ಸುದ್ದಿಮೂಲ ವಾರ್ತೆ ಬೆಂಗಳೂರು, ಅ.08:
ಆಹಾರ ಸಂಸ್ಕರಣಾ ಉದ್ದಿಮೆಗಳ ಬಗ್ಗೆೆ ಜಾಗೃತಿ ಮೂಡಿಸಲು ಅ.9ರ ಗುರುವಾರ ನಗರದ ಟೌನ್ಹಾಲ್ನಲ್ಲಿ ರೈತ ಉತ್ಪಾಾದಕ ಸಂಸ್ಥೆೆಗಳ ಸಮ್ಮೇಳನ ನಡೆಯಲಿದೆ ಎಂದು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರ್ತು ನಿಗಮದ (ಕೆಪೆಕ್) ವ್ಯವಸ್ಥಾಾಪಕ ನಿದೇರ್ಶಕ ಸಿ.ಎಸ್. ಶಿವಪ್ರಕಾಶ್ ಹೇಳಿದರು.
ಸುದ್ದಿಗೋಷ್ಠಿಿಯಲ್ಲಿ ಕೆಪೆಕ್ ವ್ಯವಸ್ಥಾಾಪಕ ನಿರ್ದೇಶಕ ಸಿ.ಎಸ್.ಶಿವಪ್ರಕಾಶ್ ಹೇಳಿದರು.
ಪಿಎಂಎ್ಎಂಇ ಯೋಜನೆ ಅಡಿ ರೈತ ಉತ್ಪಾಾದಕ ಸಂಸ್ಥೆೆಗಳು ಹೆಚ್ಚು ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಈ ಸಮ್ಮೇಳನ ಅಯೋಜಿಸಲಾಗಿದೆ. ಕೃಷಿ ಸಚಿವ ಎನ್.ಚಲುವರಾಯಸ್ವಾಾಮಿ ಅವರು ಸಮ್ಮೇಳನ ಉದ್ಘಾಾಟಿಸಲಿದ್ದಾರೆ. ಎಫ್ಪಿಿಒ ಪ್ರತಿನಿಧಿಗಳು, ಬ್ಯಾಾಂಕ್, ನಬಾರ್ಡ್, ಎಸ್ಎಲ್ಬಿಿಸಿ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿಿ ಕಿರು ಆಹಾರ ಸಂಸ್ಕೃರಣಾ ಉದ್ದಿಮೆಗಳ ಯೋಜನೆ ಅಡಿ ರೈತ ಉತ್ಪಾಾದಕ ಸಂಸ್ಥೆೆಗಳಿಗೆ ಮೂಲಸೌಕರ್ಯಕ್ಕಾಾಗಿ ಮೂರು ಕೋಟಿ ರೂ. ಸಹಾಯಧನ ನೀಡಲಾಗುವುದು. ಈ ಬಗ್ಗೆೆ ಉತ್ಪಾಾದಕರಿಗೆ ಸರಿಯಾಗಿ ಮಾಹಿತಿ ಇಲ್ಲ. ಈ ಬಗ್ಗೆೆ ಸಮ್ಮೇಳನದಲ್ಲಿ ಚರ್ಚೆ ನಡೆಸಲಾಗುವುದು ಎಂದರು.
ಮುಖ್ಯಮಂತ್ರಿಿ ಸಿದ್ದರಾಮಯ್ಯ 2025-26ನೇ ಸಾಲಿನಲ್ಲಿ ರಾಜ್ಯದಲ್ಲಿ ಐದು ಸಾವಿರ ಕಿರು ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಾಪಿಸುವಂತೆ ಸೂಚಿಸಿದ್ದಾರೆ. ಬಜೆಟ್ನಲ್ಲಿ ಇದಕ್ಕಾಾಗಿ 206 ಕೋಟಿ ರೂ. ಅನುದಾನ ಒದಗಿಸಲಾಗಿದೆ.
ಎಫ್ಪಿಿಒಗಳು ತಮ್ಮ ಸದಸ್ಯರ ಉತ್ಪನ್ನಗಳನ್ನು ಮೌಲ್ಯವರ್ಧನೆ ಮತ್ತು ಸಂಸ್ಕರಣೆಗೆ ಒಳಪಡಿಸುವ ಮೂಲಕ ಆದಾಯ ಹೆಚ್ಚಿಿಸಿಕೊಳ್ಳಬಹುದು. ಪಿಎಂಎ್ಎಂಇ ಯೋಜನೆ ಅಡಿ ಗರಿಷ್ಟ 15 ಲಕ್ಷ ರೂ. ಸಹಾಯಧನ ದೊರೆಯುತ್ತದೆ. ಇದರಲ್ಲಿ ಕೇಂದ್ರ ಸರ್ಕಾರ 6 ಲಕ್ಷ ರೂ. ನೀಡಿದರೆ ರಾಜ್ಯ ಸರ್ಕಾರ 9 ಲಕ್ಷ ರೂ. ನೀಡುತ್ತದೆ. ಮೂಲ ಸೌಕರ್ಯ ಕಲ್ಪಿಿಸಿಕೊಳ್ಳಲು ಎಫ್ಪಿಿಒಗಳಿಗೆ ಗರಿಷ್ಟ 3 ಕೋಟಿ ರೂ.ವರೆಗೆ ಸಹಾಯಧನ ಸಿಗುತ್ತದೆ. ಉತ್ಪನ್ನಗಳ ಬ್ರ್ಯಾಾಂಡಿಂಗ್ ಮತ್ತು ಮಾರುಕಟ್ಟೆೆಗೆ ಶೇ.50ರಷ್ಟು ಸಹಾಯ ಧನ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಬಾಕ್ಸ್
ಈ ವರ್ಷ 5 ಸಾವಿರ ಮಂದಿಗೆ ಸಹಾಯಧನ
ಪಿಎಂಎ್ಎಂಇ ಯೋಜನೆಯಡಿ ಇದುವರೆಗೂ 7.517 ಲಾನುಭವಿಗಳು ಸಹಾಯಧನ ಪಡೆದಿದ್ದಾರೆ. ಈ ವರ್ಷ ಇನ್ನು 5 ಸಾವಿರ ಮಂದಿಗೆ ಸಹಾಯಧನ ನೀಡಲು ಗುರಿ ನಿಗದಿಪಡಿಸಲಾಗಿದೆ. ದಸರಾ ಹಾಗೂ ದೀಪಾವಳಿ ಹಬ್ಬದ ಅಂಗವಾಗಿ ಮಹಿಳೆಯರಿಗೆ ವಿಶೇಷ ಅಭಿಯಾನ ನಡೆಯುತ್ತಿಿದೆ. ಈ ಯೋಜನೆಯಡಿ ಶೇ.47ರಷ್ಟು ಮಹಿಳೆಯರು ಸಹಾಯಧನ ಪಡೆದುಕೊಂಡು ಉದ್ದಿಮೆಗಳನ್ನು ಸ್ಥಾಾಪಸಿಕೊಂಡಿದ್ದಾರ. ಇದನ್ನು ಶೇ. 75ಕ್ಕೆೆ ಹೆಚ್ಚಿಿಸುವ ಉದ್ದೇಶ ಇದೆ. ರಾಜ್ಯದಲ್ಲಿ ಒಟ್ಟು 1,400 ಕ್ಕೂ ಎಫ್ಪಿಿಒಗಳಿದ್ದು ಇದರಲ್ಲಿ ಆಹಾರ ಸಂಸ್ಕರಣೆಗೆ ಸಂಬಂಧಿಸಿದಂತೆ 160 ಎಫ್ಪಿಿಒಗಳಿವೆ. ಇವು ಈ ಯೋಜನೆಯ ಸೌಲಭ್ಯಪಡೆದುಕೊಳ್ಳಬೇಕು. ಎಂದು ಸಿ.ಎಸ್.ಶಿವಪ್ರಕಾಶ್ ಮಾಹಿತಿ ನೀಡಿದರು.

