ಸುದ್ದಿಮೂಲ ವಾರ್ತೆ ಬಳಗಾನೂರು, ಜ.06:
ಪಟ್ಟಣದ ಪ್ರಾಾಥಮಿಕ ಆರೋಗ್ಯ ಕೇಂದ್ರಕ್ಕೆೆ ಲೋಕಾಯುಕ್ತ ತಂಡ ದಿಢೀರ್ ಭೇಟಿ ನೀಡಿ ಸಂಚಲನ ಮೂಡಿಸಿದರು. ಲೋಕಾಯುಕ್ತ ಅಧಿಕಾರಿಗಳಾದ ಶ್ರೀಕಾಂತ್, ಕರುಣೇಶಗೌಡ ನೇತೃತ್ವದಲ್ಲಿ ಇತರೆ ಅಧಿಕಾರಿಗಳಾದ ಅಜಿತ್ಕುಮಾರ್, ಸತೀಶ ಸೇರಿ ಆರು ಜನ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು.
ಪ್ರಾಾಥಮಿಕ ಆರೋಗ್ಯ ಕೇಂದ್ರಕ್ಕೆೆ ಲೋಕಾಯುಕ್ತ ಅಧಿಕಾರಿಗಳ ತಂಡ ಭೇಟಿ ನೀಡಿದಾಗ ಆಡಳಿತ ಅಧಿಕಾರಿಗಳ ನಿರಂತರ ಗೈರು, ಔಷಧ ವಿತರಣೆ ಲೋಪ , ವೈದ್ಯರ ಕೊರತೆ ಹಾಗೂ ಕೆಲವು ಸಿಬ್ಬಂದಿಗಳ ಕರ್ತವ್ಯ ಲೋಪ ಕುರಿತು ಸಾರ್ವಜನಿಕರು ಆರೋಪಿಸಿ ಆಕ್ರೋೋಶ ವ್ಯಕ್ತಪಡಿಸಿರುವ ಘಟನೆ ಜರುಗಿತು.
ಇವೆಲ್ಲವನ್ನು ಆಲಿಸಿದ ಲೋಕಾಯುಕ್ತ ಅಧಿಕಾರಿಗಳು ಔಷಧಿಉಗ್ರಾಾಣ, ಆಪರೇಷನ್ ಕೋಣೆ, ಹೆರಿಗೆ ಕೋಣೆ, ಔಷಧ ವಿತರಕರ ಕೋಣೆ, ಲಸಿಕೆ ವಿತರಣೆ ಕೋಣೆ, ಪ್ರಥಮಚಿಕಿತ್ಸೆೆ ಕೋಣೆ, ಸಾಮಾನ್ಯ ವಾರ್ಡ್ಗಳು, ಪ್ರಯೋಗಾಲಯಕ್ಕೆೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಸಿಬ್ಬಂದಿಗಳ ಹುದ್ದೆೆ, ನೇಮಕಾತಿ, ಬ್ಯಾಾಂಕ್ ಖಾತೆ, ವ್ಯವಹಾರ ಮಾಹಿತಿ ಸಂಗ್ರಹಿಸಿ ಪರಿಶೀಲಿಸಿದರು. ಕೇಂದ್ರಕ್ಕೆೆ ಚಿಕಿತ್ಸೆೆಗೆ ಆಗಮಿಸಿದ ರೋಗಿಗಳಿಂದ ವೈದ್ಯಾಾಧಿಕಾರಿಗಳ ಮತ್ತು ಸಿಬ್ಬಂದಿಗಳ ಸೇವೆ ಕರ್ತವ್ಯ ನಿಷ್ಠೆೆಯ ಬಗ್ಗೆೆ ಮಾಹಿತಿ ಪಡೆದರು.
ಕೇಂದ್ರ ವೈದ್ಯಾಾಧಿಕಾರಿಗಳಾದ ಡಾ॥ದೌಲಸಾಬ ಮುದ್ದಾಾಪುರ, ಡಾ॥ಸುನೀಲ್ ಅವರಿಗೆ ಪ್ರಾಾಥಮಿಕ ಆರೋಗ್ಯ ಕೇಂದ್ರಕ್ಕೆೆ ಮೂಲಭೂತ ಸೌಲಭ್ಯಕ್ಕೆೆ ಒತ್ತು ನೀಡುವಂತೆ ಸೂಚಿಸಿದರು.
ಸಾರ್ವಜನಿಕರಿಗೆ ಹಾವು, ನಾಯಿ ಮತ್ತು ಕೋತಿ ಕಡಿತದಿಂದ ತುರ್ತು ಚಿಕಿತ್ಸೆೆ ನೀಡುವ ಔಷಧಿ ಮತ್ತು ಇತರೆ ಲಸಿಕೆಗಳ ಮಾಹಿತಿ ಸಂಗ್ರಹಿಸಿದರು.
ಸಾರ್ವಜನಿಕರಿಂದ ಕುಂದು ಕೊರತೆಗಳ ಬಗ್ಗೆೆ ಮಾಹಿತಿ ಪಡೆದು, ಕೇಂದ್ರದಲ್ಲಿನ ನ್ಯೂನ್ಯತೆಗಳನ್ನು ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ತಿಳಿಸಿದರು.
ಬಳಗಾನೂರು ಪಿಎಚ್ಸಿಗೆ ದಿಢೀರ್ ಭೇಟಿ ನೀಡಿದ ಲೋಕಾ ತಂಡ, ತರಾಟೆ

