ಸುದ್ದಿಮೂಲ ವಾರ್ತೆ ರಾಯಚೂರು, ಜ.19:
ಧಾರ್ಮಿಕ ಪುರುಷರಲ್ಲಿ ವೇಮನರು ಕೂಡ ಮಹತ್ವದ ಯೋಗಿಯಾಗಿದ್ದಾಾರೆ. ಕರ್ನಾಟಕ ಮತ್ತು ಆಂಧ್ರ ಪ್ರದೇಶ ಎರಡರ ನಡುವಿನ ಕೊಂಡಿಯಾಗಿದ್ದಂತಹ ವೇಮನ ಅವರು ಎಲ್ಲರ ಹಾಗೆ ಸಾಮಾನ್ಯ ಮನುಷ್ಯರಂತೆ ಜೀವಿಸಿದವರು. ಸಂಸಾರಿಕ ಜೀವನ ಹೊಂದಿದ ಇವರು ವೇಶ್ಯೆೆಯ ಸಹವಾಸದಿಂದಾಗಿ ವೇಮನರಿಗೆ ಜಿಗುಪ್ಸೆೆಯಾಗುತ್ತದೆ, ಎಂತಹ ಬೋಗದೊಳಗೆ ಸಿಕುಕಿದ್ದೇನೆ, ಅಸಹ್ಯಕರವಾದ ದೇಹಕ್ಕಾಾಗಿ ಆಸೆ ಪಟ್ಟು ನನ್ನ ತನವನ್ನು, ನನ್ನ ಅಸ್ತಿಿತ್ವವನ್ನು, ಅಸ್ಮಿಿತತೆಯನ್ನು ಕಳೆದುಕೊಂಡಿದ್ದೇನೆ ಎಂದು ಹೇಳಿದ ನಂತರ ಧ್ಯಾಾನಸ್ಥನಾಗಿ ಯೋಗಿಯಾಗಿ ದಾರ್ಶನಿಕ ಪುರುಷನಾಗಿ ಲೋಕಕ್ಕೆೆ ಬೆಳಕಾಗಿ ಕಾಣುತ್ತಾಾರೆ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾನಿಲಯದ ಕುಲಪತಿಗಳಾದ ಪ್ರೊೊ.ಶಿವಾನಂದ ಕೆಳಗಿನಮನಿ ಅವರು ಹೇಳಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾನಿಲಯದಲ್ಲಿ ಮಹಾಯೋಗಿ ವೇಮನ ಜಯಂತಿಯನ್ನು ಅವರ ಭಾವಚಿತ್ರಕ್ಕೆೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಯೋಗಿ ವೇಮನ ಮಹಾನ್ ಯೋಗಿಯಾಗಿ ಪರಿವರ್ತನೆಗೊಳ್ಳುತ್ತಾಾರೆ. ಈ ಕಲುಷಿತ ಸಮಾಜದಲ್ಲಿರುವ ಜಾತಿಯತೆ, ಮೂಢನಂಬಿಕೆ, ಮೌಢ್ಯತೆ, ಕಂದಾಚಾರಗಳು, ಮಹಿಳೆಯರ ಶೋಷಣೆ, ಅಸ್ಪೃಶ್ಯತೆ ಬಗ್ಗೆೆ ವೈದಿಕ ಕರ್ಮಠದ ಆಚರಣೆಗಳನ್ನು ದಿಕ್ಕರಿಸಿ, ಅವರಿಗೆ ವಾಚಾಮಗೋಚರವಾಗಿ ಬೈಯುತ್ತಾಾರೆ ಈ ಎಲ್ಲಾಾ ಅಪರಾಧಗಳ ಆಚರಣೆ ವಿಚಾರಗಳ ಬಗ್ಗೆೆ ಒಂದು ದೊಡ್ಡ ಬಂಡಾಯ ಧರ್ಮದ ಹಾಗೆ ವೇಮನು ಕಾಣುತ್ತಾಾರೆ. ಮನುಷ್ಯ ಮತ್ತು ನಿಸರ್ಗದ ಬದುಕಿನ ಅನನ್ಯತೆಯ ಸಂಬಂಧ ಕುರಿತು ಅವರ ವಚನಗಳು ರಚನೆಮಾಡಿದ್ದಾಾರೆ. ಮನಸ್ಸು, ದೇಹ, ಆತ್ಮ, ಆಧ್ಯಾಾತ್ಮದ ಕುರಿತು ಹೇಳುತ್ತಾಾರೆ. ತೆಲುಗು ಸಾಹಿತ್ಯ, ಆಧುನಿಕ ಸಾಹಿತ್ಯದ ಮೊದಲ ನಿರ್ಮಾಪಕರು ವೇಮನರಾಗಿದ್ದಾಾರೆ. ಅವರ ಸಂದೇಶಗಳು ಕೊಡುಗೆಗಳು ಅಪಾರವಾಗಿದ್ದು, ತೆಲುಗು ಸಾಹಿತ್ಯದ ಭಾಷಾ ಪ್ರೌೌಡಿಮೆ ಅವರು ಬಳಸಿದ ರೂಪಕಗಳಲ್ಲಿ ಹಾಗೂ ಅಲಂಕಾರಗಳಲ್ಲಿ, ಶೈಲಿ ಛಂದಸ್ಸುಗಳಲ್ಲಿ ಹೇಳಿದ ಬಹುದೊಡ್ಡ ಕೊಡುಗೆಯಾಗಿದೆ. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಿಕವಾಗಿ ಕೊಡುಗೆಗಳನ್ನು ನೀಡಿದ್ದಾಾರೆ. ಮುಂದಿನ ದಿನಮಾನಗಳಲ್ಲಿ ವಿಚಾರ ಸಂಕಿರಣ ಏರ್ಪಡಿಸಿ ಯೋಗಿ ವೇಮನ ದರ್ಶನ ಕುರಿತು ಜೀವನ ಸಂದೇಶಗಳು ತತ್ವಗಳನ್ನು ತಿಳಿದುಕೊಳ್ಳೊೊಣ ಎಂದು ಅವರು ಹೇಳಿದರು.
ಕುಲಸಚಿವ ಡಾ.ಕೆ.ವೆಂಕಟೇಶ ಮಾತನಾಡಿ, ಮೌಢ್ಯರಹಿತವಾದ, ವರ್ಗರಹಿತವಾದ ಸಮಾಜ ಸ್ಥಾಾಪನೆಮಾಡಲು ನಾವೆಲ್ಲರೂ ಬದ್ಧರಾಗೋಣ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿಿ ಮಂಡಳಿ ನಿದೇಶಕರಾದ ಡಾ.ಸುಯಮೀಂದ್ರ ಕುಲಕರ್ಣಿ, ಎನ್ಎಸ್ಎಸ್ ಸಂಯೋಜಣಾಧಿಕಾರಿ ಡಾ.ಜಿ.ಎಸ್.ಬಿರಾದಾರ, ಅತಿಥಿ ಉಪನ್ಯಾಾಸಕರು, ಬೋಧಕೇತರ ಸಿಬ್ಬಂದಿಗಳು, ವಿದ್ಯಾಾರ್ಥಿಗಳು ಉಪಸ್ಥಿಿತರಿದ್ದರು.
ಲೋಕಕ್ಕೆ ಬೆಳಕಾದ ಮಹಾಯೋಗಿ ವೇಮನ ಸಂದೇಶಗಳು :ಪ್ರೊ.ಶಿವಾನಂದ ಕೆಳಗಿನಮನಿ

