ಸುದ್ದಿಮೂಲ ವಾರ್ತೆ ಬೀದರ, ಅ.14:
ನಾಲ್ಕಾಾರು ಮನೆಗೆಳಿಗೆ ಹೋಗಿ ಕೆಲಸ ಮಾಡಿಕೊಂಡು ಬದುಕುತ್ತಿಿರುವ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಹೊಸ ಬಿಲ್ ತರಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ರಾಜ್ಯದ ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ಜಿಲ್ಲಾ ಪತ್ರಿಿಕಾ ಭವನದಲ್ಲಿ ಮಂಗಳವಾರ ಪತ್ರಿಿಕಾಗೋಷ್ಟಿಿ ಉದ್ದೇಶಿಸಿ ಮಾತನಾಡಿರುವ ಅವರು, 101 ವಿವಿಧ ಅಸಂಘಟಿತ ಕಾರ್ಮಿಕ ವರ್ಗಗಳಿಗೆ ಸ್ಮಾಾರ್ಟ್ ಕಾರ್ಡ್ ವಿತರಿಸಲು ಬೀದರ್ಗೆ ಆಗಮಿಸಿರುವುದಾಗಿ ತಿಳಿಸಿದರು.
ವ್ಯಾಾಪಮ್ ಕೇಸ್ನಲ್ಲಿ 44 ಜನ ಸಾಕ್ಷಿಗಳ ಹತ್ಯೆೆಯಾದರೂ ಪ್ರಧಾನಿ ಮೋದಿಯಾಗಲಿ ಅಥವಾ ಬಿಜೆಪಿಯವರು ದಿವ್ಯ ಮೌನ ವಹಿಸಿದ್ದಾರೆ. ತಾಲಿಬಾನಿಗಳನ್ನು ವಿರೋಧಿಸುತ್ತಿಿದ್ದ ಬಿಜೆಪಿಯವರು ಉತ್ತರ ಪ್ರದೇಶದಲ್ಲಿ ತಾಲಿಬಾನಿಗಳನ್ನು ಬರಮಾಡಿಕೊಂಡು ಅವರಿಗೆ ಗೌರವ ಸಲ್ಲಿಸಿ ಪತ್ರಿಿಕಾಗೋಷ್ಟಿಿ ಮಾಡಲಿಕ್ಕೆೆ ಅವಕಾಶ ನೀಡಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ನಮ್ಮ ಯು.ಪಿ.ಎ ಸರ್ಕಾರ 1 ಹಾಗೂ 2ನೇ ಅವಧಿಯಲ್ಲಿ ಒಟ್ಟು ಬಾಂಗ್ಲಾಾ ದೇಶದ 80 ಸಾವಿರ ನುಸುಳುಕೋರರನ್ನು ಹೊರ ಹಾಕಲಾಗಿದೆ. ಆದರೆ ಇವರ 11 ವರ್ಷದ ಅವಧಿಯಲ್ಲಿ ಬರೀ 6 ಸಾವಿರ ನುಸುಳುಕೋರರಿಗೆ ಹೊರದೂಡಿ ದೊಡ್ಡ ಸಾಧನೆ ಮಾಡಿದ್ದಾಗಿ ಹೇಳಿಕೊಳ್ಳುತ್ತಿಿದ್ದಾರೆ. ಅಂದು ಸಾವಿತ್ರಿಿಬಾಯಿ ುಲೆ ಅವರ ಮೇಲೆ ಕೆಸರು ಎರಚಲಾಗಿತ್ತು. ಇಂದು ಸರ್ವೋಚ್ಛ ನ್ಯಾಾಯಾಲಯದ ಮುಖ್ಯ ನ್ಯಾಾಯಮೂರ್ತಿಗಳ ಮೇಲೆ ಶೂ ಎಸೆದ ಪ್ರಸಂಗ ನಡೆದಿದೆ. ಇದು ಹಾಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ಎಂದು ಕುಟುಕಿದರು.
ಆರ್.ಎಸ್.ಎಸ್ ಬಗ್ಗೆೆ ಪತ್ರಕರ್ತರು ಕೇಳಿದ ಪ್ರಶ್ನೆೆಗೆ ಉತ್ತರಿಸಿ, ಈಗಾಗಲೇ ಮುಖ್ಯಮಂತ್ರಿಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪರಿಶೀಲಿಸುವಂತೆ ತಿಳಿಸಿದ್ದಾರೆ ಎಂದು ಲಾಡ್ ಹೇಳಿದರು.
ಪೌರಾಡಳಿತ ಸಚಿವ ರಹಿಮ್ ಖಾನ್, ಮಹಾನಗರ ಪಾಲಿಕೆ ಅಧ್ಯಕ್ಷ ಮಹಮ್ಮದ್ ಗೌಸ್, ಕಾಡಾ ಅಧ್ಯಕ್ಷ ಬಾಬು ಹೊನ್ನಾಾ ನಾಯಕ, ಮಾಜಿ ಎಮ್.ಎಲ್.ಸಿ ಅರವಿಂದಕುಮಾರ ಅರಳಿ, ಅರವಿಂದಕುಮಾರ ಅರಳಿ, ಕಾಂಗ್ರೆೆಸ್ ಮುಖಂಡರಾದ ಭೀಮಸೇನರಾವ ಶಿಂಧೆ, ಅನಿಲ ಕಾಳೆ, ಅಮರ ಜಾಧವ ಹಾಗೂ ಇತರರು ಪತ್ರಿಿಕಾಗೋಷ್ಟಿಿಯಲ್ಲಿದ್ದರು.
ಸಂಪುಟ ಪುನರಾರಚನೆ ತಪ್ಪೇನಲ್ಲ : ಲಾಡ್
ಸಚಿವ ಸಂಪು ಪುನರಾರಚನೆ ಮಾಡುವುದರಲ್ಲಿ ತಪ್ಪೇನಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರತಿಕ್ರಿಿಯಿಸಿದ್ದಾರೆ.
ಕೆಲ ಶಾಸಕರು ಸಂಪುಟ ಪುನರ್ ರಚನೆಗೆ ಒತ್ತಾಾಯಿಸುತ್ತಿಿದ್ದಾರೆ ಎಂಬ ಪ್ರಶ್ನೆೆಗೆ ಸಚಿವರು ಉತ್ತರಿಸಿದ್ದು, ಹೊಸದಾಗಿ ಮಂತ್ರಿಿಯಾಗುವ ಶಾಸಕರು ಸಂಪುಟ ಪುನರಾರಚನೆಗೆ ಒತ್ತಾಾಯಿಸುವುದು ಸಹಜ. ಪೂರ್ಣ ಪ್ರಮಾಣದ ಸರ್ಕಾರ ಅಸ್ತಿಿತ್ವದಲ್ಲಿದೆ. ಇದೊಂದು ಸಹಜ ಪ್ರಕ್ರಿಿಯೆ. ಆದರೆ, ಶಾಸಕರು ಮಾಧ್ಯಮಗಳ ಮುಂದೆ ಒತ್ತಾಾಯಿಸದೇ ಪಕ್ಷದ ಚೌಕಟ್ಟಿಿನಲ್ಲಿ ಕೇಳುವುದು ಸೂಕ್ತ ಎಂಬುದು ನನ್ನ ಅನಿಸಿಕೆ. ಇದರಿಂದ ಗೊಂದಲಗಳು ಹುಟ್ಟಿಿಕೊಳ್ಳುವ ಸಾಧ್ಯತೆ ಇದೆ. ಇದು ಎಲ್ಲರೂ ಒಪ್ಪಬೇಕು ಎಂದೇನಿಲ್ಲ ಎಂದರು.
ಮುಂಬರುವ ದಿನಗಳಲ್ಲಿ ಪಕ್ಷದ ವರಿಷ್ಠರು ಈ ಬಗ್ಗೆೆ ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತಾಾರೆ ಎಂದರು.
ಸರದಾರ ಪಟೇಲ್ ರಿಂದ 2 ಬಾರಿ ಆರ್ ಎಸ್ ಎಸ್ ಬ್ಯಾಾನ್
ಕಾಂಗ್ರೆೆಸ್ ಸರ್ಕಾರದ ಅವಧಿಯಲ್ಲಿ ದೇಶದ ಗೃಹ ಮಂತ್ರಿಿಯಾಗಿದ್ದ ಸರ್ದಾರ್ ವಲ್ಲಭಾಯಿ ಪಟೇಲರು ಎರಡು ಬಾರಿ ಆರ್ಎಸ್ಎಸ್ ಸಂಘಟನೆಯನ್ನು ನಿಷೇಧಿಸಿದ್ದರು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್ ನಲ್ಲಿ ಮೂರು ಸಾವಿರ ಕೋಟಿ ರೂ. ಖರ್ಚು ಮಾಡಿ ಸದಾರ್ರ ಪಟೇಲರ ಪುತ್ಥಳಿ ನಿರ್ಮಿಸಲಾಗಿದೆ. ಇದೇ ಪಟೇಲರು ಹಿಂದೆ
ಆರ್ಎಸ್ಎಸ್ ನಿಷೇಧಿಸಿದ್ದರು ಎಂಬುದು ಮರೆಯಬಾರದು ಎಂದರು.
ಆರ್ಎಸ್ಎಸ್ನಲ್ಲಿ ಇದ್ದರಷ್ಟೇ ದೇಶಪ್ರೇೇಮ ಎಂಬುದು ತಪ್ಪುು. ದೇಶದಲ್ಲಿ ವಾಸಿಸುವ ಎಲ್ಲರಲ್ಲೂ ದೇಶಪ್ರೇೇಮ ಇದೆ ಎಂದು ಮಾರ್ಮಿಕವಾಗಿ ನುಡಿದರು.