ಸೋಮೇಶಗೌಡ ಕಲಬುರಗಿ , ಸೆ.29:
ಅತಿಯಾದ ಮಳೆ, ಪ್ರವಾಹದಿಂದ ಕಲಬುರಗಿ ಜಿಲ್ಲೆಯು ಅಕ್ಷರಶಃ ನಲುಗಿಹೋಗಿದ್ದು, ಅನ್ನದಾತರ ಬದುಕು ನೀರು ಪಾಲಾಗಿದ್ದು, ಬಡ ಜನಸಾಮಾನ್ಯರ ಬದುಕು ಪ್ರವಾಹದಲ್ಲಿ ಕೊಚ್ಚಿಿ ಹೋಗಿದೆ.
ಜಿಲ್ಲೆಯಲ್ಲಿ ಅತಿವೃಷ್ಟಿಿಯಿಂದ ಮುಂಗಾರು ಬೆಳೆಗಳಾದ ತೊಗರಿ, ಹೆಸರು, ಉದ್ದು, ಹತ್ತಿಿ, ಸೊಯಾ ಬೆಳೆಗಳು ಸಂಪೂರ್ಣವಾಗಿ ನೀರು ಪಾಲಾಗಿದ್ದು, ರೈತರಿಗೆ ದಿಕ್ಕು ತೋಚದಂತಾಗಿ , ಬದುಕು ಬೀದಿಗೆ ಬಿದ್ದಿದೆ.
ಜಿಲ್ಲೆಯಲ್ಲಿ ಜನೆವರಿ 2025 ರಿಂದ ಸೆಪ್ಟೆೆಂಬರ್ 27 ರವೆಗಿನ ವಾಡಿಕೆ ಮಳೆ 627 ಮಿಮೀ ಇದ್ದು 970 ಮಿಮೀ (ಶೇ.55 ) ಹೆಚ್ಚುವರಿ ಮಳೆಯಾಗಿದೆ. ಅಗಷ್ಟ್ ತಿಂಗಳ ವಾಡಿಕೆ 156 ಮಿಮೀ ಇದ್ದು 263 ಮಿಮಿ ( ಶೇ.69 ) ಹೆಚ್ಚುವರಿಯಾಗಿದೆ. ಸೆಪ್ಟೆೆಂಬರ್ 1 ರಿಂದ 27 ರವರೆಗೆ ವಾಡಿಕೆ ಮಳೆ 159 ಮಿಮಿ ಇದ್ದು, 271 ಮಿಮಿ (ಶೇ 71) ಹೆಚ್ಚುವರಿಯಾಗಿ ಮಳೆಯಾಗಿದೆ. ಇದರಿಂದಾಗಿ ತೊಗರಿ, ಉದ್ದು, ಹೆಸರು, ಸೊಯಾ, ಹತ್ತಿಿ ಸೇರಿ ತೋಟಗಾರಿಕೆ ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ.
ಜಿಲ್ಲೆಯಲ್ಲಿ ಅತಿವೃಷ್ಟಿಿ ಒಂದೆಡೆಯಾದರೆ, ಪ್ರವಾಹವು ಮತ್ತೊೊಂದೆಡೆ ಹಲವು ಅವಾಂತರಗಳನ್ನು ಸೃಷ್ಟಿಿಸಿ ಬಡ ಜನಸಾಮಾನ್ಯರ ಜೀವನ ದುಸ್ತರಗೊಳಿಸಿದೆ. ಭೀಮೆ, ಬೆಣ್ಣೆೆತೊರ, ಕಾಗಿಣಾ, ಮಲ್ಲಾಮುರಿ, ಗಂಡೋರಿ ನಾಲಾ ಪ್ರವಾಹದಿಂದ ನದಿ ಪಾತ್ರದ ಹಲವು ಗ್ರಾಾಮಗಳು ಜಲಾವೃತಗೊಂಡಿವೆ. ಜಮೀನಿನಲ್ಲಿ ರೈತರ ಬೆಳೆಗಳು ಕೊಚ್ಚಿಿಕೊಂಡು ಹೋಗಿವೆ. ಮನೆಗಳು ಮುಳುಗಡೆಯಾಗಿ ಜನರ ಬದುಕು ತತ್ತರಿಸಿಹೋಗಿದೆ.
ಜಿಲ್ಲೆಯ ಕಲಬುರಗಿ ತಾಲೂಕಿನ ಸರಡಗಿ(ಬಿ), ರತಾಬಾದ್, ಜೇವರ್ಗಿ ತಾಲೂಕಿನ ಕಟ್ಟಿಿ ಸಂಗಾವಿ, ಕೋನ ಹಿಪ್ಪರಗಾ, ಮಂದರವಾಡ, ಕೂಡಿ, ಕೊಬ್ಬಾಾಳ್ ಹಂದನೂರ್, ಹರವಾಳ್, ರದ್ದೇವಾಡಗಿ, ಮಲ್ಲಾ ಕೆ, ಮಲ್ಲಾ ಬಿ, ಬೀರಾಳ, ಹೊತ್ತಿಿನಮಡು, ಹೊನ್ನಾಾಳ, ಚಿತ್ತಾಾಪುರ ತಾಲೂಕಿನ ಕಡಬೂರ, ಚಾಮನಾಳ, ಕಾಳಗಿ ತಾಲೂಕಿನ ಕಣಸೂರ, ಹಳೆ ಹೆಬ್ಬಾಾಳ, ಮಲಘಾಣ, ಸೇಡಂ ತಾಲೂಕಿನ ಸಮಖೇಡ್ ತಾಂಡಾ, ಮಳಖೇಡ್ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 88 ಗ್ರಾಾಮಗಳು ಪ್ರವಾಹಕ್ಕೆೆ ತುತ್ತಾಾಗಿವೆ.
ಅಜಲಪೂರ ತಾಲೂಕಿನಲ್ಲಿ 17 ಗ್ರಾಾಮಗಳು, ಜೇವರ್ಗಿ ತಾಲೂಕಿನಲ್ಲಿ 30 ಗ್ರಾಾಮಗಳು, ಕಲಬುರಗಿ ತಾಲೂಕಿನಲ್ಲಿ 7 ಗ್ರಾಾಮಗಳು, ಚಿತ್ತಾಾಪುರ ತಾಲೂಕಿನಲ್ಲಿ 12 ಗ್ರಾಾಮಗಳು, ಚಿಂಚೋಳಿ ತಾಲೂಕಿನಲ್ಲಿ 3 ಗ್ರಾಾಮಗಳು, ಸೇಡಂ ತಾಲೂಕಿನಲ್ಲಿ 5 ಗ್ರಾಾಮಗಳು, ಕಾಳಗಿ ತಾಲೂಕಿನಲ್ಲಿ 8 ಗ್ರಾಾಮಗಳು ಶಹಾಬಾದ್ ತಾಲೂಕಿನಲ್ಲಿ 3 ಗ್ರಾಾಮಗಳು ಹಾಗೂ ಆಳಂದ ತಾಲೂಕಿನಲ್ಲಿ 3 ಗ್ರಾಾಮಗಳು ಪ್ರವಾಹ ಪೀಡಿತವಾಗಿವೆ.
ಹಸಿ ಬರಗಾಲ ಘೋಷಣೆಗೆ ಆಗ್ರಹ :
ಜಿಲ್ಲೆಯಲ್ಲಿ ಅತಿವೃಷ್ಟಿಿಯಿಂದ ಮುಂಗಾರು ಬೆಳೆಗಳು ಸಂಪೂರ್ಣ ಹಾಳಾಗಿರುವುದರಿಂದ ಕಲಬುರಗಿ ಜಿಲ್ಲೆಯನ್ನು ಹಸಿ ಬರಗಾಲ ಎಂದು ಘೋಷಣೆ ಮಾಡಬೇಕು. ರಾಷ್ಟೀಯ ವಿಪತ್ತು ಘೋಷಣೆ ಮಾಡಿ ಎಕರೆಗೆ 25 ಸಾವಿರ ರೂ ಪರಿಹಾರ ನೀಡಬೇಕು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ರೈತರ ಸಾಲ ಮನ್ನಾಾ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಪುನರ್ ವಸತಿಗೆ ಬೇಡಿಕೆ :
ಜಿಲ್ಲೆಯಲ್ಲಿ ಭೀಮಾ ನದಿ, ಬೆಣ್ಣೆೆತೊರ ಜಲಾಶಯದಿಂದ ಪ್ರವಾಹ ಪೀಡಿತ ಹಲವು ಗ್ರಾಾಮಗಳ ಜನರು ಶಾಶ್ವತ ಪರಿಹಾರಕ್ಕೆೆ ಪುನರ್ ವಸತಿ ಕಲ್ಪಿಿಸಬೇಕು ಎಂದು ಸರ್ಕಾರಕ್ಕೆೆ ಮನವಿ ಮಾಡಿದ್ದಾರೆ. ಕಲಬುರಗಿ ತಾಲೂಕಿನ ಸರಡಗಿ ಬಿ ಗ್ರಾಾಮದ ಮೀನುಗಾರ ಕುಟುಂಬದವರು ನಮ್ಮಗೆ ಶಾಶ್ವತ ಪರಿಹಾರವಾಗಿ ಪುನರ್ ವಸತಿ ಕಲ್ಪಿಿಸಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನೂ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಿಯಾಂಕ್ ಖರ್ಗೆ ಅವರು ಕಾಳಗಿ ತಾಲೂಕಿನ ಹಳೆ ಹೆಬ್ಬಾಾಳ, ಕಣಸೂರ ಗ್ರಾಾಮಕ್ಕೆೆ ಭೇಟಿ ನೀಡಿದಾಗ ಗ್ರಾಾಮಸ್ಥರು ಶಾಶ್ವತ ಪರಿಹಾರವಾಗಿ ನಮಗೆ ಸ್ಥಳಾಂತರ ಮಾಡಿ ಎಂದು ಮನವಿ ಸಲ್ಲಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರಿಂದ ವೈಮಾನಿಕ ಸಮೀಕ್ಷೆ:
ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ವಿಶೇಷ ವಿಮಾನದ ಮೂಲಕ ಸೆ.30 ರಂದು ಬೆಳಿಗ್ಗೆೆ 10.40 ಗಂಟೆಗೆ ಕಲಬುರಗಿಗೆ ಆಗಮಿಸಲಿದ್ದು ಅಧಿಕಾರಿಗಳೊಂದಿಗೆ ಚರ್ಚೆ/ಸಭೆ ನಡೆಸುವರು. ಮಧ್ಯಾಾಹ್ನ 12.30 ರಿಂದ ಮಧ್ಯಾಾಹ್ನ 1.30 ಗಂಟೆಯವರೆಗೆ ಕಲಬುರಗಿ ಜಿಲ್ಲೆ ಸೇರಿದಂತೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸುವರು. ನಂತರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಳೆಹಾನಿ ಪ್ರದೇಶಗಳಲ್ಲಿ ಕೈಗೊಂಡಿರುವ ಪರಿಹಾರ ಕಾರ್ಯಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.
ಮುಖ್ಯಮಂತ್ರಿಿಗಳು ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸುತ್ತಿಿರುವುದರಿಂದ ಪರಿಹಾರ ನಿರೀಕ್ಷೆ ಹೆಚ್ಚಿಿಸಿದೆ.
ಕೋಟ್ :
ಜಿಲ್ಲೆಯನ್ನು ಹಸಿ ಬರಗಾಲ ಎಂದು ಘೋಷಣೆ ಮಾಡಬೇಕು. ಎಕರೆಗೆ 25 ಸಾವಿರ ಪರಿಹಾರ ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಸಾಲ ಮನ್ನಾಾ ಮಾಡಬೇಕು.
-ಶರಣಬಸಪ್ಪ ಮಮಶೆಟ್ಟಿಿ
ಜಿಲ್ಲಾಧ್ಯಕ್ಷ ಕೆಪಿಆರ್ ಎಸ್.

