ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 26: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಯಾಬಿನೆಟ್ ಸೇರಲು 24 ಸಚಿವರ ಪಟ್ಟಿ ಅಂತಿಮಗೊಂಡಿದ್ದು, ನಾಳೆ ಶನಿವಾರ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.
ಕಳೆದ ಮೂರು ದಿನಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಇದ್ದು ತಮ್ಮ ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ.
ವಿಶೇಷ ಎಂದರೆ ಕಾಂಗ್ರೆಸ್ ಹಿರಿಯ ನಾಯಕ, ಎಐಸಿಸಿ ಕಾರ್ಯದರ್ಶಿ ಎನ್.ಎಸ್. ಬೋಸ್ ರಾಜ್ ಅವರಿಗೆ ಸಚಿವ ಸ್ಥಾನ ಪಕ್ಕಾ ಆಗಿದೆ.
ಸದ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್ ಎರಡೂ ಸಭೆಯ ಸದಸ್ಯರಲ್ಲದ ಬೋಸ್ ರಾಜ್ ಅವರಿಗೆ ಇರುವ ಪಕ್ಷ ನಿಷ್ಠೆ ಮತ್ತು ಕಾಂಗ್ರೆಸ್ ಬೆಳವಣಿಗೆಗೆ ಅವರು ನೀಡಿದ ಕೊಡುಗೆ ಪರಿಗಣಿಸಿ ಈ ಸ್ಥಾನ ಒಲಿದಿದೆ.
ರಾಯಚೂರು ನಗರ ವಿಧಾನಸಭಾ ಕ್ಷೇತ್ರದಿಂದ ಬೋಸ್ ರಾಜ್ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಕಾರಣಾಂತರಗಳಿಂದ ಅಲ್ಲಿ ಅಲ್ಪಸಂಖ್ಯಾತ ಸಮುದಾಯದವರಿಗೆ ಟಿಕೆಟ್ ನೀಡಲಾಗಿತ್ತು. ರಾಹುಲ್ ಗಾಂಧಿಯವರೊಂದಿಗೆ ಆಪ್ತರಾಗಿರುವ ಬೋಸ್ ರಾಜ್ ಅವರಿಗೆ ಸರ್ಕಾರದಲ್ಲಿ ಒಳ್ಳೆಯ ಸ್ಥಾನಮಾನ ನೀಡುವ ಭರವಸೆ ಮೊದಲೇ ನೀಡಲಾಗಿತ್ತು.
ಅದರಂತೆ ರಾಜ್ಯ ಸರ್ಕಾರದಿಂದ ರವಾನೆಯಾದ ಪಟ್ಟಿಯಲ್ಲಿ ಬೋಸ್ ರಾಜ್ ಅವರಿಗೆ ಸ್ಥಾನ ಕಲ್ಪಿಸಲಾಗಿತ್ತು. ಸದ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರಲ್ಲದ ಬೋಸ್ ರಾಜ್ ಅವರನ್ನು ಮುಂದಿನ ಆರು ತಿಂಗಳ ಒಳಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಲಿದ್ದಾರೆ.
ಎರಡು ಬಾರಿ ಶಾಸಕ, ಒಂದು ಬಾರಿ ವಿಧಾನ ಪರಿಷತ್ ಸದಸ್ಯ, ಎರಡು ಬಾರಿ ಕಾಡಾ ಅಧ್ಯಕ್ಷ, ಎನ್. ಧರ್ಮಸಿಂಗ್ ಮುಖ್ಯಮಂತ್ರಿ ಆಗಿದ್ದಾಗ ಅವರಿಗೆ ರಾಜಕೀಯ ಕಾರ್ಯದರ್ಶಿ ಮತ್ತು ಒಂದು ಹೈದಾರಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ಸದಸ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಅವರನ್ನು ಎಐಸಿಸಿ ಕಾರ್ಯದರ್ಶಿ ಜವಾಬ್ದಾರಿ ನೀಡುವುದರ ಜೊತೆಗೆ ತೆಲಂಗಾಣ ರಾಜ್ಯ ಕಾಂಗ್ರೆಸ್ ಉಸ್ತುವಾರಿಯೂ ಆಗಿದ್ದಾರೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ಒಟ್ಟು 34 ಸ್ಥಾನಗಳ ಪೈಕಿ ಸಿಎಂ, ಡಿಸಿಎಂ ಹಾಗೂ ಎಂಟು ಸಚಿವರು ಈಗಾಗಲೇ ಅಧಿಕಾರ ಸ್ವೀಕರಿಸಿದ್ದಾರೆ. ಉಳಿದ 24 ಸಚಿವರ ಆಯ್ಕೆ ಬಹುತೇಕ ಅಂತಿಮಗೊಂಡಿದ್ದು ಪಟ್ಟಿ ಈ ರೀತಿ ಇದೆ.
ಈಶ್ವರ ಖಂಡ್ರೆ
ಲಕ್ಷ್ಮಿ ಹೆಬ್ಬಾಳಕರ್
ಶಿವಾನಂದ ಪಾಟೀಲ್
ದರ್ಶನಾಪುರ
ಡಾ. ಎಚ್. ಸಿ. ಮಹಾದೇವಪ್ಪ
ಪಿರಿಯಾಪಟ್ಟಣ ಕೆ. ವೆಂಕಟೇಶ್
ಎಸ್.ಎಸ್. ಮಲ್ಲಿಕಾರ್ಜುನ
ಬೈರತಿ ಸುರೇಶ್
ಕೃಷ್ಣ ಬೈರೇಗೌಡ
ರಹೀಂ ಖಾನ್
ಸಿ.ಎಸ್. ಪುಟ್ಟರಂಗ ಶೆಟ್ಟಿ
ಡಾ.ಎಂ.ಸಿ. ಸುಧಾಕರ್
ಎಚ್.ಕೆ. ಪಾಟೀಲ್
ಚೆಲುವರಾಯಸ್ವಾಮಿ
ಮಧುಗಿರಿ ರಾಜಣ್ಣ
ಸಂತೋಷ್ ಲಾಡ್
ಮಧು ಬಂಗಾರಪ್ಪ
ಮಾಂಕಾಳ ವೈದ್ಯ
ಶಿವರಾಜ ತಂಗಡಗಿ
ತಿಮ್ಮಾಪುರ
ರುದ್ರಪ್ಪ ಲಮಾಣಿ
ಶರಣ ಪ್ರಕಾಶ್ ಪಾಟೀಲ್
ಎನ್. ಎಸ್. ಭೋಸರಾಜು
ಬಿ.ನಾಗೇಂದ್ರ