ಸುದ್ದಿಮೂಲ ವಾರ್ತೆ ಸ್ಟಾಾಕ್ಹೋೋಮ್ (ಸ್ವೀಡನ್), ಅ.09:
2025ನೇ ಸಾಲಿನ ಸಾಹಿತ್ಯ ನೊಬೆಲ್ ಹಂಗೇರಿಯನ್ ಲೇಖಕ ಲಾಸ್ಲೋೋ ಕ್ರಾಾಸ್ನಹೋರ್ಕೈ ಅವರಿಗೆ ಘೋಷಣೆಯಾಗಿದೆ.
ಸ್ವೀಡಿಷ್ ಅಕಾಡೆಮಿ ಆ್ ಸೈನ್ಸಸ್ ಇಂದು ಸಾಹಿತ್ಯ ನೊಬೆಲ್ ಪ್ರಶಸ್ತಿಿ ಪ್ರಕಟಿಸಿತು. ಅತ್ಯಂತ ವಿನಾಶಕಾರಿ ಭೀತಿಯ ಮಧ್ಯೆೆ, ಕಲೆಯ ಶಕ್ತಿಿಯನ್ನು ಪುನರುಚ್ಚರಿಸುವ ಅವರ ಅಪಾರ ಮತ್ತು ದೂರದೃಷ್ಟಿಿಯ ಕೃತಿಗಳಿಗಾಗಿ ಲಾಸ್ಲೋೋ ಕ್ರಾಾಸ್ನಹೋರ್ಕೈ ಅವರನ್ನು ಪ್ರಶಸ್ತಿಿಗೆ ಆಯ್ಕೆೆ ಮಾಡಲಾಗಿದೆ. ಪ್ರಶಸ್ತಿಿ ಮೊತ್ತ 10 ಕೋಟಿ ರೂ. ಎಂದು ಅಕಾಡೆಮಿ ಹೇಳಿದೆ.
ಈ ವರ್ಷದ ಸಾಹಿತ್ಯ ಪ್ರಶಸ್ತಿಿ ವಿಜೇತ ಲಾಸ್ಲೋೋ ಕ್ರಾಾಸ್ನಹೋರ್ಕೈ ಅವರ ’ಹಷ್ಟರ್ 07769’, 1985 ರಲ್ಲಿ ಪ್ರಕಟವಾದ ಮೊದಲ ಕಾದಂಬರಿ ಸತಾಂಟಾಂಗೋ ಶ್ರೇೇಷ್ಠ ಸಮಕಾಲೀನ ಜರ್ಮನ್ ಕಾದಂಬರಿ ಎಂಬ ಹೆಗ್ಗಳಿಕೆ ಪಡೆದಿವೆ. ಹಷ್ಟರ್ 07769 ಸಮಾಜದಲ್ಲಿನ ಅಶಾಂತಿಯನ್ನು ನಿಖರವಾಗಿ ಚಿತ್ರಿಿಸಿದರೆ, ಸತಾಂಟಾಂಗೋ ಹಂಗೇರಿಯಲ್ಲಿನ ಸಾಹಿತ್ಯಿಿಕ ಸಂವೇದನೆಯನ್ನು ಅರಹುತ್ತದೆ.
ಲಾಸ್ಲೋೋ ಕ್ರಾಾಸ್ನಹೋರ್ಕೈ ಅವರು 1954 ರಲ್ಲಿ ಆಗ್ನೇಯ ಹಂಗೇರಿಯ ಸಣ್ಣ ಪಟ್ಟಣ ಗ್ಯುಲಾದಲ್ಲಿ ರೊಮೇನಿಯನ್ ಗಡಿಯ ಬಳಿ ಜನಿಸಿದರು. ಸಾಮಾಜಿಕ ಅರಾಜಕತೆ, ಹತ್ಯಾಾಕಾಂಡದ ಮೇಲೆ ಅವರ ಕಾದಂಬರಿಗಳು ವಿರಚಿತವಾಗಿವೆ.
ಕ್ರಾಾಸ್ನಹೋರ್ಕೈ ಮಧ್ಯ ಯುರೋಪಿನ ಸಾಂಪ್ರದಾಯಿಕ ಖ್ಯಾಾತ ಬರಹಗಾರರಾಗಿದ್ದಾರೆ. ಇವರ ಬರವಣಿಗೆಯು ಕ್ಕಾಾದಿಂದ ಥಾಮಸ್ ಬರ್ನಾರ್ಡ್ವರೆಗೆ ವಿಸ್ತರಿಸಿದೆ. ಅವರ ಬರಹಗಳು ತರ್ಕಬದ್ಧ, ಅಸಾಧಾರಣವಾಗಿ ನಿರೂಪಿಸಲ್ಪಟ್ಟಿಿವೆ ಎಂದು ಸ್ವೀಡಿಷ್ ಅಕಾಡೆಮಿ ತಿಳಿಸಿದೆ.
1901 ರಿಂದ 2024 ರವರೆಗೆ 117 ಸಾಹಿತ್ಯ ನೊಬೆಲ್ ಪ್ರಕಟಿಸಲಾಗಿದೆ. ಅದರಲ್ಲಿ 121 ಮಂದಿಗೆ ಪ್ರಶಸ್ತಿಿ ನೀಡಲಾಗಿದೆ. ಬಂಗಾಳಿ ಸೇರಿದಂತೆ 20 ಕ್ಕೂ ಹೆಚ್ಚು ಭಾಷೆಗಳ ಸಾಹಿತಿಗಳು ಈ ಪ್ರಶಸ್ತಿಿಗೆ ಭಾಜನರಾಗಿದ್ದಾರೆ.
ಭಾರತಕ್ಕೆೆ ಕೈತಪ್ಪಿಿದ ಪ್ರಶಸ್ತಿಿ
ಭಾರತಕ್ಕೆೆ ಈ ಬಾರಿ ಸಾಹಿತ್ಯ ನೊಬೆಲ್ ಸಿಗುವ ನಿರೀಕ್ಷೆ ಇತ್ತು. ಬಂಗಾಳಿ ಲೇಖಕ ಅಮಿತಾವ್ ಘೋಷ್ ಅವರ ಹೆಸರು ಮುಂಚೂಣಿಯಲ್ಲಿತ್ತು. ಘೋಷ್ ಅವರ ವಸಾಹತುಶಾಹಿ ಮತ್ತು ಹವಾಮಾನ ಬದಲಾವಣೆ ಕುರಿತಾದ ಬರಹಗಳು ಪ್ರಶಸ್ತಿಿ ಪಡೆಯಲಿವೆ ಎಂದು ಅಂದಾಜಿಸಲಾಗಿತ್ತು. ಆದರೆ, ಹಂಗೇರಿ ಲೇಖಕರಿಗೆ ಪ್ರಶಸ್ತಿಿ ಸಿಗುವ ಮೂಲಕ ಭಾರತಕ್ಕೆೆ ಶತಮಾನದ ನಿರೀಕ್ಷೆ ಹುಸಿಯಾಯಿತು.
112 ವರ್ಷಗಳ ಹಿಂದೆ ಅಂದರೆ 1913 ರಲ್ಲಿ ಬಂಗಾಳಿ ಲೇಖಕ ರವೀಂದ್ರನಾಥ್ ಟ್ಯಾಾಗೋರ್ ಅವರಿಗೆ ಸಾಹಿತ್ಯ ನೊಬೆಲ್ ಸಿಕ್ಕಿಿತ್ತು. ಈ ಪ್ರಶಸ್ತಿಿ ಪಡೆದ ಭಾರತದ ಏಕೈಕ ಲೇಖಕರಾಗಿದ್ದಾರೆ.