ಸುದ್ದಿಮೂಲ ವಾರ್ತೆ
ಕೆ.ಆರ್.ಪುರ.ನ.24:ಮಹದೇವಪುರ ಕ್ಷೇತ್ರದ ದೊಡ್ಡಗುಬ್ಬಿ ಗ್ರಾಮ ಪಂಚಾಯತಿ ಕಾರ್ಯಾಲಯದ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕಿ ಮಂಜುಳಾ ಲಿಂಬಾವಳಿ ಅವರು ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಉತ್ತಮ ಅಡಳಿತ ನಡೆಸಲು ಸುಸಜ್ಜಿತವಾದ ಕಟ್ಟಡ ಅವಶ್ಯಕವಿರುವುದರಿಂದ ಭೂಮಿ ಪೂಜೆ ಮಾಡಲಾಗಿದೆ. ನೂತನ ಕಟ್ಟಡದಲ್ಲಿ ಗ್ರಾಮಸ್ಥರ ಅನುಕೂಲಕ್ಕಾಗಿ ಆಸನದ ವ್ಯವಸ್ಥೆ, ಸಭೆ ನಡೆಸಲು ಸಭಾಂಗಣ ಮುಂತಾದ ಸೌಲಭ್ಯ ಇರಲಿದೆ. ಸಾರ್ವಜನಿಕರ ಕುಂದುಕೊರತೆ ಆಲಿಸಲು ಸಹಕಾರಿಯಾಗಲಿದೆ ಎಂದರು.
ಸುಸಜ್ಜಿತವಾದ ಆಡಳಿತ ನಡೆಸಲು ಅಧಿಕಾರಿಗಳಿಗೆ ಉತ್ತಮ ಕಟ್ಟಡದ ಅವಶ್ಯಕತೆ ಇದೆ. ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿದ್ದು ನೂತನ ಪಂಚಾಯತಿ ಕಾರ್ಯಾಲಯ ಕಟ್ಟಡ ನಿರ್ಮಾಣ ಆಗುವುದರಿಂದ ಇಲ್ಲಿನ ಗ್ರಾಮಸ್ಥರ ಕುಂದು ಕೊರತೆಗಳ ಬಗ್ಗೆ ಚರ್ಚೆ ಮಾಡಲು ಉತ್ತಮ ವೇದಿಕೆ ಸಿಗಲಿದೆ. ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿಯಾಗಲಿದೆ ಎಂದರು.
ದೊಡ್ಡಗುಬ್ಬಿ ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರಪ್ಪ, ದೊಡ್ಡಗುಬ್ಬಿಯಲ್ಲಿ ಚಿಕ್ಕ ಕಟ್ಟಡದಲ್ಲಿ ಗ್ರಾಮ ಪಂಚಾಯತಿ ಕಾರ್ಯಾಲಯ ಹೊಂದಿತ್ತು. ಈಗ ಅಧುನಿಕ ಸೌಲಭ್ಯ ಹಾಗೂ ಕಟ್ಟಡ ವಿಸ್ತರಿಸುವ ಉದ್ದೇಶದಿಂದ ನೂತನ ಕಟ್ಟಡದ ಭೂಮಿ ಪೂಜೆ ನೆರವೇರಿಸಲಾಗಿದೆ. ಶಾಸಕರ ಅನುದಾನದಲ್ಲಿ ಕಟ್ಟಡ ನಿರ್ಮಾಣವಾಗಲಿದೆ ಎಂದರು.
ಬಂಡೆ ಹೊಸೂರು, ರಾಂಪುರ, ಮಿಟ್ಟಗಾನಹಳ್ಳಿ, ಅಣಗಲಪುರ, ಶೀಗೆಹಳ್ಳಿ, ಕೋನದಾಸಪುರ ಗ್ರಾಮದಲ್ಲಿ ಜಲಜೀವನ್ ಯೋಜನೆಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ದೊಡ್ಡಗುಬ್ಬಿ ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರಪ್ಪ, ಉಪಾಧ್ಯಕ್ಷೆ ಅಂಬಿಕಾ ಮಂಜುನಾಥ್, ಸದಸ್ಯೆ ಸುಚಿತ್ರ ಮುಖಂಡರಾದ ಅಶೋಕ್, ನಟರಾಜ್, ಪಿಡಿಒ ರೋಹಿತ್ ಇದ್ದರು.