ಸುದ್ದಿಮೂಲ ವಾರ್ತೆ ರಾಯಚೂರು, ಜ.12:
ಸ್ವಚ್ಛ ಭಾರತ ಮಿಷನ್ ಹಾಗೂ ರಾಯಚೂರು ಉತ್ಸವದ ಅಂಗವಾಗಿ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದ ಸಂಯುಕ್ತಾಾಶ್ರಯದಲ್ಲಿ ಹಮ್ಮಿಿಕೊಂಡಿದ್ದ ಸ್ವಚ್ಛತಾ ಓಟಕ್ಕೆೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.
ಇಂದು ರಾಯಚೂರಿನ ಮಹಾತ್ಮಗಾಂಧಿ ಜಿಲ್ಲಾಾ ಕ್ರೀಡಾಂಗಣದಿಂದ ಬೆಳಿಗ್ಗೆೆ 7ಕ್ಕೆೆ ಆಯೋಜಿಸಿದ್ದ ಸ್ವಚ್ಛ ಓಟಕ್ಕೆೆ ಸಂಸದ ಜಿ.ಕುಮಾರ ನಾಯಕ ಚಾಲನೆ ನೀಡಿದರು.
ಜಿಲ್ಲಾಾಧಿಕಾರಿ ಕೆ.ನಿತೀಶ್ ಹಾಗೂ ಪಾಲಿಕೆಯ ಆಯುಕ್ತ ಜುಬಿನ್ ಮೊಹಾಪಾತ್ರ ಅವರು ಆಸಕ್ತಿಿಯಿಂದ ರೂಪಿಸಿದ ಈ ಸ್ವಚ್ಛತಾ ಓಟಕ್ಕೆೆ ಎಲ್ಲ ವಯೋಮಾನದವರೂ ಪಾಲ್ಗೊೊಂಡು ಓಟ ಓಡಿ ತಮ್ಮ ನಗರವನ್ನು ಸ್ವಚ್ಛ, ಸುಂದರ ಹಾಗೂ ಆರೋಗ್ಯಕರವಾಗಿಸುವ ಸಂಕಲ್ಪಕ್ಕೆೆ ಮತ್ತಷ್ಟು ಬಲ ಪಡಿಸಿದಂತಿತ್ತುಘಿ.
ಅಲ್ಲದೆ, ರಾಯಚೂರು ಜಿಲ್ಲಾಾ ಉತ್ಸವದ ಹಿನ್ನೆೆಲೆಯಲ್ಲಿ ಯುವಕರು, ನೌಕರರು, ಸಂಘಸಂಸ್ಥೆೆಯವರು ನಗರದ ಮಹಾತ್ಮಗಾಂಧಿ ಜಿಲ್ಲಾಾ ಕ್ರೀಡಾಂಗಣದಲ್ಲಿ ರಾಯಚೂರು ಜಿಲ್ಲಾಾ ಉತ್ಸವದ ಮಾನವ ಸರಪಳಿ ದ್ರೋಣ್ ಮೂಲಕ ವೃತ್ತಕಾರದಲ್ಲಿ ನಿಂತು ವಿನೂತನವಾಗಿ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಮೆಚ್ಚುಗೆ ಪಡೆಯುತ್ತಿಿದೆ.
ಸ್ವಚ್ಛತಾ ಓಟದಲ್ಲಿ 3000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಶಾಲಾ ವಿದ್ಯಾಾರ್ಥಿಗಳಿಂದ- 65ರ ವಯೋಮಾನದವರು ಓಟದಲ್ಲಿ ಉತ್ಸಾಾಹದಿಂದ ಪಾಲ್ಗೊೊಂಡರು.
ಈ ಸ್ವಚ್ಛತಾ ಓಟದ ಮೂಲಕ ರಾಯಚೂರು ಜನತೆ ತಮ್ಮ ನಗರಕ್ಕಾಾಗಿ ಹೊಂದಿರುವ ಜವಾಬ್ದಾಾರಿ, ಒಗ್ಗಟ್ಟು ಮತ್ತು ಅಪಾರ ಶಕ್ತಿಿಯನ್ನು ಸ್ಪಷ್ಟವಾಗಿ ಪ್ರದರ್ಶಿಸಿದರು.
ಇವರೊಟ್ಟಿಿಗೆ ರಾಜಕೀಯ ಮುಖಂಡರಾದ ರವಿಬೋಸರಾಜ್, ಜಯಣ್ಣಘಿ, ಕೆ.ಶಾಂತಪ್ಪಘಿ ನೌಕರರು, ಸಂಘದ ಪ್ರತಿನಿಧಿಗಳ ಜೊತೆ ಭಾಗಿಯಾಗಿ ಗಮನ ಸೆಳೆದರು.
ವಿಭಿನ್ನ ವಯೋಮಾನದವರು, ಹಿನ್ನೆೆಲೆಯವರು ಹಾಗೂ ವೃತ್ತಿಿಯವರು ಒಂದೇ ಗುರಿಗಾಗಿ ಒಟ್ಟಾಾಗಿ ಭಾಗವಹಿಸಿರುವುದು, ರಾಯಚೂರು ಒಂದು ಜಾಗೃತ, ಹಾಗೂ ಚೈತನ್ಯಭರಿತ ನಗರ ಎಂಬುದನ್ನು ಸಾಬೀತುಪಡಿಸಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ., ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ, ಎಸ್ಪಿ ಅರುಣಾಂಕ್ಷು ಗಿರಿ, ಎಡಿಸಿ ಶಿವಾನಂದ, ನೌಕರರ ಸಂಘದ ಅಧ್ಯಕ್ಷ ಕೃಷ್ಣ ಶಾಂವತಗೇರಿ, ಪಾಲಿಕೆಯ ವಲಯ 1ರ ಆಯುಕ್ತರಾದ ಪುಲಮ್ ಸಿಂಗ್, ಉಪ ಆಯುಕ್ತರಾದ ಸಂತೋಷ ರಾಣಿ, ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ತಹಶೀಲ್ದಾಾರರಾದ ಸುರೇಶ್ ವರ್ಮಾ, ಅಮರೇಶ ಬಿರಾದಾರ, ಕ್ರೀೆಡಾ ಇಲಾಖೆಯ ಸಹಾಯಕ ನಿರ್ದೇಶಕ ವೀರೇಶ ನಾಯಕ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಓಟದಲ್ಲಿ ಭಾಗಿಯಾಗಿದ್ದರು.
ಸ್ವಾಮಿ ವಿವೇಕಾನಂದರ ಮೌಲ್ಯಗಳು, ಸದೃಢ ಶರೀರ ಮತ್ತು ಮನಸ್ಸಿಿನ ಮಹತ್ವ ಮತ್ತು ಸ್ವಚ್ಛ, ಆರೋಗ್ಯಕರ ವಾತಾವರಣ ನೆನಪಿಸುವಂತ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಾಘನಿಯ. ಯುವಕರು ಸೇರಿ ಎಲ್ಲ ವಯೋಮಾನದವರು ರಾಯಚೂರು ಸ್ವಚ್ಛತೆಗೆ ಆದ್ಯತೆ ನೀಡಿ, ಉತ್ಸವಕ್ಕೆೆ ಮತ್ತಷ್ಟು ಮೆರಗು ತರಲು ಎಲ್ಲರೂ ಕೈ ಜೋಡಿಸಿ.
— ಜಿ.ಕುಮಾರ ನಾಯಕ, ಸಂಸದರು.
ಯುವ ದಿನ-ಸ್ವಚ್ಛತಾ ಓಟಕ್ಕೆ ಅಭೂತ ಪೂರ್ವ ಬೆಂಬಲ * ಗಮನ ಸೆಳೆದ ಜಿಲ್ಲಾ ಉತ್ಸವದ ದ್ರೋಣ್ ದೃಶ್ಯ ಉತ್ಸಾಹ ಹುಮ್ಮಸ್ಸು ಇಮ್ಮಡಿಗೊಳಿಸಿದ ಓಟ

