ಸುದ್ದಿಮೂಲ ವಾರ್ತೆ ಕಲಬುರಗಿ, ೆ.21:
ಕಲೆ, ಸಾಹಿತ್ಯ, ರಂಗಭೂಮಿ, ಸಂಗೀತಕ್ಕೆೆ ಕರ್ನಾಟಕ ದೇಶದಲ್ಲಿಯೇ ಹೆಸರುವಾಸಿ. ನಮ್ಮ ಆಚಾರ-ವಿಚಾರ, ಸಂಸ್ಕೃತಿ ಯುವ ಪೀಳಿಗೆಗೆ ಪರಿಚಯಿಸಲು ಇಂತಹ ಕಲೆ, ಸಂಗೀತ, ನಾಟಕಕ್ಕೆೆ ಪ್ರೋೋತ್ಸಾಾಹಿಸುವ ನಿಟ್ಟಿಿನಲ್ಲಿ ಸರ್ಕಾರ ಆರ್ಥಿಕ ಶಕ್ತಿಿ ನೀಡಿ ರಂಗಭೂಮಿಯನ್ನು ಪೋಷಿಸಬೇಕು ಎಂದು ಶಾಸಕ ಎಂ.ವೈ. ಪಾಟೀಲ ಹೇಳಿದರು.
ಜಿಲ್ಲಾಡಳಿತ, ಕಲಬುರಗಿ ನೆಕ್ಸ್ಟ್ೌಂಡೇಷನ್ ಸಂಸ್ಥೆೆಯು ಬೆಂಗಳೂರಿನ ರಂಗ ಶಂಕರ ಸಹಯೋಗದೊಂದಿಗೆ ಕಲಬುರಗಿ ನಗರದ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಇದೇ ೆಬ್ರವರಿ 21 ರಿಂದ 28 ರವರೆಗೆ ನಡೆಯಲಿರುವ ಕಲಬುರಗಿ ನಾಟಕೋತ್ಸವ-2026ಕ್ಕೆೆ ನಗಾರಿ ಬಾರಿಸುವ ಚಾಲನೆ ನೀಡಿ ಮಾತನಾಡಿದರು.
ಕಲೆ, ನಾಟಕ, ಸಂಗೀತ ಇದು ಮನುಷ್ಯನ ಹವ್ಯಾಾಸ. ಸರ್ವ ರೋಗಕ್ಕೆೆ ಮದ್ದು ಸಂಗೀತ ಎನ್ನುವಂತೆ ನಾಟಕ, ರಂಗಭೂಮಿಯು ನಿಜವಾದ ಕಲಾವಿದನನ್ನು ಸೃಷ್ಠಿಿಸುತ್ತದೆ. ಆ ನಿಟ್ಟಿಿನಲ್ಲಿ ಸುಜಾತಾ ಜಂಗಮಶೆಟ್ಟಿಿ ನೇತೃತ್ವದಲ್ಲಿ ಕಲಬುರಗಿ ರಂಗಾಯಣಯವು ಸಹ ಹೆಜ್ಜೆೆ ಇಟ್ಟಿಿದೆ. ನಮ್ಮ ದೇವಸ್ಥಾಾನಗಳಲ್ಲಿ ಇಂದಿಗೂ ನಾವು ಶಿಲ್ಪಕೆತ್ತನೆಗಳನ್ನು ಕಾಣುತ್ತೇವೆ. ನಮ್ಮಲ್ಲಿ ದೊಡ್ಡಾಾಟ ತುಂಬಾ ೇಮಸ್. ಆದರೆ ಪ್ರಚಾರದ ಕೊರತೆ ಅದು ಬೆಳಕಿಗೆ ಬಂದಿಲ್ಲ. ಅದೇ ಮಂಗಳೂರಿನ ಯಕ್ಷಗಾನ ವಿಶ್ವಪ್ರಸಿದ್ದಿ ಆಯ್ತು ಎಂದು ಕೊರಗಿನಿಂದ ನುಡಿದರು.
ಕಲಬುರಗಿ ವಿಭಾಗದ ಪ್ರಾಾದೇಶಿಕ ಆಯುಕ್ತೆೆ ಜಹೀರಾ ನಸೀಮ್ ಮಾತನಾಡಿ, ರಂಗಶಂಕರ ಸಂಸ್ಥೆೆಯು ಪ್ಯಾಾಕೇಜ್ ರೀತಿಯಲ್ಲಿ ಏಳು ದಿನಗಳ ಕಾಲ ನಾಟಕೋತ್ಸವದ ರುಚಿ ಉಣಬಡಿಸಲು ಕಲಬುರಗಿಗೆ ಬಂದಿದೆ. ವಿಶೇಷವಾಗಿ ಯುವ ಸಮೂಹ ಮೊಬೈಲ್ ಗೀಳು, ಸಾಮಾಜಿಕ ಜಾಲತಾಣನಿಂದ ಹೊರಬಂದು ಇಂತಹ ರಂಗಚಟುವಟಿಕೆ ಕಾರ್ಯಕ್ರಮಗಳನ್ನು ವೀಕ್ಷಿಸಬೇಕು ಎಂದು ಕರೆ ನೀಡಿದರು.
ನಾಟಕ ನೋಡಿ,ಜೀವನ ಬದಲಾಗುತ್ತೆೆ : ರಂಗ ಶಂಕರ ಸಂಸ್ಥೆೆಯ ಅರುಂಧತಿ ನಾಗ್ ಮಾತನಾಡಿ, ಇಂದಿನಿಂದ 7 ದಿನಗಳ ಕಾಲ ಕಲಬುರಗಿ ನಾಟಕೋತ್ಸವದಲ್ಲಿ ಸುಮಾರು 40 ವರ್ಷ ಅನುಭವವುಳ್ಳ ತಂಡಗಳಿಂದ ವಿಭಿನ್ನ ಪ್ರಕಾರದ ಕಲಬುರಗಿ ಜನರದ ಮುಂದೆ ಪ್ರದರ್ಶನಕ್ಕಿಿಡಲಾಗುತ್ತಿಿದೆ. ಕಲಬುರಗಿ ಜಿಲ್ಲಾಡಳಿತ, ರಂಗಾಯಣ ನಮ್ಮೊೊಂದಿಗಿದೆ. ಕಲಬುರಗಿ ಜನ ಬಂದಿ ನಾಟಕ ನೋಡಬೇಕು. ನಾಟಕ ಜೀವನ ಬದಲಾಯಿಸುತ್ತದೆ ಎಂದು ಹೆಮ್ಮೆೆಯಿಂದ ನುಡಿದರು.
ಶಂಕರ ನಾಗ್ ಅವರ ಸವಿನೆನಪಿಗೆ ಬೆಂಗಳೂರಿನಲ್ಲಿ ರಂಗ ಶಂಕರ ಸಂಸ್ಥೆೆ ಸ್ಥಾಾಪಿಸಿದ್ದು, 21 ವರ್ಷದಿಂದ ನಿರಂತರ ರಂಗಭೂಮಿ ಚಟುವಟಿಕೆ ನಡೆಸಲಾಗುತ್ತಿಿದೆ. ಕೇವಲ 2,500 ರೂ. ಬಾಡಿಗೆ ಪಡೆದು ನಾಟಕ ಪ್ರದರ್ಶನಕ್ಕೆೆ ಅವಕಾಶ ಮಾಡಿಕೊಡಲಾಗುತ್ತಿಿದೆ. ಇಲ್ಲಿ ಮದುವೆ, ್ಯಾಶನ್ ಗೆ ಅವಕಾಶ ಇಲ್ಲ, ಕೇವಲ ನಾಟಕ, ರಂಗಭೂಮಿಗೆ ವೇದಿಕೆ ಅವಕಾಶ ಕಲ್ಪಿಿಸಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರುಗಳಾದ ಜಗದೇವ ಗುತ್ತೇದಾರ್, ತಿಪ್ಪಣ್ಣಪ್ಪ ಕಮಕನೂರ, ಜೆಸ್ಕಾಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಗ್ಯಾಾರಂಟಿ ಯೋಜನೆಗಳ ಅನುಷ್ಠಾಾನ ಪ್ರಾಾಧಿಕಾರದ ಜಿಲ್ಲಾ ಅಧ್ಯಕ್ಷೆ ಚಂದ್ರಿಿಕಾ ಪರಮೇಶ್ವರ್, ನಗರಾಭಿವೃದ್ಧಿಿ ಪ್ರಾಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ವರ್ಷಾ ರಾಜೀವ ಜಾನೆ, ಜಿಲ್ಲಾಧಿಕಾರಿ ಬಿ. ೌಜಿಯಾ ತರನ್ನುಮ್, ಎಸ್.ಪಿ.ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾದಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆೆ ಸಾಹಿತ್ಯಾಾ ಆಲದಕಟ್ಟಿಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ, ಕಲಬುರಗಿ ರಂಗಾಯಣ ಆಡಳಿತಾಧಿಕಾರಿ ಸಿದ್ರಾಾಮ ಶಿಂಧೆ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿಿತರಿದ್ದರು. ಕಲಬುರಗಿ ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿಿ ಸ್ವಾಾಗತಿಸಿದರು. ಶಿವಾನಂದ ಅಣಜಗಿ ನಿರೂಪಿಸಿದರು.
ಕಲಬುರಗಿ ನಾಟಕೋತ್ಸವಕ್ಕೆ ಚಾಲನೆ ಕಲೆ-ಸಂಗೀತಕ್ಕೆ ಕರ್ನಾಟಕ ಹೆಸರುವಾಸಿ, ಸರ್ಕಾರ ಪ್ರೋತ್ಸಾಹಿಸಬೇಕಿದೆ – ಎಂ.ವೈ.ಪಾಟೀಲ

