ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.26:
ಕಾಲ ಬದಲಾದರೂ ಗ್ರಾಾಮೀಣ ಭಾಗದ ಸರಕಾರಿ ಶಾಲೆಯ ಮಕ್ಕಳು ವಿಮಾನದಲ್ಲಿ ಪ್ರಯಾಣ ಮಾಡುವುದು ಕಷ್ಟ. ಮೇಲೆ ಹಾರುವ ವಿಮಾನ ನೋಡಿ ಆನಂದಿಸುತ್ತಿಿದ್ದ ಮಕ್ಕಳ ವಿಮಾನಯಾನದ ಕನಸಿಗೆ ಶಾಲೆಯ ಮುಖ್ಯೋೋಪಾದ್ಯಾಾಯರೊಬ್ಬರು ವಿಮಾನದಲ್ಲಿ ಉಡಾನ್ ಭಾಗ್ಯ ಕಲ್ಪಿಿಸಿದ್ದಾಾರೆ .
ಬಹದ್ದೂರಬಂಡಿ ಸರಕಾರಿ ಹಿರಿಯ ಪ್ರಾಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿರುವ ಬೀರಪ್ಪ ಅಂಡಗಿ ಎಂಬುವವರು ತಮ್ಮ ಸ್ವಂತ ಖರ್ಚಿನಲ್ಲಿ ಶಾಲೆಯ 24 ಮಕ್ಕಳನ್ನು ವಿಮಾನ ಮೂಲಕ ಬೆಂಗಳೂರಿಗೆ ಪ್ರವಾಸ ಕರೆದುಕೊಂಡು ಹೋಗಿದ್ದಾಾರೆ.
ಬೀರಪ್ಪ ಅಂಡಗಿ ರಾಜ್ಯ ಅಂಗವಿಕಲರ ಶಿಕ್ಷಕರ ಸಂಘದ ರಾಜ್ಯಾಾಧ್ಯಕ್ಷರು. ಗ್ರಾಾಮೀಣ ಭಾಗದ ಮಕ್ಕಳಿಗೆ ವಿಮಾನ ಯಾನ ಮಾಡುವ ಉದ್ದೇಶದಿಂದ ಅವರು ಕಳೆದ ಎಪ್ರಿಿಲ್ 24 ರಂದು ಪರೀಕ್ಷೆ ಬರೆಸಿದರು. ಒಟ್ಟು 220 ಮಕ್ಕಳು ಪರೀಕ್ಷೆ ಬರೆದಿದ್ದು ಅದರಲ್ಲಿ 5,6.7 ಹಾಗು 8 ನೆಯ ತರಗತಿಯ 24 ಮಕ್ಕಳನ್ನು ಆಯ್ಕೆೆ ಮಾಡಿ ಆ ಮಕ್ಕಳನ್ನು ಇಂದು ಬೆಂಗಳೂರಿಗೆ ಜಿಂದಾಲ್ ವಿಮಾನ ಮೂಲಕ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾಾರೆ. ಬೆಂಗಳೂರಿನಲ್ಲಿ ವಿಧಾನ ಸೌಧದ ಒಳಗಡೆ, ಕಬ್ಬನ್ ಪಾರ್ಕ್, ಇಸ್ಕಾಾನ್ ಟೆಂಪಲ್ ಸೇರಿ ವಿವಿಧ ಸ್ಥಳಗಳನ್ನು ಎರಡು ದಿನ ತೋರಿಸಲಿದ್ದಾಾರೆ.
ಇಂದು ಮುಂಜಾನೆ ಕೊಪ್ಪಳ ಜಿಲ್ಲಾಾಡಳಿತ ಭವನದ ಮುಂದೆ ಸಂಸದ ರಾಜಶೇಖರ ಹಿಟ್ನಾಾಳ ಮಕ್ಕಳ ಪ್ರವಾಸಕ್ಕೆೆ ಚಾಲನೆ ನೀಡಿದರು. ಸುಮಾರು 5 ಲಕ್ಷ ರೂಪಾಯಿ ಖರ್ಚು ಮಾಡಿ ಸರಕಾರಿ ಶಾಲೆಯ ಮಕ್ಕಳಿಗೆ ಪ್ರವಾಸ ಮಾಡಿಸುತ್ತಿಿರುವ ಬೀರಪ್ಪ ಅಂಡಗಿಯ ಕಾರ್ಯಕ್ಕೆೆ ಮೆಚ್ಚುಗೆ ವ್ಯಕ್ತಪಡಿಸಿದ್ದಾಾರೆ.
ನಾವೆಲ್ಲ ವಿಮಾನವನ್ನು ಕೆಳಗಿನಿಂದ ನೋಡುತ್ತಿಿದ್ದೆೆವು. ಈಗ ಆಕಾಶದಲ್ಲಿ ವಿಮಾನದ ಮೂಲಕ ಪ್ರವಾಸಕ್ಕೆೆ ಹೋಗುತ್ತಿಿರುವುದು ಸಂತೋಷವಾಗುತ್ತಿಿದೆ. ನಮ್ಮ ಶಿಕ್ಷಕರು ಬಾಲ್ಯದಲ್ಲಿಯೇ ವಿಮಾನ ಮೂಲಕ ಪ್ರವಾಸ ಮಾಡುತ್ತಿಿರುವುದ ಶಿಕ್ಷಕರ ಬಗ್ಗೆೆ ಹೆಮ್ಮೆೆ ಯಾಗುತ್ತಿಿದೆ ಎನ್ನುತ್ತಾಾರೆ.
ಕಳೆದ ವರ್ಷದಿಂದ ಕೊಪ್ಪಳ ಜಿಲ್ಲೆೆಯಲ್ಲಿ ಸರಕಾರಿ ಶಾಲೆಯ ಮಕ್ಕಳನ್ನು ವಿಮಾನ ಮೂಲಕ ಪ್ರವಾಸಕ್ಕೆೆ ಕರೆದುಕೊಂಡು ಹೋಗುವ ಪ್ರವೃತ್ತಿಿ ಅಲ್ಲಲ್ಲಿ ಬೆಳೆಯುತ್ತಿಿದೆ. ಈಗ ಸಂಪೂರ್ಣವಾಗಿ ಪ್ರವಾಸ ಖರ್ಚನ್ನು ತಾವೇ ಭರಿಸಿ ಮಕ್ಕಳನ್ನು ಪ್ರವಾಸಕ್ಕೆೆ ಕರೆದುಕೊಂಡು ಹೋಗುತ್ತಿಿರುವುದು ವಿಶೇಷವಾಗಿದೆ.
ಬೀಳ್ಕೊೊಡುಗೆ: ಇಂದು ಬಹದ್ದೂರ ಬಂಡಿಯಿಂದ ಬಸ್ ನಲ್ಲಿ ಬಂದ ವಿದ್ಯಾಾರ್ಥಿಗಳನ್ನು ಕೊಪ್ಪಳ ಜಿಲ್ಲಾಾಡಳಿತ ಭವನದ ಮುಂದೆ ಬೀಳ್ಕೊೊಡಲಾಯಿತು. ಸಂಸದ ರಾಜಶೇಖರ ಹಿಟ್ನಾಾಳ, ತಹಸೀಲ್ದಾಾರ ವಿಠ್ಠಲ ಚೌಗಲೆ. ಬಹದ್ದೂರು ಬಂಡಿ ಗ್ರಾಾಮ ಪಂಚಾಯತಿ ಅಧ್ಯಕ್ಷ ಯೋಗಾನಂದ, ಪ್ರಾಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಾಧ್ಯಕ್ಷ ಶರಣಬಸನಗೌಡ ಹಲಗೇರಿ, ಹನುಮಂತಪ್ಪ ಕುರಿ ಸೇರಿ ಹಲವರು ಇದ್ದರು.
ಸರಕಾರಿ ಶಾಲೆಯ ಮಕ್ಕಳಿಗೆ ವಿಮಾನ ಯಾನ ಭಾಗ್ಯ ಕಲ್ಪಿಿಸಿದ ಮುಖ್ಯೋೋಪಾಧ್ಯಾಾಯ !!

