ಸುದ್ದಿಮೂಲ ವಾರ್ತೆ
ಮೈಸೂರು, ಜು.29: ಜಿಲ್ಲೆಯ ಹುಣಸೂರಿನ ಆಯುರ್ವೇದಿಕ್ ವೆಸ್ಟೀಜ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಕೊಲೆ ಮಾಡಿದ್ದ ವ್ಯಕ್ತಿಗೆ ಮೈಸೂರಿನ 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಹುಣಸೂರಿನ ನರಸಿಂಹ ಬಡವಾಣೆ ನಿವಾಸಿ ಪ್ರವೀಣ್ ಕುಮಾರ್ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಇವನು 2017ರ ಡಿಸೆಂಬರ್ 9ರಂದು ಜ್ಯೋತಿ ಎಂಬ ಮಹಿಳೆಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ. ನ್ಯಾಯಾಲಯವು ಪ್ರವೀಣ್ಗೆ 10 ಸಾವಿರ ರು. ದಂಡ ಹಾಗೂ ಜೀವಾವಧಿ ಶಿಕ್ಷೆವಿಧಿಸಿದೆ.