ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.11
ಮುಖ್ಯಮಂತ್ರಿಿ ಸಿದ್ದರಾಮಯ್ಯನವರ ಸರಕಾರ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸಿ ನೀಡಿದ ಆದೇಶವನ್ನು ಧಾರವಾಡ ಹೈಕೋರ್ಟ್ ಪೀಠ ರದ್ದು ಮಾಡಿದೆ.
ಇದರಿಂದ ರಾಜ್ಯ ಸರ್ಕಾರಕ್ಕೆೆ ಮುಖಭಂಗವಾಗಿದೆ. ಕರ್ನಾಟಕದಲ್ಲಿ ಸರ್ಕಾರಿ ಆಸ್ಪತ್ರೆೆಗಳ ಆವರಣದಲ್ಲಿನ ಜನೌಷಧ ಕೇಂದ್ರಗಳನ್ನು ಮುಚ್ಚುವಂತೆ ಸೂಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಿಸಿ ರಾಕೇಶ್ ಮಹಾಲಿಂಗಪ್ಪ ಸೇರಿದಂತೆ 16 ಮಂದಿ ಹೈಕೋರ್ಟ್ ಮೆಟ್ಟಿಿಲೇರಿದ್ದರು. ಜುಲೈ 8ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್ ಜನೌಷಧಿ ಮಳಿಗೆಗಳನ್ನು ಮುಚ್ಚದಂತೆ ಮಧ್ಯಂತರ ಆದೇಶ ಹೊರಡಿಸಿತ್ತು. ಈಗ ಅಂತಿಮ ಆದೇಶ ಹೊರಡಿಸಿದೆ.
ಜನೌಷಧ ಕೇಂದ್ರ ತೆರೆಯಲು ಮೂಲಸೌಕರ್ಯ ಕಲ್ಪಿಿಸಲು ಕೇಂದ್ರ ಸರ್ಕಾರ ಹಣ ವೆಚ್ಚ ಮಾಡುತ್ತಿಿದೆ. ಜನರಿಗೆ ಶೇ.50ರಿಂದ ಶೇ.90ರ ರಿಯಾಯಿತಿ ದರದಲ್ಲಿ ಔಷಧ ನೀಡಲಾಗುತ್ತಿಿದೆ. ಸರ್ಕಾರದ ಆದೇಶದಿಂದ ತಮ್ಮ ಮೂಲಭೂತ ಹಕ್ಕಿಿಗೆ ಧಕ್ಕೆೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದರು. ಈ ವಾದ ಆಲಿಸಿದ ಹೈಕೋರ್ಟ್ ಸರ್ಕಾರದ ಆದೇಶ ರದ್ದುಪಡಿಸಿದೆ.
ಸರ್ಕಾರದಿಂದಲೇ ಉಚಿತ ಔಷಧಿ
ಸರ್ಕಾರಿ ಆಸ್ಪತ್ರೆೆಯಲ್ಲಿ ಸರ್ಕಾರವೇ ರೋಗಿಗಳಿಗೆ ಉಚಿತ ಔಷಧಿ ನೀಡುತ್ತಿಿದೆ. ಹೀಗಾಗಿ ಆಸ್ಪತ್ರೆೆಯ ಆವರಣದಲ್ಲಿ ಜನೌಷಧಿ ಕೇಂದ್ರಗಳು ಇದ್ದರೆ ವೈದ್ಯರು ಅಲ್ಲಿಗೆ ಕಳುಹಿಸುತ್ತಾಾರೆ. ಇದರಿಂದ ರೋಗಿಗಳು ಹಣ ನೀಡಿ ಔಷಧ ಖರೀದಿಸುತ್ತಾಾರೆ ಇದನ್ನು ತಪ್ಪಿಿಸಲು ಜನೌಷಧಿ ಕೇಂದ್ರಗಳನ್ನು ಮುಚ್ಚಲಾಗುತ್ತಿಿದೆ ಎಂದು ಸರ್ಕಾರ ಹೇಳಿತ್ತು.
ಇದನ್ನು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ತೀವ್ರವಾಗಿ ವಿರೋಧಿಸಿದ್ದವು.
ಬಾಕ್ಸ್
ಸಿಎಂ ದ್ವೇಷದ ರಾಜಕಾರಣ ನಿಲ್ಲಿಸಲಿ: ಬಿ.ವೈ.ವಿಜಯೇಂದ್ರ
ಜನೌಷಧ ಕೇಂದ್ರ ಮುಚ್ಚುವಂತೆ ಸರ್ಕಾರ ಹೊರಡಿಸಿದ ಆದೇಶವನ್ನು ಧಾರವಾಡ ಹೈಕೋರ್ಟ್ ಪೀಠ ರದ್ದುಪಡಿಸಿರುವ ಹಿನ್ನೆೆಲೆಯಲ್ಲಿ ಪ್ರತಿಕ್ರಿಿಯೆ ನೀಡಿದ ಬಿಜೆಪಿ ರಾಜ್ಯಾಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ರಾಜ್ಯದ ಮುಖ್ಯಮಂತ್ರಿಿಗಳು ಇನ್ನಾಾದರೂ ದ್ವೇಷದ ರಾಜಕಾರಣವನ್ನು ಬದಿಗಿಡಬೇಕು. ಕೇಂದ್ರ ಸರಕಾರದ ಜೊತೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು. ಇದರಿಂದ ರಾಜ್ಯಕ್ಕೆೆ ಮತ್ತು ಬಡವರಿಗೆ ಒಳ್ಳೆೆಯದಾಗುತ್ತದೆ. ಇರುವಷ್ಟು ದಿನ ಉತ್ತಮ ಹೆಜ್ಜೆೆ ಇಡಲಿ ಎಂದರು.
ಜನೌಷಧಿ ಕೇಂದ್ರಗಳು ದೇಶದ ಹೆಮ್ಮೆೆಯ ಪ್ರಧಾನಮಂತ್ರಿಿ ನರೇಂದ್ರ ಮೋದಿಯವರ ಒಂದು ಕಾರ್ಯಕ್ರಮ, ಒಂದು ಕೊಡುಗೆ. ಈ ರಾಜ್ಯದ, ದೇಶದ ಬಡಜನರಿಗೆ ಕೈಗೆಟಕುವ ದರದಲ್ಲಿ ಔಷಧಿಗಳು ಸಿಗಬೇಕು; ಇದರಿಂದ ಬಡವರಿಗೆ ಅನುಕೂಲ ಆಗಬೇಕೆಂಬ ಸದುದ್ದೇಶದಿಂದ ಆ ಕಾರ್ಯಕ್ರಮ ಜಾರಿಗೊಳಿಸಿದ್ದರು ಎಂದು ವಿವರಿಸಿದರು.
ಮೋದಿಜೀ ಅವರ ಜನಪ್ರಿಿಯತೆ ಸಹಿಸಿಕೊಳ್ಳಲು ಸಾಧ್ಯ ಆಗುತ್ತಿಿಲ್ಲ..
ರಾಜ್ಯದ ಕಾಂಗ್ರೆೆಸ್ ಸರಕಾರ, ಸಿದ್ದರಾಮಯ್ಯನವರಿಗೆ ಮೋದಿಜೀ ಅವರ ಜನಪ್ರಿಿಯತೆ ಸಹಿಸಿಕೊಳ್ಳಲು ಸಾಧ್ಯ ಆಗುತ್ತಿಿಲ್ಲ. ಅಹಿಂದ ಮುಖ್ಯಮಂತ್ರಿಿ ಎಂದು ಬೊಬ್ಬೆೆ ಹೊಡೆಯುವ ಸಿದ್ದರಾಮಯ್ಯನವರು ಒಬ್ಬ ಹಿಂದುಳಿದ ಸಮುದಾಯಕ್ಕೆೆ ಸೇರಿದ ಪ್ರಧಾನಮಂತ್ರಿಿ ನರೇಂದ್ರ ಮೋದಿ ಜೀ ಅವರು ಕೇಂದ್ರದಲ್ಲಿ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಕೊಟ್ಟಿಿದ್ದಾರೆ. ಸ್ವಾಾತಂತ್ರ್ಯಾಾನಂತರದಲ್ಲಿ ಪ್ರಥಮ ಬಾರಿಗೆ ಸತತವಾಗಿ 3ನೇ ಬಾರಿಗೆ ಪ್ರಧಾನಿಯಾಗಿ ಅವರು ಸೇವೆ ಸಲ್ಲಿಸುತ್ತಿಿದ್ದಾರೆ. ಅವರು ಕೊಟ್ಟಿಿರುವ ಬಡವರ ಯೋಜನೆಗೆ ಕಲ್ಲು ಹಾಕುವ ಷಡ್ಯಂತ್ರ, ಹುನ್ನಾಾರ ಸಿದ್ದರಾಮಯ್ಯನವರ ಸರಕಾರದ್ದಾಗಿತ್ತು ಎಂದು ಟೀಕಿಸಿದರು.

