ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.22: ಸರ್ಕಾರದ ಕಳಪೆ ಶಿಕ್ಷಣ ವ್ಯವಸ್ಥೆಯಿಂದಾಗಿ ಪಿಯು ಮಕ್ಕಳ ಭವಿಷ್ಯವನ್ನು ಅಂಧಕಾರಕ್ಕೆ ತಳ್ಳಿದ ಸರ್ಕಾರ ಹಾಗೂ ಆಮ್ ಆದ್ಮಿ ಪಕ್ಷದ ಉಮೇದುವಾರಿಕೆಯ ಸಮಗ್ರ ಚಿತ್ರಣವನ್ನ ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್ ಕಾಳಪ್ಪ ಅವರು, ಇಂದು ಬೆಂಗಳೂರಿನ ರೈಲ್ವೆ ಪ್ಯಾರಲೆಲ್ ರಸ್ತೆಯಲ್ಲಿರುವ ಆಮ್ ಆದ್ಮಿ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನ ನಡೆಸಿದ್ದಾರೆ.
ಇಂದು ಮುಖ್ಯವಾದ ವಿಚಾರವನ್ನ ಬ್ರಿಜೇಶ್ ಕಾಳಪ್ಪ ಅವರು ತಿಳಿಸಿದ್ದು. ಕರ್ನಾಟಕದ ಪಿಯುಸಿ ಫಲಿತಾಂಶ ಬಂದಿದ್ದು. ಖಾಸಗಿ ಶಾಲೆಗಳಲ್ಲಿ 76.67% ಫಲಿತಾಂಶ, ಸರ್ಕಾರಿ ಶಾಲೆಗಳಲ್ಲಿ 63.63% ಫಲಿತಾಂಶ ಬಂದಿದೆ. ಈ ಹೋಲಿಕೆ ಮಾಡುವುದು ತುಂಬಾ ಅವಶ್ಯಕ ಇದೆ. ಯಾಕಂದ್ರೆ ಇಂದು ನಮ್ಮ ಆಮ್ ಆದ್ಮಿ ಪಕ್ಷದ ನಿಂತಿರುವುದೇ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯ ವಿಚಾರದಲ್ಲಿ ಹಾಗಾಗಿ ಹೋಲಿಕೆಯನ್ನ ಮಾಡಿದ್ದಾರೆ. ಕಳೆದ ಕೊವಿಡ್ ಸಮಯದಲ್ಲಿ ಎಲ್ಲಾ ರಾಜ್ಯದಲ್ಲೂ ಮಕ್ಕಳನ್ನ ತೇರ್ಗಡೆ ಮಾಡಲಾಗಿತ್ತು.
ಆದರೆ, ದೆಹಲಿಯಲ್ಲಿ 2021 ರಲ್ಲಿ 99.96% ರಷ್ಟು ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಬಂದಿದೆ. 2018 – 90.64%, 2019 – 94.24%, 2020 – 97.92%, 2021 – 99.96% ಫಲಿತಾಂಶಗಳು ಬಂದಿದೆ. ಅಂದ್ರೆ ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳಲ್ಲಿ 63.63% ಪಿಯುಸಿ ಫಲಿತಾಂಶ ಬಂದರೆ. ದೆಹಲಿಯಲ್ಲಿ 99.96% ಬಂದಿದೆ ಅಂದರೆ 100 ಕ್ಕೆ 100% ಸರ್ಕಾರಿ ಶಾಲೆಗಳ ರಿಸಲ್ಟ್ ಆಗಿದೆ.
ಪಾಸಿಂಗ್ ಅಂಕಗಳು ತೆಗೆದುಕೊಂಡಿರುವ ವಿವರ ಹೇಳೋದಾದ್ರೆ:
2018- 90.64%
2019 – 94.24%
2020 – 97.92%
2021 – 99.96%
100 ಕ್ಕೆ 100 ಅಂಕ ಪಡೆದ ಸರ್ಕಾರಿ ಶಾಲೆಗಳ ವಿವರ 2016 ರಲ್ಲಿ 130 ಶಾಲೆಗಳು, 2017 ರಲ್ಲಿ 112 ಶಾಲೆಗಳು, 2018 ರಲ್ಲಿ 168 ಶಾಲೆಗಳು, 2019 ರಲ್ಲಿ 203 ಶಾಲೆಗಳು, 2020 ರಲ್ಲಿ 396 ಶಾಲೆಗಳು ಹಾಗೆ 2021 ರಲ್ಲಿ 875 ಶಾಲೆಗಳು ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದ್ದಾರೆ.
ದೆಹಲಿಯಲ್ಲಿ ಖಾಸಗಿ – ಸರ್ಕಾರಿ ಶಾಲೆಗಳ ಪಾಸಿಂಗ್ ಪರ್ಸೆಂಟೆಜ್
ದೆಹಲಿ ಪೂರ್ವ – ಖಾಸಗಿ ಶಾಲೆ – 99.70% ಸರ್ಕಾರಿ ಶಾಲೆ – 99.95 %
ದೆಹಲಿ ಪಶ್ಚಿಮ – ಖಾಸಗಿ ಶಾಲೆ – 99.73% ಸರ್ಕಾರಿ ಶಾಲೆ – 99.96%
ಇದನೆಲ್ಲಾ ನೋಡ್ತಾ ಇದ್ರೆ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳ ಅಂಕಗಳೇ ಹೆಚ್ಚಾಗಿದ್ದಾವೆ. ಸರ್ಕಾರಿ ಶಾಲೆಗಳನ್ನ ನೀವು ಮಾದರಿ ಶಾಲೆಗಳನ್ನಾಗಿ ಮಾಡಬಹುದು. ರಾಜ್ಯದಲ್ಲಿ ಪ್ರತಿ ವರ್ಷ ಪೋಷಕರಿಗೆ ತಮ್ಮ ಮಕ್ಕಳ ಶಿಕ್ಷಣದ 50,000 ರಿಂದ 1 ಲಕ್ಷದವರೆಗೆ ಶುಲ್ಕವನ್ನ ಕೊಟ್ಟು ಸೀಟ್ ತೆಗೆದುಕೊಳ್ಳುವ ಸ್ಥಿತಿ ಎದುರಾಗಿದೆ. ಹಾಗಾಗಿ ಇಂದು ಆಮ್ ಆದ್ಮಿ ಯಾಕೆ ಇದನೆಲ್ಲಾ ಹೇಳ್ತಾ ಇದೆ ಅಂದ್ರೆ ಕರ್ನಾಟಕದ ಸರ್ಕಾರಿ ಶಾಲೆಗಳಿಗೆ ಹೊಸ ರೂಪವನ್ನ ಕೊಟ್ಟು ತಮ್ಮ ಮಕ್ಕಳಿಗೆ ಉತ್ತಮ ಫಲಿತಾಂಶ ಜೊತೆಗೆ ಭವಿಷ್ಯವನ್ನ ನೀಡುವುದು ಆಮ್ ಆದ್ಮಿ ಪಕ್ಷದ ಧೇಯವಾಗಿದೆ. ಅಲ್ಲದೇ ಪರೀಕ್ಷೆಗಳಲ್ಲಿ ಮಕ್ಕಳ ಫೇಲ್ ಆಗ್ತಾ ಇದ್ದಾರೆ. ಅದಕ್ಕೆ ಅವರಲ್ಲಾ ಕಾರಣ ವ್ಯವಸ್ಥೆ. ಇಲ್ಲಿನ ವ್ಯವಸ್ಥೆಯನ್ನ ಬದಲಿಸಬೇಕಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ವಿಭಾಗದ ಸಂಸದ ಪಂಚರ್ ಸೂರ್ಯ ಅವರು ಹೇಳಿದ್ದರು ಪಂಚರ್ ಹಾಕುವವರಿಗೆ ಏನ್ರಿ ಮಾಡ್ತಾರೆ ಎಂದಿದ್ದರು. ಆದ್ರೆ ನಿನ್ನೆ ಬಂದಿರುವ ಫಲಿತಾಂಶದಲ್ಲಿ ಅವರದೇ ಕ್ಷೇತ್ರದ ತಬಸುಂ ಶೇಖ್ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಬಂದಿದ್ದಾರೆ. ಕನಿಷ್ಠ ಪಕ್ಷ ಅವರಿಗೆ ಮಾನವೀಯತೆ ಇದ್ರೆ ಅವರನ್ನ ಭೇಟಿ ಮಾಡಿ ಕ್ಷಮೆಯಾಚಿಸಿ, ಶುಭಶಾಯಗಳನ್ನ ತಿಳಿಸಲಿ ಎಂದು ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯದರ್ಶಿಗಳಾದ ದರ್ಶನ್ ಜೈನ್ ಹಾಗೂ ಗಂಗಾದರ್ ಭಾಗವಹಿಸಿದ್ದರು.