ಸುದ್ದಿಮೂಲ ವಾರ್ತೆ ಬೆಂಗಳೂರು, ನ.20:
ಎಟಿಎಂ ಕೇಂದ್ರಗಳಿಗೆ ಹಣ ತುಂಬಲು ಹೊರಟಿದ್ದ ಸಿಎಂಎಸ್ ಏಜೆನ್ಸಿಿ ವಾಹನವನ್ನು ಆರ್ಬಿಐ ಅಧಿಕಾರಿಗಳ ಸೋಗಿನಲ್ಲಿ ತಡೆದು 7 ಕೋಟಿ ರೂ. ದೋಚಿದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಇಬ್ಬರು ಶಂಕಿತರನ್ನು ತಿರುಪತಿಯಲ್ಲಿ ಬಂಧಿಸಿದ್ದಾರೆ.
ಇನೋವಾ ವಾಹನವನ್ನು ದುಷ್ಕರ್ಮಿಗಳು ತಿರುಪತಿಯಲ್ಲಿ ಬಿಟ್ಟು ಪರಾರಿಯಾಗಿದ್ದರು. ಅದನ್ನು ಕೂಡ ಪೊಲೀಸರು ವಶಕ್ಕೆೆ ಪಡೆದು ತನಿಖೆ ತೀವ್ರಗೊಳಿಸಿದ್ದಾರೆ.
ಬಂಧಿತರನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದ ಹಿನ್ನೆೆಲೆಯಲ್ಲಿ ಹಲವು ಮಾಹಿತಿಗಳು ಲಭ್ಯವಾಗಿದ್ದು ಪೊಲೀಸರು ದರೋಡೆಕೋರರ ಬೆನ್ನಟ್ಟಿಿದ್ದಾರೆ.
ಬಂಧಿತ ಇಬ್ಬರು ಶಂಕಿತ ಆರೋಪಿಗಳನ್ನು ನಡೆಸುತ್ತಿಿರುವ ತೀವ್ರ ವಿಚಾರಣೆ ವೇಳೆ ಇಬ್ಬರಿಂದ ಸಿಸಿಬಿ ಪೊಲೀಸರಿಗೆ ಉಳಿದ ಆರೋಪಿಗಳು ಹಾಗೂ ದರೋಡೆ ಮಾಡಿದ ಹಣ ಇನ್ನಿಿತರ ಮಹತ್ವದ ಮಾಹಿತಿ ಲಭ್ಯವಾಗಿದೆ.
ದರೋಡೆಗೆ ಬಳಸಿದ್ದ ಇನ್ನೋೋವಾ ಕಾರು ತಿರುಪತಿಯಲ್ಲಿ ಬಳಿ ಪತ್ತೆೆಯಾಗಿದೆ, ಖಚಿತ ಮಾಹಿತಿಯನ್ನು ಆಧರಿಸಿ ಇನೋವಾ ಕಾರನ್ನು ದಕ್ಷಿಣ ವಿಭಾಗದ ಪೊಲೀಸರು ವಶಕ್ಕೆೆ ಪಡೆದಿದ್ದಾರೆ.
ತಿರುಪತಿಯ ಬಳಿಯೇ ಇನೋವಾ ಕಾರು ಬಿಟ್ಟು ಆರೋಪಿಗಳು ಹಣದ ಸಮೇತ ಪರಾರಿಯಾಗಿದ್ದಾರೆ. ಹೀಗಾಗಿ ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿಿದ್ದಾರೆ.
ತಿರುಪತಿ ಪೊಲೀಸರ ಜೊತೆ ದಕ್ಷಿಣ ವಿಭಾಗ ಪೊಲೀಸರು ಹೋಟೆಲ್, ಲಾಡ್ಜ್, ದೇವಸ್ಥಾಾನ ಬಳಿ ಮಪ್ತಿಿಯಲ್ಲಿ ಶೋಧ ನಡೆಸಲಾಗುತ್ತಿಿದೆ.
20 ಮಂದಿ ವಿಚಾರಣೆ:
ಈ ನಡುವೆ ದರೋಡೆ ಪ್ರಕರಣದ ಸಂಬಂಧ 20 ಕ್ಕೂ ಹೆಚ್ಚು ಮಂದಿಯನ್ನು ನಗರ ಪೊಲೀಸರು ವಶಕ್ಕೆೆ ತೆಗೆದುಕೊಂಡು ವಿಚಾರಣೆ ಕೈಗೊಂಡಿದ್ದಾರೆ.
ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಎಚ್ ಡಿಎ್ ಸಿ ಬ್ಯಾಾಂಕ್ ಸಿಬ್ಬಂದಿ, ಸಿಎಂಎಸ್ ಸಿಬ್ಬಂದಿಯನ್ನು ತೀವ್ರ ವಿಚಾರಣೆ ಮಾಡಲಾಗಿದ್ದು,ಘಟನೆಯ ಸಮಯವನ್ನು ಆಧರಿಸಿ ಪ್ರಶ್ನೆೆ ಕೇಳಲಾಗುತ್ತಿಿದೆ.
ವೆಬ್ ಸೀರೀಸ್ ಪ್ರೇೇರಿತ:
ಕೃತ್ಯವು ವೆಬ್ ಸೀರೀಸ್ ಪ್ರೇೇರಿತವಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಆರೋಪಿಗಳು ದರೋಡೆಗೆ ಹಲವು ದಿನಗಳಿಂದ ಸಂಚು ರೂಪಿಸಲಾಗಿತ್ತು, ಮೂರು ಠಾಣೆಗೆ ಸೇರುವ ಸ್ಥಳದಲ್ಲಿ ವಾಹನ ಬಿಡುವುದು ಕೂಡ ಯೋಜನೆ ಆಗಿತ್ತು ಎಂಬ ಅನುಮಾನ ವ್ಯಕ್ತವಾಗಿದೆ.
ಸಿಎಂಎಸ್ ವಾಹನ ಸಿಕ್ಕಿಿದ್ದ ಮೇಲು ಸೇತುವೆ ಮೂರು ಪೊಲೀಸ್ ಠಾಣೆಗಳಿಗೆ ಗಡಿಯಾಗಿದೆ. ನಿಮ್ಹಾಾನ್ಸ್ನಿಂದ ಮೇಲ್ಭಾಾಗಕ್ಕೆೆ ಬಂದರೆ ಆಡುಗೋಡಿ ಠಾಣೆ ಸರಹದ್ದು, ವಾಹನದ ಎಡಬದಿಯಲ್ಲಿ ಸುದ್ದುಗುಂಟೆಪಾಳ್ಯ ಠಾಣಾ ವ್ಯಾಾಪ್ತಿಿ ಮತ್ತು ಕೃತ್ಯ ನಡೆದಿರುವುದು ಸಿದ್ದಾಪುರ ಠಾಣಾ ವ್ಯಾಾಪ್ತಿಿಯಲ್ಲಿ. ಆ ಪೈಕಿ ಸಿದ್ದಾಪುರ ಠಾಣೆ ದಕ್ಷಿಣ ವಿಭಾಗಕ್ಕೆೆ ಸೇರಿದರೆ ವಾಹನ ಸಿಕ್ಕಿಿದ್ದು ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಾಪ್ತಿಿಯಲ್ಲಿ. ಈ ಠಾಣೆ ಸೌತ್ ಈಸ್ಟ್ ವಿಭಾಗಕ್ಕೆೆ ಸೇರಿದ್ದು. ಹೀಗಾಗಿ ವಾಹನ ಸಿಕ್ಕ ಬಳಿಕ ಮೊದಲು ಯಾವ ಠಾಣಾ ವ್ಯಾಾಪ್ತಿಿಗೆ ಘಟನೆ ಬರಲಿದೆ ಎಂಬ ಗೊಂದಲ ಉಂಟಾಗಿದೆ.
ಠಾಣಾ ವ್ಯಾಾಪ್ತಿಿ ಗೊಂದಲ:
ಪೊಲೀಸರು ಸಾಮಾನ್ಯವಾಗಿ ತಮ್ಮ ಠಾಣೆ ಸರಹದ್ದಿನ ಆಧಾರದ ಮೇಲೆ ಕೆಲಸ ಮಾಡಲಿರುವ ಕಾರಣ, ದರೋಡೆಕೋರರ ಯೋಜನೆಯು ಸೇರಿತ್ತಾಾ ಎನ್ನುವ ಅಂಶವೂ ಇತ್ತಾಾ ಎಂಬ ಪ್ರಶ್ನೆೆ ಉದ್ಭವಿಸಿದೆ. ಹೀಗಾಗಿ, ಅನೇಕ ಸ್ಥಳಗಳಲ್ಲಿ ಇರುವಂತೆ ಪೊಲೀಸರನ್ನೇ ಗೊಂದಲಕ್ಕೆೆ ದೂಡಿ ಪರಾರಿ ಆಗುವ ಸಂಚು ಆರೋಪಿಗಳದ್ದಾಗಿತ್ತಾಾ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿಿದೆ.

