ಸುದ್ದಿಮೂಲ ವಾರ್ತೆ ಮಾನ್ವಿ, ೆ.20:
ಮಾನ್ವಿಿ ತಾಲೂಕಿನ ಕರೇಗುಡ್ಡ ಗ್ರಾಾಮದಲ್ಲಿ ಶ್ರೀ ಮಹಾಂತೇಶ್ವರ ಮಠದ ಆವರಣದಲ್ಲಿ 40 ಲಕ್ಷ ರೂ. ವೆಚ್ಚದ ನೂತನ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಶುಕ್ರವಾರ ಶಂಕುಸ್ಥಾಾಪನೆ ನೆರವೇರಿಸಿದರು.
ನಂತರ ಮಾತನಾಡಿದ ಸಚಿವರು ಗ್ರಾಾಮದ ಜನರಿಗೆ ಹಾಗೂ ಗ್ರಾಾಮದಲ್ಲಿನ ಶ್ರೀ ಮಹಾಂತೇಶ್ವರ ಮಠದ ವಿವಿಧ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಶಾಸಕರು, ಸಂಸದರ, ವಿಧಾನಪರಿಷತ್ ಸದಸ್ಯರ ಅನುದಾನ ಅಡಿಯಲ್ಲಿ 40 ಲಕ್ಷ ರೂ. ವೆಚ್ಚದ ಸುಸಜ್ಜಿಿತ ಸಮುದಾಯ ಭವನವನ್ನು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಅಧಿಕಾರಿಗಳು ಗುಣಮಟ್ಟದ ಕಾಮಗಾರಿಗೆ ಹೆಚ್ಚಿಿನ ಅದ್ಯತೆ ನೀಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಶ್ರೀ ಮಹಾಂತೇಶ್ವರ ಮಠದ ಶ್ರೀ ಮಹಾಂತಲಿಂಗ ಮಹಾಸ್ವಾಾಮಿಗಳು, ರಾಯಚೂರು ಸಂಸದ ಜಿ.ಕುಮಾರ ನಾಯಕ, ಶಾಸಕ ಹಂಪಯ್ಯ ನಾಯಕ, ಬ್ಲಾಾಕ್ ಕಾಂಗ್ರೆೆಸ್ ಅಧ್ಯಕ್ಷ ಅಬ್ದುಲ್ ಗಪೂರ್ಸಾಬ್, ಗ್ಯಾಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಬಿ.ಕೆ. ಅಮರೇಶಪ್ಪ ವಕೀಲರು, ಮುಖಂಡರಾದ ರೌಡೂರು ಮಹಾಂತೇಶ ಸ್ವಾಾಮಿ, , ರಾಜಾ ಸುಭಾಶ್ಚಂದ್ರ ಚಂದ್ರ ನಾಯಕ, ರಾಜಶೇಖರ ಪಾಟೀಲ್ ಜಾನೇಕಲ್, ಮಹೇಶ್ ಗೌಡ ಗವಿಗಟ್, ಅಂಬಣ್ಣ ಪಾಟೀಲ್, ಬಸವಲಿಂಗಪ್ಪಗೌಡ, ಚನಬಸವ ನಾಯಕ, ದೊಡ್ಡಬಸಪ್ಪ, ಅಮರೇಶ ಕುರುಬರ, ಪರ್ವತರೆಡ್ಡಿಿ ಬ್ಯಾಾಗವಾಟ, ವೆಂಕನಗೌಡ ಬ್ಯಾಾಗವಾಟ, ಯಲ್ಲಪ್ಪ, ಬಳ್ಳಾಾರಿ ಶಿವಕುಮಾರ, ಹನುಮಂತಪ್ಪ ಗೌಡ ಪೊಲೀಸ್ ಪಾಟೀಲ್ ನಕ್ಕುಂದಿ ಸೇರಿದಂತೆ ಗ್ರಾಾಮದ ಮುಖಂಡರು ಇದ್ದರು.
ಕರೇಗುಡ್ಡ ಮಠದ ಆವರಣದಲ್ಲಿ 40 ಲಕ್ಷ ರೂ.ವೆಚ್ಚದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಸಚಿವರಿಂದ ಚಾಲನೆ

