ಸುದ್ದಿಮೂಲ ವಾರ್ತೆ
ಬೆಂಗಳೂರು, ಅ. 11 : ಉತ್ತಮ ಸಮಾಜ ನಿರ್ಮಾಣಕ್ಕೆ ಒಳ್ಳೆಯ ಭೂಮಿಕೆಯನ್ನು ನೀಡಿ ವ್ಯಕ್ತಿತ್ವ ವಿಕಸನಕ್ಕೆ ಶ್ರಮದಾನ ಮಾಡುವ ಸ್ವಯಮ ಸೇವಕರು ಅಭಿನಂದನಾರ್ಹರು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು.
ರಾಜಭವನದ ಬ್ಯಾಂಕ್ವೆಟ್ ಹಾಲ್ನಲ್ಲಿ ಹಮ್ಮಿಕೊಳ್ಳಲಾದ 2021-22ನೇ ಸಾಲಿನ ಎನ್ಎನ್ಎಸ್ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿದ ನಂತರ ವಿಜೇತರರಿಗೆ ಪ್ರಶಸ್ತಿ ನೀಡಿ ಮಾತನಾಡಿದರು.
ರಾಷ್ಟ್ರೀಯ ಸಮಾಜ ಸೇವೆ ಶಿಕ್ಷಣದ ಜೊತೆಯಲ್ಲಿಯೇ ಸಮಾಜ ಸೇವಾ ಮನೋಭಾವನೆಯನ್ನು ಕಲಿಸುತ್ತದೆ. ನನಗಲ್ಲ ನಿನಗೆ ಎಂಬ ಧ್ಯೇಯ ವಾಕ್ಯದೊಂದಿಗೆ ಎನ್ಎಸ್ಎಸ್ ಕೆಲಸ ನಿರ್ವಹಿಸುತ್ತಿದೆ. ಕರ್ತವ್ಯ ಪ್ರಜ್ಞೆ, ಸೇವಾಭಾವ ಹಾಗೂ ವಿಶ್ವಸಾರ್ಹತೆಯಿಂದ ನಮ್ಮ ಸ್ವಯಂಸೇವಕರು ಸಮಾಜದ ಹಾಗೂ ಪ್ರಜೆಗಳ ನಡುವಿನ ಕೊಂಡಿಯಾಗಿದ್ದಾರೆ ಎಂದು ತಿಳಿಸಿದರು.
ಕ್ರೀಡಾ ಸಚಿವ ಬಿ.ನಾಗೇಂದ್ರ ಮಾತನಾಡಿ, ದೇಶದಲ್ಲಿ ಸುಮಾರು 45 ಲಕ್ಷ ಹಾಗೂ ರಾಜ್ಯದಲ್ಲಿ 6.40 ಲಕ್ಷ ಸ್ವಯಂ ಸೇವಕರಿದ್ದಾರೆ. ಈ ಜಗತ್ತೇ ನನ್ನ ಕುಟುಂಬ ಎಂಬಂತೆ ಸ್ವಯಂ ಸೇವಕರು ಕೆಲಸ ನಿರ್ವಹಿಸುತ್ತಿದ್ದಾರೆ. ಶಿಕ್ಷಣದ ಜೊತೆಯಲ್ಲಿಯೇ ಸೇವೆಗೆ ಸಹ ತಮ್ಮ ಸಮಯವನ್ನು ಮುಡುಪಿಡುತ್ತಿದ್ದಾರೆ. ನಮ್ಮ ಯುವಜತೆ ಸೇವಾ ಮನೋಭಾವ ಬೆಳೆಸಿ ರಾಜ್ಯ ಹಾಗೂ ದೇಶದ ಏಳಿಗೆಗೆ ಶ್ರಮಿಸಬೇಕೆಂದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯ, ಕಾಲೇಜುಗಳ ಉತ್ತಮ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳು, ವಿದ್ಯಾರ್ಥಿಗಳಿಗೆ ಎನ್ಎಸ್ಎಸ್ ರಾಜ್ಯ ಪ್ರಶಸ್ತಿ -2021 ಅನ್ನು ಪ್ರದಾನ ಮಾಡಲಾಯಿತು. ವೇದಿಕೆಯಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್, ರಾಜ್ಯ ಎನ್ ಎಸ್ ಎಸ್ ಅಧಿಕಾರಿ ಡಾ. ಪ್ರತಾಪ್ ಲಿಂಗಯ್ಯ, ರಾಜ್ಯ ಎನ್ಎಸ್ಎಸ್ ಅಧಿಕಾರಿ ಪ್ರ್ರಾದೇಶಿಕ ಕಚೇರಿ ನಿರ್ದೇಶಕರಾದ ಡಿ.ಕಾರ್ತಿಗೇಯನ್ ಉಪಸ್ಥಿತರಿದ್ದರು.