ವರುಣ ಕ್ಷೇತ್ರಕ್ಕೂ ಸಿದ್ದರಾಮಯ್ಯನವರಿಗೂ ಒಂದು ರೀತಿಯ ಅವಿನಾಭಾವ ಸಂಬಂಧ ಇದೆ. 2008ರಲ್ಲಿ ಕ್ಷೇತ್ರ
ವಿಂಗಡಣೆಯಾದ ನಂತರದಲ್ಲಿ ಆಸ್ತಿತ್ವಕ್ಕೆ ಬಂದ ವರುಣ ಕ್ಷೇತ್ತದಿಂದ ಸಿದ್ದರಾಮಯ್ಯನವರು ಗೆದ್ದಾಗಲೆಲ್ಲಾ ಅದೃಷ್ಟ ಖುಲಾಯಿಸಿದೆ.
ಅದು ಹೇಗೆಂದರೆ, 2008ರಲ್ಲಿ ಗೆದ್ದಾಗ ವಿರೋಧಪಕ್ಷದ ನಾಯಕರಾದರು. 2013ರಲ್ಲಿ ಗೆದ್ದಾಗ ಪ್ರಥಮ
ಬಾರಿಗೆ ಮುಖ್ಯಮಂತ್ರಿಯಾದರು. 2023ರಲ್ಲಿ ಗೆದ್ದಾಗ 2ನೇ ಬಾರಿಗೆ ಸಿಎಂ ಪಟ್ಟ ಅಲಂಕರಿಸಿದ್ದಾರೆ. ವರುಣ ಕ್ಷೇತ್ರ ರಚನೆ ಆಗುವುದಕ್ಕೂ ಮೊದಲು ಅವರಿಗೆ ರಾಜಕೀಯ ಜನ್ಮ ನೀಡಿದ್ದೇ ಶ್ರೀ ಚಾಮುಂಡೇಶ್ವರಿ ಕ್ಷೇತ್ರ.
ಇಂದು ಸಿದ್ದರಾಮಯ್ಯನವರನ್ನು ಲಿಂಗಾಯಿತರು ಮತ್ತು ಒಕ್ಕಲಿಗರ ವಿರೋಧಿ ಎಂದು ಹೇಳಾಗುತ್ತಿದೆ. ಆಶ್ಚರ್ಯವೆಂದರೆ ಅವರು ಗೆದ್ದು ರಾಜಕೀಯ ಅಧಿಕಾರ ಹಿಡಿದಿದ್ದು ಲಿಂಗಾಯಿತರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ವರುಣ ಮತ್ತು ಒಕ್ಕಲಿಗರು ಹೆಚ್ಚಿರುವ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಿಂದ ಎಂಬುದು ಉಲ್ಲೇಖಾರ್ಹ.
2018ರಲ್ಲಿ ವರುಣ ಕ್ಷೇತ್ರವನ್ನು ತಮ್ಮ ಪುತ್ರ ಯತೀಂದ್ರ ಅವರಿಗೆ ಬಿಟ್ಟುಕೊಟ್ಟು ಶ್ರೀ ಚಾಮುಂಡೇಶ್ವರಿ ಕ್ಷೇತ್ರದಿಂದ ಸೋತರೂ ಬಾದಾಮಿ ಕ್ಷೇತ್ರದಿಂದ ಗೆದ್ದರು.