ಸುದ್ದಿಮೂಲ ವಾರ್ತೆ ಕೊಪ್ಪಳ , ಡಿ.11:
ತನ್ನ ಮತ್ತು ಹೆಂಡತಿ ಮಧ್ಯೆೆ ಜಗಳಕ್ಕೆೆ ಕಾರಣವಾಗಿ ತಲಾಖ್ ಕೇಳುವಂತೆ ಮಾಡಲು ಕಾರಣನಾಗಿದ್ದಾಾನೆ ಎಂದು ಹೆಂಡತಿಯ ಅಕ್ಕನ ಗಂಡನ ಕೊಲೆಗೈದ ಆರೋಪಿಗೆ ಗಂಗಾವತಿಯ 1 ನೆಯ ಜಿಲ್ಲಾಾ ಸತ್ರ ನ್ಯಾಾಯಾಧೀಶರು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾಾರೆ.
2023 ಅ 3 ರಂದು ಆರೋಪಿ ಗಂಗಾವತಿಯ ನೂರ್ ಅಹ್ಮದ್ ಹೆಂಡತಿಯ ಅಕ್ಕನ ಗಂಡ ಮೌಲಾಹುಸೇನನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಕೊಲೆ ಮಾಡಿ ಗಂಗಾವತಿ ನಗರಠಾಣೆಗೆ ಶರಣಾಗಿದ್ದ. ಈಗ ಆರೋಪ ಸಾಬೀತಾಗಿ ಶಿಕ್ಷೆಗೊಳಗಾಗಿದ್ದಾಾನೆ.

