ಸುದ್ದಿಮೂಲ ವಾರ್ತೆ ರಾಯಚೂರು, ೆ.12:
ಕೇಂದ್ರ ಸರ್ಕಾರ ದುಡಿಯುವ ವರ್ಗದ ವಿರೋಧಿಯಾಗಿ ನಾಲ್ಕು ಕಾರ್ಮಿಕ ಸಂಹಿತೆ, ವಿಬಿಜಿ ರಾಮ್ಜಿ ಯೋಜನೆ ಕಾಯಿದೆ ವಾಪಾಸ್ ಪಡೆಯಲು ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮತ್ತು ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಗಳ ಸಾರ್ವತ್ರಿಿಕ ಮುಷ್ಕರದ ಹಿನ್ನೆೆಲೆಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಇಂದು ನಗರದಲ್ಲಿ ಸ್ವಯಂ ಪ್ರೇರಿತ ಸಾರ್ವತ್ರಿಿಕ ಮುಷ್ಕರಕ್ಕೆೆ ಕರೆ ನೀಡಿದ ಹಿನ್ನೆೆಲೆಯಲ್ಲಿ ಎಲ್ಲ ವಹಿವಾಟು, ವ್ಯಾಾಪಾರ, ಸರಕು ಸಾಗಣೆ, ಸಂಚಾರ ಎಂದಿನಂತೆ ನಡೆದಿತ್ತುಘಿ. ಹೋರಾಟ ಪ್ರತಿಭಟನೆಗೆ ಸೀಮಿತವಾಗಿತ್ತುಘಿ.
ನಗರದ ಅಂಬೇಡ್ಕರ್ ವೃತ್ತದಿಂದ ಟಿಪ್ಪುು ಸುಲ್ತಾಾನ ವೃತ್ತದವರೆಗೆ ಬೃಹತ್ ಪ್ರತಿಭಟನೆ ನಡೆಸಿದರು. ತಕ್ಷಣ ನಾಲ್ಕು ಕಾರ್ಮಿಕ ಕಾಯಿದೆಗಳ ರದ್ದುಗೊಳಿಸಬೇಕು, ನರೇಗಾ ಯೋಜನೆ ಪುನರ್ ಸ್ಥಾಾಪಿಸಿ, ವಿಬಿಜಿ ಗ್ರಾಾಮ್ ಜಿ ಕಾಯ್ದೆೆ ರದ್ದುಗೊಳಿಸಿ, ಭೂ ಸ್ವಾಾಧೀನ ಕಾಯ್ದೆೆ ಹಿಂಪಡೆಯಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂದಿರುವ ಭೂ ಸುಧಾರಣಾ, ಎಪಿಎಂಸಿ, ಜಾನುವಾರು ಸಂರಕ್ಷಣಾ ತಿದ್ದುಪಡಿ ಕಾಯ್ದೆೆ ಹಿಂಪಡೆಯಬೇಕು, ವಿದ್ಯುತ್ ಖಾಸಗೀಕರಣ ಬಿಡಬೇಕು, ಬೀಜ ಮಸೂದೆ ಕಾಯ್ದೆೆ ಹಿಂಪಡೆಯಬೇಕು, ವಿಮಾ ತಿದ್ದುಪಡಿ, ಶಾಂತಿ ಕಾಯ್ದೆೆ ರದ್ದುಗೊಳಿಸಬೇಕು,ಕರ್ನಾಟಕ ಸರ್ಕಾರ ಕಾರ್ಮಿಕ ಸಂಹಿತೆಗಳಿಗೆ ಹೊರಡಿಸಿದ ಆದೇಶ ವಾಪಸ್ಸು ಪಡೆಯಬೇಕು ಮತ್ತು ಒಕ್ಕೂಟ ಸರ್ಕಾರ ತಂದಿರುವ ಜನವಿರೋಧಿ ಮಸೂದೆಗಳನ್ನು ವಿರೋಧಿಸಬೇಕು, ಕನಿಷ್ಠ ವೇತನ ಹೆಚ್ಚಳದ ಕುರಿತು ಕನಿಷ್ಠ ವೇತನ ಸಲಹಾ ಮಂಡಳಿ ನೀಡಿರುವ ಶಿಾರಸ್ಸು ಅಂತಿಮ ಅಧಿಸೂಚನೆಯಾಗಿ ಹೊರಡಿಸಬೇಕು ಎಂದು ಆಗ್ರಹಿಸಿದ ಮನವಿಯನ್ನು ಜಿಲ್ಲಾಾಧಿಕಾರಿ ಮೂಲಕ ಪ್ರಧಾನಮಂತ್ರಿಿಗೆ ಸಲ್ಲಿಸಲಾಯಿತು.
ಪ್ರತಿಭಟನಾ ಮುಷ್ಕರದಲ್ಲಿ ಜೆಸಿಟಿಯು ಹಾಗೂ ಕರ್ನಾಟಕ ಸಂಯುಕ್ತದ ಹೆಚ್.ಪದ್ಮಾಾ, ಎನ್.ಎಸ್.ವೀರೇಶ, ಕೆ.ಜಿ.ವೀರೇಶ, ಡಿ.ಎಸ್.ಶರಣಬಸವ, ಪ್ರಭಾಕರ ಪಾಟೀಲ,ಶ್ರೀಶೈಲರೆಡ್ಡಿಿ, ಅಜೀಜ್ ಜಾಗೀರದಾರ್, ಕಾಶಪ್ಪ, ಅಮೀರ್ ಅಲಿ, ಗೋವಿಂದ, ಮಹೇಶ ಚೀಕಲಪರ್ವಿ,ಸಲಾವುದ್ದೀನ್, ಎಂ.ಶರಣೇಗೌಡ, ಖಾಜಾ ಅಸ್ಲಾಾಂಘಿ, ಜಿಲಾನಿ ಪಾಷಾ, ಜಿಎಲ್ರೆಡ್ಡಿಿಘಿ, ಮಾರೆಪ್ಪ ವಕೀಲ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಪ್ರತಿಭಟನೆಗೆ ಸೀಮಿತವಾದ ಸಾರ್ವತ್ರಿಕ ಮುಷ್ಕರ ನಾಲ್ಕು ಕಾರ್ಮಿಕ ಸಂಹಿತೆಗಳ ರದ್ದು ಪಡಿಸಲು ಆಗ್ರಹ

