ಸುದ್ದಿಮೂಲ ವಾರ್ತೆ ಸಿರವಾರ, ಡಿ.09:
ದನ ಕರುಗಳಿಗೆ ಹುಲ್ಲು ತುಂಬಿದ ವಾಹನಗಳು ಅಳತೆ ಮೀರಿ ಹುಲ್ಲು ಏರಿಕೆಯಿಂದ, ದಾರಿ ಬಕಾಸುರರಂತೆ ವಾಹನಗಳು ಓಡಾಟದಿಂದ ಬಸ್, ಕಾರು, ಬೈಕ್, ಶಾಲಾ ವಾಹನಕ್ಕೆೆ ದಾರಿ ಇಲ್ಲದೆ ನಿತ್ಯ ಗೋಳಾಟ ಹಾಗೂ ಸಂಚಾರಕ್ಕೆೆ ಕಿರಿ ಕಿರಿ ಉಂಟಾಗುತ್ತಿಿದೆ. ಇದಕ್ಕೆೆ ಯಾವುದೇ ಕಡಿವಾಣ ಇಲ್ಲ, ರಸ್ತೆೆ ಸಾರಿಗೆ ಇಲಾಖೆ ಹಾಗೂ ಸಂಚಾರಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಮೌನವಹಿಸಿದ್ದಾರೆ.
ದೂರದ ಬಸ್, ಕಾರ್ ವಾಹನಗಳು ಹಾಗೂ ತುರ್ತುಸ್ಥಿಿತಿ ವಾಹನಗಳು ಹಾಗೂ ಪ್ರಯಾಣಿಕರು ತುಂಬಾ ತೊಂದರೆ ಅನುಭವಿಸಬೇಕಾಗಿದೆ.
ಅಳತೆ ಮೀರಿ ಹುಲ್ಲು ತುಂಬಿ ವಾಹನಗಳು ಸಂಚರಿಸುತ್ತಿಿದ್ದು ಡಿ.7ರಂದು ವಿದ್ಯುತ್ ತಂತಿ ತಗುಲಿ ಡಿ.7 ಟ್ರಾಾಕ್ಟರ್ ಬೆಂಕಿ ಹೊತ್ತಿಿ ಉರಿದ ಘಟನೆ ಪಟ್ಟಣದ ಜಾಲಾಪುರ ಕ್ಯಾಾಂಪ್ ರಸ್ತೆೆಯ ತುಂಗಭದ್ರಾಾ 89ನೇ ಉಪ ಕಾಲುವೆಯಲ್ಲಿ ಜರುಗಿತು.
ಸಾರ್ವಜನಿಕರು ನೀರು ಹಾಕಿ ಬೆಂಕಿ ನಂದಿಸಿದ್ದರಿಂದ ಯಾವುದೇ ಅನಾಹುತ ಆಗಿಲ್ಲ, ಹುಲ್ಲು ತುಂಬಿದ ವಾಹನಗಳು ರಸ್ತೆೆ ಬದಿಯ ಹಾಗೂ ಡಿವೈಡರ್ ಮೇಲೆ ಇದ್ದ ಗಿಡ, ಮರಗಳು ಬಿದ್ದಿವೆ, ಹಲವಾರು ಮರಗಳು ನಾಶವಾಗಿವೆ. ಇನ್ನಾಾದರೂ ರಸ್ತೆೆ ಸಾರಿಗೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಭಾರಿ ಗಾತ್ರದ ವಾಹನಗಳಿಗೆ ಹಾಗೂ ಮಿತಿಮೀರಿ ಹುಲ್ಲು ತುಂಬಿದ ವಾಹನಗಳಿಗೆ ಕಡಿವಾಣ ಹಾಕುವ ಮೂಲಕ ಸುಗಮ ಸಂಚಾರಕ್ಕೆೆ ಅನುಕೂಲ ಕಲ್ಪಿಿಸಬೇಕಾಗಿದೆ.
ಹುಲ್ಲಿನ ವಾಹನಗಳ ಓಡಾಟ, ಸಾರ್ವಜನಿಕರ ಗೋಳಾಟ..!

