ಸುದ್ದಿಮೂಲ ವಾರ್ತೆ ರಾಯಚೂರು, ನ.11:
ಜಿಲ್ಲೆೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆೆ ಕಾಪಾಡುವ ಹಿನ್ನೆೆಲೆಯಲ್ಲಿ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಐದು ಜನರನ್ನು ಗಡಿಪಾರು ಮಾಡಿ ಸಹಾಯಕ ಆಯುಕ್ತ ಗಜಾನನ ಬಾಳೆ ಆದೇಶ ಹೊರಡಿಸಿದ್ದಾಾರೆ.
ತಾಲೂಕಿನ ಇಡಪನೂರು ಠಾಣಾ ವ್ಯಾಾಪ್ತಿಿಯ ಮಿರ್ಜಾಪುರು ಗ್ರಾಾಮದಲ್ಲಿ ಪದೇ ಪದೆ ಕೊಲೆ,ದೊಂಬಿ, ಸಾರ್ವಜನಿಕರ ಶಾಂತಿಭಂಗ ಹಾಗೂ ಕೌಟುಂಬಿಕ ಕಲಹ ಪ್ರಕರಣಗಳ ಮೂಲಕ ಸಮಾಜಕ್ಕೆೆ ಕಂಟಕವಾಗಿರುವ ನಾಲ್ವರನ್ನು ವಿಜಯನಗರ ಜಿಲ್ಲೆೆಗೆ ಓರ್ವನನ್ನು ವಿಜಯಪುರ ಜಿಲ್ಲೆೆಗೆ ಗಡಿಪಾರು ಮಾಡಲಾಗಿದೆ.
ಗಡಿಪಾರು ಆದೇಶ ಮಾಡಿದ ಎಲ್ಲರನ್ನೂ ರಾಯಚೂರು ತಾಲೂಕಿನ ಮಿರ್ಜಾಪೂರ ಗ್ರಾಾಮದವರಾಗಿದ್ದಾಾರೆ. ಮಲದಕಲ್ ಮಲ್ಲಿಕಾರ್ಜುನ ಮಾದಣ್ಣಘಿ,ಅರೋಲಿ ಭೀಮಣ್ಣ ನಾಗಪ್ಪಘಿ, ಗೋರೆಪ್ಪ ಭೀಮಣ್ಣಘಿ, ತಾಯಪ್ಪ ಗುಡ್ಡಿಿ ಹನುಮಂತ, ಅಲಾದಿ ಊದು ಹನುಮಂತು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮಲದಕಲ್ ಮಲ್ಲಿಕಾರ್ಜುನನ್ನು ವಿಜಯಪುರ ಜಿಲ್ಲೆೆಯ ಇಂಡಿ ತಾಲೂಕಿನ ಚಡಚಣ ಠಾಣೆ ವ್ಯಾಾಪ್ತಿಿಗೆ ಮಲ್ಲಿಕಾರ್ಜುನ ಮಾದಣ್ಣಘಿ, ಅರೋಲಿ ಭೀಮಣ್ಣನನ್ನು ಇಂಡಿ ಗ್ರಾಾಮೀಣ ಠಾಣೆಗೆ, ಗೋರೆಪ್ಪ ಭೀಮಣ್ಣಘಿನನ್ನು ಇಂಡಿ ತಾಲೂಕಿನ ಹೋರ್ತಿ ಠಾಣೆಗೆ, ತಾಯಪ್ಪ ಗುಡ್ಡಿಿ ಹನುಮಂತ ಎನ್ನುವನನ್ನು ಇಂಟಿ ತಾಲೂಕಿನ ಝಳಕಿ ಠಾಣೆ ವ್ಯಾಾಪ್ತಿಿಗೆ ಗಡಿಪಾರು ಮಾಡಿದ್ದರೆ, ಅಲಾದಿ ಊದು ಹನುಮಂತುನನ್ನು ವಿಜಯನಗರದ ಕೂಡ್ಲಿಿಗಿ ನಗರ ಠಾಣಾ ವ್ಯಾಾಪ್ತಿಿಗೆ ಎರಡು ತಿಂಗಳ ಅವಧಿಗೆ ಈ ಗಡಿಪಾರು ಆದೇಶ ನೀಡಲಾಗಿದೆ.
ವಾದಿ ಮತ್ತು ಪ್ರತಿವಾದಿಗಳ ಹೇಳಿಕೆಗಳು ಹಾಗೂ ದಾಖಲೆಗಳನ್ನು ಪರಿಶೀಲಿಸಿ, ನ.6 ರಂದು ಸಹಾಯಕ ಆಯುಕ್ತರಾದ ಗಜಾನನ ಬಾಳೆ ಅವರು ಎಲ್ಲಾ ಐವರನ್ನು ಗಡಿಪಾರು ಮಾಡಿ ಆದೇಶಿಸಿದ್ದಾರೆ.
ಗಡಿಪಾರುಗೊಂಡ ಆರೋಪಿತರು ಪ್ರತಿ ವಾರ ನಿಗದಿಗೊಳಿಸಿದ ಠಾಣೆಗಳಿಗೆ ಹಾಜರಾಗಬೇಕು ಎಂದು ಆದೇಶಿಸಲಾಗಿದೆ. ಗಡಿಪಾರು ಆದೇಶ ಉಲ್ಲಂಘಿಸಿದರೆ ಗಂಭೀರ ಪರಿಸ್ಥಿಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ. ಈ ಗಡಿಪಾರು ಅವಧಿಯಲ್ಲಿ ರಾಯಚೂರು ವ್ಯಾಾಪ್ತಿಿಗೆ ಬಂದಲ್ಲಿ ಸೂಕ್ತ ಕ್ರಮಕ್ಕೆೆ ಶಿಾರಸು ಮಾಡಲಾಗಿದೆ.ರಾಯಚೂರು ತಾಲೂಕಿನ ಇಡಪನೂರು ಠಾಣಾ ವ್ಯಾಾಪ್ತಿಿಯ ಒಂದೇ ಗ್ರಾಾಮದ ಐವರ ಗಡಿಪಾರು ಮಹತ್ವದ ಆದೇಶ ಇದಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿಿದೆ.

