ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.04:
ಕಳೆದ ಅ 7 ರಂದು ಶೀಗೆ ಹುಣ್ಣಿಿಮೆಯ ಸಂದರ್ಭದಲ್ಲಿ ಭಾರಿ ಜನಸಂದಣಿಯಿಂದ ಕಾಲ್ತುಳಿತ ಉಂಟಾಗಿತ್ತು. ಈ ಘಟನೆಯ ನಂತರ ಕೊಪ್ಪಳ ಜಿಲ್ಲಾಾಡಳಿತ ಎಚ್ಚೆೆತ್ತುಕೊಂಡಿದ್ದು ಇಂದು ದೇವಿಯ ದರ್ಶನಕ್ಕೆೆ ಬಂದ ಲಕ್ಷಾಾಂತರ ಭಕ್ತರು ಯಾವುದೇ ತೊಂದರೆ ಇಲ್ಲದಂತೆ ದೇವಿ ದರ್ಶನ ಪಡೆದರು.
ಆದಿ ಪರಾಶಕ್ತಿಿ ಎಂದು ಖ್ಯಾಾತಿ ಹೊಂದಿರುವ ಕೊಪ್ಪಳ ತಾಲೂಕಿನ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದರ್ಶನಕ್ಕೆೆ ಪ್ರತಿ ಮಂಗಳವಾರ. ಶುಕ್ರವಾರ ಹಾಗೂ ಹುಣ್ಣಿಿಮೆಯಂದು ಲಕ್ಷಾಂತರ ಭಕ್ತರು ಬರುತ್ತಾಾರೆ. ಕರ್ನಾಟಕ. ಆಂಧ್ರ. ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದ ಬರುವ ಭಕ್ತರಿಂದ ಈ ದಿನಗಳಲ್ಲಿ ಇಲ್ಲಿ ಭಾರಿ ಜನಸ್ತೋೋಮ ಸೇರಿರುತ್ತದೆ.
ಇಂದು ಹೊಸ್ತಿಿಲ ಹುಣ್ಣಿಿಮೆಯಾದ ಹಿನ್ನೆೆಲೆಯಲ್ಲಿ ಶ್ರೀ ಹುಲಿಗೆಮ್ಮ ದೇವಿಯ ದರ್ಶನಕ್ಕೆೆ ಲಕ್ಷಾಂತರ ಭಕ್ತರು ಬಂದಿದ್ದರು. ಅ 7 ರಂದು ಶೀಗೆ ಹುಣ್ಣಿಿಮೆ ಸಂದರ್ಭದಲ್ಲಿ ಅಪಾರ ಭಕ್ತರು ಆಗಮಿಸಿದಾಗ ಕಾಲ್ತುಳಿತ ಉಂಟಾಗಿತ್ತು. ಈಗ ಎಚ್ಚೆೆತ್ತುಕೊಂಡಿರುವ ಜಿಲ್ಲಾಾಡಳಿತ ರಸ್ತೆೆ ಅತಿಕ್ರಮಣ ತೆರವುಗೊಳಿಸಿದ್ದಾಾರೆ. ದೇವರ ದರ್ಶನಕ್ಕೆೆ ಬರುವ ಭಕ್ತರಲ್ಲಿ ಜನಸಾಂದ್ರತೆಯಾಗದಂತೆ ಕ್ರಮ ವಹಿಸಲಾಗಿದೆ. ಇಂದು ಮುಂಜಾನೆಯಿಂದ ಹುಲಿಗಿಗೆ ಭಕ್ತರು ಆಗಮಿಸಿ ಸಾಲುಗಟ್ಟಿಿ ನಿಂತು ದೇವಿ ದರ್ಶನ ಪಡೆದರು.
ಲಕ್ಷಾಾಂತರ ಭಕ್ತರಿಂದ ದೇವಿ ದರ್ಶನ, ಎಚ್ಚೆತ್ತ ಜಿಲ್ಲಾಡಳಿತ

