ಒಟ್ಟಾಾರೆ ಹಾನಿಯ ಸಮೀಕ್ಷಾ ವರದಿ ಹಾಗೂ ಪ್ರಸ್ತಾಾವನೆಯ ಬಗ್ಗೆೆ ಸಂಕ್ಷಿಪ್ತವಾಗಿ ತಿಳಿಸಿದರು. ಆಧುನಿಕ ತಂತ್ರಜ್ಞಾನ ಬಳಸಿ ಹಾನಿಯ ವರದಿಯನ್ನು ಆಯಾ ಜಿಲ್ಲೆಗಳು ಸಿದ್ಧಪಡಿಸಿವೆ. ಅಗತ್ಯ ಛಾಯಾಚಿತ್ರ ಹಾಗೂ ಪತ್ರಿಿಕಾ ವರದಿಗಳನ್ನು ಮಂಡಿಸಲಾಗಿದೆಯೆಂದರು.
ಮನೀಶ್ ಮೌದ್ಗಿಿಲ್ ಅವರು ಮಾತನಾಡಿ, ರಾಜ್ಯದ ಕಲ್ಯಾಾಣ ಕರ್ನಾಟಕದಲ್ಲಾದ ಹೆಚ್ಚಿಿನ ಮಳೆ ಹಾಗೂ ಹಾನಿಯ ಬಗ್ಗೆೆ ತಂತ್ರಜ್ಞಾನ ಬಳಸಿ ಸಿದ್ದಪಡಿಸಿದ ವರದಿ ಹಾಗೂ ಅಗತ್ಯ ಅನುದಾನದ ಬೇಡಿಕೆ ಬಗ್ಗೆೆ ತಿಳಿಸಿದರು.
ಬದಲಾದ ಹವಾಮಾನ ವೈಪರಿತ್ಯದ ಪರಿಣಾಮದಿಂದ ಕಳೆದ ರಾಜ್ಯಾಾದ್ಯಂತ ಸತತ ಪ್ರವಾಹ ಹಾಗೂ ಬರಗಾಲ ಸಂಭವಿಸುತ್ತಿಿದೆ. 125 ವರ್ಷಗಳ ಇತಿಹಾಸದಲ್ಲಿ ಮೇ.2025 ರಲ್ಲಿ ದಾಖಲೆಯ ಮಳೆಯಾಗಿ ಜಲಾಶಯ ಕೆರೆ, ಹಳ್ಳ ಕೊಳ್ಳ ತುಂಬಿ, ಬಹುತೇಕ ಎಲ್ಲ ಕೃಷಿ ಬೆಳೆ ಹಾಗೂ ತೋಟಗಾರಿಕಾ ಬೆಳೆಗಳು ನಾಶಗೊಂಡು ಸಾಕಷ್ಟು ಮೂಲಭೂತ ಸೌಕರ್ಯಗಳ ಹಾನಿಯಾಗಿದೆ. ಕಲ್ಯಾಾಣ ಕರ್ನಾಟಕದ ಜಿಲ್ಲೆಗಳಲ್ಲಿ ಶೇ.90 ಬೆಳೆ ಹಾನಿ ಸಂಭವಿಸಿದೆಯೆಂದು ಕೇಂದ್ರ ತಂಡಕ್ಕೆೆ ಅಂಕಿ ಸಂಖ್ಯೆೆಗಳ ಸಮೇತ ಮಾಹಿತಿ ನೀಡಿದರು. ಆಧುನಿಕ ತಂತ್ರಜ್ಞಾನ ಮೊಬೈಲ್ ಆ್ಯಪ್ ಬಳಸಿ ಹಾನಿಯ ವರದಿ ಸಿದ್ದಪಡಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಶಿಲ್ಪಾಾ ಶರ್ಮಾ ಅವರು ಮಾತನಾಡಿ, ಬೀದರ ಜಿಲ್ಲೆಯಲ್ಲಾದ ಮಳೆ ಹಾನಿ ಕುರಿತು ಛಾಯಾಚಿತ್ರಗಳು ಹಾಗೂ ಪತ್ರಿಿಕಾ ವರದಿಗಳ ಮೂಲಕ ವಿವರಿಸಿದರು. ಒಟ್ಟು 1.67 ಲಕ್ಷ ಹೆ. ಹಾನಿಗೊಳಗಾಗಿದ್ದು, ಜಿಲ್ಲೆಯಲ್ಲಿ ಒಟ್ಟಾಾರೆ 711 ಕೋಟಿ ರೂ. ಹಾನಿಯಾದ ಬಗ್ಗೆೆ ತಿಳಿಸಿದರು. ರಾಜ್ಯ ಸರಕಾರದ ವಿಪತ್ತು ನಿರ್ವಹಣೆಯಿಂದ ಬಿಡುಗಡೆಯಾದ 133 ಕೋಟಿ ರೂ.ಗಳನ್ನು ವಿತರಿಸಲಾಗಿದೆ. ಒಟ್ಟು 1502 ಮನೆಗಳು ಹಾನಿಯಾಗಿದೆ. ರಸ್ತೆೆ, ಸೇತುವೆ ವಿವಿಧ ಮೂಲಭೂತ ಸೌಕರ್ಯಗಳ 231 ಕೋಟಿ ರೂ. ಹಾನಿಯಾಗಿದೆಯೆಂದು ತಿಳಿಸಿದರು.
ಜಿಲ್ಲಾಡಳಿತ ನೀಡಿದ ಹಾನಿಯ ವರದಿ ಪರಿಗಣಿಸಿ ಕೇಂದ್ರ ಸರಕಾರಕ್ಕೆೆ ಮನವರಿಕೆ ಮಾಡಿಕೊಡಲಾಗುವದೆಂದು ಕೇಂದ್ರ ಸರಕಾರದ ಗೃಹ ಹಾಗೂ ಸಂಸದೀಯ ವ್ಯವಹಾರಗಳ ಜಂಟಿ ಕಾರ್ಯದರ್ಶಿ ರಾಜೀವಕುಮಾರ ತಿಳಿಸಿದರು.
ಈ ಸಂದರ್ಭದಲ್ಲಿ ಬೀದರ ಮಹಾನಗರ ಪಾಲಿಕೆಯ ಆಯುಕ್ತ ಮುಕುಲ್ ಜೈನ್, ಬೀದರ ಸಹಾಯಕ ಆಯುಕ್ತ ಮೊಹಮ್ಮದ ಶಕೀಲ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ತಹಸೀಲ್ದಾಾರರು ಉಪಸ್ಥಿಿತರಿದ್ದರು. ಕೇಂದ್ರ ತಂಡವು ಔರಾದ್ ತಾಲ್ಲೂಕಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು.
ಕೇಂದ್ರ ತಂಡಕ್ಕೆ ಮಳೆ ಹಾನಿ ತೀವ್ರತೆ ಮನವರಿಕೆ ಮಾಡಿಸಿದ ಜಿಲ್ಲಾಡಳಿತ

