ಸುದ್ದಿಮೂಲ ವಾರ್ತೆ
ಕೊಪ್ಪಳ,ಆ.30: ಈಗ ಕೆಲವರು ಲೋಕಸಭಾ ಚುನಾವಣೆಯ ನಂತರ ಗ್ಯಾರಂಟಿ ಯೋಜನೆಗಳು ಬಂದ ಆಗುತ್ತವೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ನಾವು ಐದು ವರ್ಷ ಇರುತ್ತೇವೆ. ಐದು ವರ್ಷವೂ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಮುಟ್ಟಿಸುತ್ತೇವೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಅವರು ಇಂದು ಕೊಪ್ಪಳದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು ಗ್ಯಾರಂಟಿ ಯೋಜನೆಯ ನಂತರ ಅಭಿವೃದ್ದಿಗೆ ಹಣವಿಲ್ಲ ಎನ್ನುತ್ತಿದ್ದಾರೆ. ನಾವು ಅಭಿವೃದ್ದಿಗೂ ಹಣ ನೀಡುತ್ತದೆ ಎಂದರು.
ಕಾಂಗ್ರೆಸ್ ಪಕ್ಷ ಘೋಷಿತ ಗ್ಯಾರಂಟಿಗಳನ್ನು ಪೂರ್ಣಗೊಳಿಸುತ್ತಿದ್ದೇವೆ. ನಾವು 100 ದಿನದಲ್ಲಿ ನಾಲ್ಕು ಯೋಜನೆಗಳನ್ನುಜಾರಿಗೊಳಿಸಿದ್ದೇವೆ.ಗ್ಯಾರಂಟಿ ಯೋಜನೆಗಳನ್ನು ಪೂರ್ಣಗೊಳಿಸಲು ಆಗುವುದಿಲ್ಲ ಎಂದಿದ್ದರು.
ನುಡಿದಂತೆ ನಡೆದ ಸರಕಾರ ಸಿದ್ದರಾಮಯ್ಯ ಸರಕಾರ. ಕೊಪ್ಪಳ ಜಿಲ್ಲೆಯಲ್ಲಿ 2.78 ಲಕ್ಷ ಫಲಾನುಭವಿಗಳಿಗೆ ಹಣ ಜಮಾ ಆಗುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ 55 ಕೋಟಿ ಹಣ ಫಲಾನುಭವಿಗಳ ಅಕೌಂಟಿಗೆ ಜಮಾ ಆಗುತ್ತದೆ. ವರ್ಷಕ್ಕೆ 645 ಕೋಟಿ ರೂಪಾಯಿ ಜಮಾಮಾಡುತ್ತಿವೆ. ಮಹಿಳೆಯರು ಸ್ವಾವಲಂಬಿಗಳಾಗುತ್ತಾರೆ. ನಮ್ಮ ಸರಕಾರ ದಿವಾಳಿಯಾಗುತ್ತೆ ಎಂದಿದ್ದರು.
ಆದರೆ ಬಡವರಿಗೆ ದುಡ್ಡ ಕೊಟ್ಟರೆ ರಾಜ್ಯ ದಿವಾಳಿಯಾಗುವುದಿಲ್ಲ. ದೇಶದಲ್ಲಿ ಕೋಟಿಗಟ್ಟಲೆ ಹಣತೆಗೆದುಕೊಂಡು ಹೋದರೆ ದಿವಾಳಿಯಾಗುವುದಿಲ್ಲ ಎಂದು ಪ್ರಶ್ನಿಸಿದರು.
ಇಷ್ಟರಲ್ಲಿಯೆ ಯುವನಿಧಿ ಯೋಜನೆ ಆರಂಭವಾಗುತ್ತದೆ. ಅಕ್ಕಿ ಕೊಡಲು ಕೇಂದ್ರ ಸರಕಾರ ಕೊಡಲಿಲ್ಲ. ಗೌಡಾನಿನಲ್ಲಿತ್ತು. ಕೇಂದ್ರ ಸರಕಾರ ನಮ್ಮ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡಿತು.ಕಾಂಗ್ರೆಸ್ ಮಾತ್ರ ಬಡವರ ಕಣ್ಣೀರು ಒರೆಸುವ ಕೆಲಸ ಮಾಡುತ್ತದೆ.
ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ ಬರಘೋಷಣೆ ಮಾಡಿ ರೈತರಿಗೆ ಅನುಕೂಲ ಮಾಡುತ್ತವೆ. ಯಾರು ಎದೆಗುಂದೋದು ಬೇಡ. ಈಗಾಗಲೇ ಸಮಿಕ್ಷೆ ಮಾಡಿ ಬರಘೋಷಣೆ ಮಾಡ್ತೀವಿ ಎಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಮಾತನಾಡಿ 100 ದಿನ ಪೊರೈಸಿದ ಕಾಂಗ್ರೆಸ್ ಸರಕಾರ ಈಗ ಗೃಹಲಕ್ಷ್ಮಿ ಕೊಡುಗೆ ನೀಡಿದೆ. ಹಿಂದೆಯೂ ಘೋಷಿತ ಭರವಸೆಗಳನ್ನು ನೀಡಿದ್ದೇವು. ನಂತರ ಅಧಿಕಾರಕ್ಕೆ ಬಂದ ಡಬಲ್ ಎಂಜನ್ ಸರಕಾರ ಹಿಂದಿನ ಯೋಜನೆಗಳನ್ನು ನಿಲ್ಲಿಸಿದೆ. ಕೇಂದ್ರದಲ್ಲಿ 9 ವರ್ಷ ಆಡಳಿತ ನಡೆಸಿದ ಸರಕಾರ ಜನರಿಗೆ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡಿದೆ.
ದೇಶದ ಹಣ ಹೊಡೆಕೊಂಡು ಹೋದವರಲ್ಲಿ ವಿಜಯಮಲ್ಯ ಹೊರತು ಪಡಿಸಿ ಉಳಿದವರು ಗುಜರಾತಿನವರು ಎಂದು ಟೀಕಿಸಿದರು.
ಮುಂದಿನ ದಿನಗಳಲ್ಲಿ ಮೋದಿಯವರನ್ನು ಬೀದಿಯಲ್ಲಿ ನಿಲ್ಲಿಸುತ್ತಾರೆ. ಮೊನ್ನೆ ಬೆಂಗಳೂರಿಗೆ ಬಂದಾಗ ರಾಜ್ಯ ನಾಯಕರನ್ನು ಎಲ್ಲಿ ನಿಲ್ಲಸಿದ್ದರು ನೋಡಿದ್ದಿರಿ. ಈಗ ಗ್ಯಾರಂಟಿ ಯೋಜನೆ ಜಾರಿಯಾಗಿದ್ದರಿಂದ 200 ರೂಪಾಯಿ ಗ್ಯಾಸ್ ರಿಯಾಯಿತಿ ನೀಡುತ್ತಿದ್ದಾರೆ.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ ಮಾತನಾಡಿದರು. ಸ್ವಾಗತವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಗಂಗಪ್ಪ ಮಾಡಿದರು.ವೇದಿಕೆಯಲ್ಲಿ , ನಳಿನ ಅತುಲ್, ರಾಹುಲ್ ರತ್ನಂ ಪಾಂಡೆಯಾ, ಯಶೋದಾ ವಂಟಿಗೋಡಿ, ಸಾವಿತ್ರಿ ಕಡಿ, ಕಾವ್ಯಾರಾಣಿ, ಮಹೇಶ ಮಾಲಗಿತ್ತಿ, ಗಣಪತಿ ಪಾಟೀಲ ಇದ್ದರು.