ಸುದ್ದಿಮೂಲವಾರ್ತೆ
ಕೊಪ್ಪಳ ಜು 14:ಈಗಾಗಲೇ ಹಲವು ಕಾರ್ಖಾನೆಗಳಿಂದ ಪರಿಸರ ಹಾನಿಯಾಗಿದೆ ಎಂಬ ಕೂಗು ಕೇಳಿ ಬರುತ್ತಿರುವಾಗಲೇ ಕೊಪ್ಪಳ ಬಳಿ ಇನ್ನೊಂದು ಕಾರ್ಖಾನೆ ಆರಂಭಿಸಲು ಸಿದ್ದತೆ ನಡೆದಿದೆ. ಪರಿಸರ ಕುರಿತು ಸಾರ್ವಜನಿಕರ ಅಹವಾಲು ಸ್ವೀಕಾರಕ್ಕೆ ಕರೆದ ಸಭೆಯು ಗೊಂದಲದಲ್ಲಿ ಮುಕ್ತಾಯವಾಗಿದೆ.
ಗೊಂಡಬಾಳ, ಮುದ್ದಾಬಳ್ಳಿ ಮಧ್ಯೆ ಇರುವ ಕೃಷಿ ಜಮೀನಿನಲ್ಲಿ ಯುಕೆಇಎಮ್ ಅಗ್ರಿ ಇನ್ಫ್ರಾ ಲಿಮಿಟೆಡ್ ಕಂಪನಿಯಿಂದ ಸಕ್ಕರೆ ಕಾರ್ಖಾನೆ ಸ್ಥಾಪನೆ ಸಿದ್ದತೆ ನಡೆದಿದೆ. ಈ ಕಾರ್ಖಾನೆ ಆರಂಭಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸಾರ್ವಜನಿಕರು ಹಾಗು ರೈತರಿಂದ ಪರಿಸರ ಅಹವಾಲು ಸ್ವೀಕಾರ ಮಾಡುವ ಸಭೆ ಕರೆಯಲಾಗಿತ್ತು.
ಕೊಪ್ಪಳ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿಯವರ ಅಧ್ಯಕ್ಷತೆಯಲ್ಲಿ ಇಂದು ಪರಿಸರ ಅಹವಾಲು ಸ್ವೀಕಾರ ಮಾಡಲಾಯಿತು. ಆದರೆ ಸಭೆಯಲ್ಲಿ ಕಾರ್ಖಾನೆ ಆರಂಭಕ್ಕೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಯಿತು.
ಯುಜೆಇಎಮ್ ಅಗ್ರಿ ಇನ್ಫ್ರಾ ಲಿಮಿಟೆಡ್ ಕಂಪನಿಉ ಸಕ್ಕರೆ ಕಾರ್ಖಾನೆ
ಮುದ್ದಾಬಳ್ಳಿ,ಗೊಂಡಬಾಳ ಗ್ರಾಮದ ಹೊರವಲಯದಲ್ಲಿ 48 ಎಕರೆ ಪ್ರದೇಶದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಲಾಗುತ್ತಿದೆ.
ಈಗಾಗಲೆ ಹಲವು ಕಾರ್ಖಾನೆಗಳಿವೆ. ಇದರಿಂದ ಪರಿಸರ ಹಾಳಾಗಿದೆ. ಬೆಳೆಯು ಹಾನಿಯಾಗಿದೆ. ಈ ಭಾಗದಲ್ಲಿ ಕಾರ್ಖಾನೆ ಬೇಡ ಬೇರೆ ಕಡೆ ಆರಂಭಿಸಿ ಎಂದು ಕೆಲವರು. ಇನ್ನೂ ಕೆಲವರು ಸಕ್ಕರೆ ಕಾರ್ಖಾನೆಯಿಂದಾಗಿ ಇಲ್ಲಿ ರೈತರಿಗೂ ಅನುಕೂಲವಾಗಲಿದೆ ಇಲ್ಲಿ ಕಾರ್ಖಾನೆ ಆರಂಭವಾಗಲಿ ಎಂದುಪರ ವಿರೋಧ ಅಭಿಪ್ರಾಯವನ್ನು ಗ್ರಾಮಸ್ಥರು ವ್ಯಕ್ತಪಡಿಸಿದರು.
ಅಭಿಪ್ರಾಯ ವ್ಯಕ್ತಪಡಿಸುವ ವೇಳೆ ಗೊಂದಲ ನಿರ್ಮಾಣವಾಯಿತು.ಗ್ರಾಮಸ್ಥರ,ಅಧಿಕಾರಿಗಳ,ಪೊಲೀಸರ ನಡುವೆ ಗೊಂದಲ ಸೃಷ್ಟಿಯಾಯಿತು. ಕೊನೆಗೆ ಸಭೆಯಿಂದ ಎಡಿಸಿ ಹೊರನಡೆದರು.
ಇದು ಕೇವಲ ಪರಿಸರ ಕುರಿತು ಆಲಿಕೆ ಸಭೆ. ಇಲ್ಲಿ ಹೇಳಿದ್ದನ್ನು ಹಾಗು ಲಿಖಿತವಾಗಿ ನೀಡುವ ಅಹವಾಲುನ್ನು ಸರಕಾರಕ್ಕೆ ಕಳುಹಿಸುತ್ತೇವೆ ಸರಕಾರ ನಿರ್ಧಾರ ಮಾಡಲಿದೆ ಎಂದು ಹೇಳಿದರು.