ಸುದ್ದಿಮೂಲವಾರ್ತೆ
ಕೊಪ್ಪಳ,ಅ.5:ಕೊಪ್ಪಳ ತಾಲೂಕಿನ ಡಂಬರಳ್ಳಿಯ ಯುವಕ ಕಾಣೆಯಾದ ಶವವಾಗಿ ಪತ್ತೆ ಯಾಗಿದ್ದಾನೆ.
ತಳಕಲ್ಲ ಹೊರವಲಯದ ಸಾದರ ಕೆರೆಯಲ್ಲಿ ಕೈ ಕಾಲು ಕಟ್ಟಿರುವ ಶವ ಪತ್ತೆಯಾಗಿದ್ದು ಈ ಶವವು ಡಂಬರಳ್ಳಿಯಲ್ಲಿ ಕಾಣೆಯಾಗಿರುವ ಯುವಕ ಚಂದ್ರಶೇಖರಗೌಡ ನಂದನಗೌಡರದು ಎಂದು ಗುರುತಿಸಲಾಗಿದೆ. ಯಾರು ಕೊಲೆ ಮಾಡಿ ಕೆರೆ ಎಸೆದಿರುವ ಶಂಕೆ ವ್ಯಕ್ತವಾಗಿದೆ.

ಕೊಪ್ಪಳ ತಾಲೂಕಿನ ಡಂಬರಳ್ಳಿಯ ಯುವಕ
ಚಂದ್ರಶೇಖರ ಗೌಡ ನಂದನಗೌಡ(27) ಎಂಬುವವರು ಹಿರೇಸಿಂದೋಗಿಯಲ್ಲಿ ಕಂಪ್ಯೂಟರ ಅಂಗಡಿ ಮಾಡಿಕೊಡಿದ್ದ. ಸೆ 29 ರಂದು ಹಿರೇಸಿಂದೋಗಿಯ ಬ್ಯಾಂಕ್ ಸಿಬ್ಬಂದಿಯೊಂದಿಗೆ ರಾತ್ರಿ ಊಟಕ್ಕೆ ಹೋಗಿದ್ದ.ಅಂದಿನಿಂದ ಆತನ ಫೋನು ಸ್ವಿಚ್ಛಾಪ್ ಆಗಿತ್ತು. ಕಾಣೆಯಾಗಿರುವ ಕುರಿತು ಅಳವಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಘಟನೆಯ ನಂತರ ಪೊಲೀಸರು ಎಲ್ಲಾ ಸಾಧ್ಯತೆಗಳು ವಿಚಾರಣೆ ನಡೆಸಿದ್ದು.ಕೈ ಕಾಲು ಕಟ್ಟಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಇದು ಆತ್ಮಹತ್ಯೆ ಕೊಲೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

