ಸುದ್ದಿಮೂಲ ವಾರ್ತೆ
ಮಂಗಳೂರು, ಮಾ,30: ದೈವದ ನರ್ತಕನ್ನು ದೈವ ನರ್ತನೆ ಸೇವೆ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.
ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಡಮಂಗಲ ಗ್ರಾಮದಲ್ಲಿ ನಡೆದಿದೆ. ಅನೇಕ ವರ್ಷಗಳಿಂದ ನಡೆದುಕೊಂಡು ಬರುತ್ತಿದಂತಹ ಪದ್ದತಿಯಾಗಿದ್ದು ಅಲಾವರು ವರ್ಷದಿಂದ ದೈವ ನರ್ತಕನಾಗಿ ಸೇವೆ ಸಲ್ಲಿಸುತ್ತಿದ್ದ ಎಡಮಂಗಲ ಗ್ರಾಮದ ಮೂಲಂಗೀರಿಯ ಕಾಂತು ಅಜಿಲ 59 ವರ್ಷದ ವ್ಯಕ್ತಿ ಯಾಗಿದ್ದು ನರ್ತಿಸುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.
ಕಾಂತು ಅಜಿಲ ಅವರು ಅಲಾವರು ವರ್ಷಗಳಿಂದ ಗ್ರಾಮದ ಕೂಡುಗಟ್ಟಿಗೆ ಸಂಬಂಧಿಸಿದಂತೆ ದೈವಾರಾದಕರಾಗಿ ಗ್ರಾಮದೈವಗಳ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಶಿರಾಡಿ ಮತ್ತು ಕಲ್ಕುಡ ಎಂಬ ಎರಡು ದೇವರ ನರ್ತನೆ ಸಂದರ್ಭದಲ್ಲಿ ಶಿರಾಡಿ ದೈವದ ನರ್ತಕನಾಗಿ ಸೇವೆ ಸಲ್ಲಿಸುತ್ತಿದ್ದಾಂತಹ ವ್ಯಕ್ತಿಯು ಏಕಾಏಕಿ ಕುಸಿದು ಬಿದಿದ್ದನ್ನು ಕಂಡ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರು ಕೂಡ ಜೀವ ಉಳಿಯಲಿಲ್ಲ. ಹೃದಯಾಘಾತದಿಂದ ಸಾವನ್ನಪ್ಪಿರುವ ಬಗ್ಗೆ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ .