ಸುದ್ದಿಮೂಲ ವಾರ್ತೆ ಮಾನ್ವಿ, ೆ.03:
ಸರ್ಕಾರಿ ನೌಕರಿಯಿಂದ ನಿವೃತ್ತರಾದ ನಂತರ ಮಾನ್ವಿಿಯಲ್ಲಿ ಪ್ರಾಾಥಮಿಕ ಶಾಲಾ ಹಂತದಿಂದ ಪದವಿ ಕಾಲೇಜುಗಳವರೆಗೆ ಶಿಕ್ಷಣ ಸಂಸ್ಥೆೆ ಸ್ಥಾಾಪಿಸಿ ಸಾವಿರಾರು ವಿದ್ಯಾಾರ್ಥಿಗಳಿಗೆ ಭವಿಷ್ಯ ರೂಪಿಸಿದ ದಿವಂಗತ ಕೀರಪ್ಪ ಓಲೇಕಾರ ಅವರ ಶೈಕ್ಷಣಿಕ ಸೇವೆ ಚಿರಸ್ಮರಣೀಯ ಎಂದು ತಾಲ್ಲೂಕು ಪಂಚ ಗ್ಯಾಾರಂಟಿ ಯೋಜನೆಗಳ ಅನುಷ್ಠಾಾನ ಸಮಿತಿಯ ಅಧ್ಯಕ್ಷ ಬಿ.ಕೆ.ಅಮರೇಶಪ್ಪ ವಕೀಲ ಹೇಳಿದರು.
ಮಂಗಳವಾರ ಪಟ್ಟಣದ ವೆಂಕಟೇಶ್ವರ ಶಿಕ್ಷಣ ಸಂಸ್ಥೆೆಯಲ್ಲಿ ಹಮ್ಮಿಿಕೊಳ್ಳಲಾಗಿದ್ದ ಎಸ್.ಎಂ.ವಿ ಓಲೇಕಾರ ಪಿಯು ಕಾಲೇಜಿನ ದ್ವಿಿತೀಯ ಪಿಯುಸಿ ವಿದ್ಯಾಾರ್ಥಿಗಳ ಬೀಳ್ಕೊೊಡುಗೆ ಹಾಗೂ ಸಂಸ್ಥೆೆಯ ಸಂಸ್ಥಾಾಪಕ ಕೀರಪ್ಪ ಓಲೇಕಾರ ಅವರ ಜನ್ಮ ದಿನಾಚರಣೆ ಸಮಾರಂಭವನ್ನು ಉದ್ಘಾಾಟಿಸಿ ಅವರು ಮಾತನಾಡಿದರು.
ವಿದ್ಯಾಾರ್ಥಿಗಳು ಅಧ್ಯಯನದಲ್ಲಿ ಆಸಕ್ತಿಿ ಹಾಗೂ ಪರಿಶ್ರಮದಿಂದ ಉನ್ನತ ಸಾಧನೆ ಮಾಡಿ ಹೆತ್ತ ತಂದೆ, ತಾಯಿ ಹಾಗೂ ಶಿಕ್ಷಣ ಸಂಸ್ಥೆೆಗೆ ಕೀರ್ತಿ ತರಬೇಕು’ ಎಂದು ಅವರು ಸಲಹೆ ನೀಡಿದರು.
ಸಂಸ್ಥೆೆಯ ಹಳೆಯ ವಿದ್ಯಾಾರ್ಥಿ ಸಿನಿಮಾ ನಟ ಹನುಮಂತ ಉದ್ಬಾಾಳ್, ಪ್ರಾಾಧ್ಯಾಾಪಕ ಪ್ರೊೊ.ಸೈಯದ್ ಮಿನಾಜುಲ್ ಹಸನ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಕುರ್ಡಿ, ಹಿರಿಯ ಪತ್ರಕರ್ತ ಬಸವರಾಜ ಭೋಗಾವತಿ ಮತ್ತಿಿತರರು ಮಾತನಾಡಿದರು.
ಪ್ರಾಾಚಾರ್ಯೆ ಶ್ರೀದೇವಿ ವೆಂಕಟೇಶ ಓಲೇಕಾರ ಸಂಸ್ಥೆೆಯ ಪ್ರಗತಿ ವರದಿ ಮಂಡಿಸಿದರು. ವಿದ್ಯಾಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಸಂಸ್ಥೆೆಯ ಅಧ್ಯಕ್ಷ ಮಹಾಂತೇಶ ಓಲೇಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುದುಕಮ್ಮ ಕ್ಕೀರಪ್ಪ ಓಲೇಕಾರ, ನಿವೃತ್ತ ಪ್ರಾಾಂಶುಪಾಲ ಪಿ.ಹೆಚ್.ನರಹಟ್ಟಿಿ, ಸಿ.ಎ ಶ್ರೀನಿವಾಸ ನೆಲಜೇರಿ, ವೆಂಕಟೇಶ ಓಲೇಕಾರ, ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಹಂಪಣ್ಣ ಚಂಡೂರು, ಗೋರ್ಕಲ್ ಸರ್ಕಾರಿ ಪ್ರೌೌಢಶಾಲೆಯ ಮುಖ್ಯ ಶಿಕ್ಷಕಿ ಕಮಲಾ, ಪ್ರಾಾಂಶುಪಾಲ ಶಂಕ್ರಪ್ಪ ಅಂಗಡಿ, ಆಂಜನೇಯ ನಾಯಕ ನಸಲಾಪುರ ಉಪಸ್ಥಿಿತರಿದ್ದರು.
ಉಪನ್ಯಾಾಸಕರಾದ ಅಬ್ದುಲ್ ರಹೀಮ್ ಸ್ವಾಾಗತಿಸಿದರು. ರವಿಚಂದ್ರ ನಿರೂಪಿಸಿದರು. ನಾಗರಾಜ ವಂದಿಸಿದರು.
ದಿ.ಕೀರಪ್ಪ ಓಲೇಕಾರ ಅವರ ಶೈಕ್ಷಣಿಕ ಸೇವೆ ಸ್ಮರಣೀಯ – ಬಿ.ಕೆ.ಅಮರೇಶಪ್ಪ

