ಸುದ್ದಿಮೂಲ ವಾರ್ತೆ ರಾಯಚೂರು, ಜ.12:
ಸಂಸದೀಯ ಮಂಡಳಿಗಳ ಶಿಾರಸ್ಸುಗಳ ಕಡೆಗಣಿಸಿ ಬೇಡಿಕೆಗನುಗುಣವಾಗಿದ್ದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋೋಗ ಖಾತ್ರಿಿ ಯೋಜನೆ ಬದಲಿಸಿ ಅವಶ್ಯಕತೆಗನುಗುಣವಾಗಿರುವ ಸಂವಿಧಾನ ವಿರೋಧಿ ವಿಬಿ -ಜಿ ರಾಮ್- ಜಿ ಜಾರಿಗೆ ತಂದು ಕಾಯಿದೆ ವಿರೂಪಗೊಳಿಸಿದ್ದಾಾರೆ ಎಂದು ಸಂಸದ ಜಿ.ಕುಮಾರ ನಾಯಕ ಆಪಾದಿಸಿದರು.
ನಗರದ ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಸಂವಿಧಾನದ ಆಶಯಕ್ಕೆೆ ವಿರುದ್ಧವಾಗಿ ಮನರೇಗಾ ಯೋಜನೆಯನ್ನು ಕಸಿದು ವಿಕಸಿತ ಭಾರತ ಉದ್ಯೋೋಗ ಖಾತ್ರಿಿ ಜೀವನೋಪಾಯ ಎಂದೇಳಿ ಧರ್ಮಾಧಾರಿತಗೊಳಿಸಿ ಉಗ್ರ ಬಲಪಂಥೀಯ ಚಿಂತನೆಯನ್ನು ಎಲ್ಲರ ಮೇಲೂ ಹೇರಲು ಮುಂದಾಗಿರುವುದು ಸರಿಯಲ್ಲಘಿ. 100 ದಿನಗಳ ಕೂಲಿಯನ್ನೇ ಕಾರ್ಮಿಕರಿಗೆ ನೀಡಲಾಗಿಲ್ಲ ಎಂಬ ವರದಿ ಸಂಸದೀಯ ಮಂಡಳಿಯೇ ಶಿಾರಸ್ಸು ಮಾಡಿದ್ದಿದೆ. ಅಂದಾಗ 125 ದಿನಗಳ ಕೂಲಿ ಎಂಬ ಸುಳ್ಳು ಹೇಳಲು ಹೊರಟಿರುವುದು ಎಷ್ಟು ಸರಿ. ವರ್ಷವಿಡಿ ಕೂಲಿ ಕೇಳುವ ಹಕ್ಕನ್ನು ಕಸಿದು ಕೇಂದ್ರ ಸರ್ಕಾರವೇ ನಿರ್ಧರಿಸಿದ 60 ದಿನ ಕೂಲಿ ಕೆಲಸ ಕೇಳಬಾರದೆಂಬ ಷರತ್ತು ಕೂಲಿ ಕಸಿಯುವ ಹುನ್ನಾಾರ ಅಡಗಿದೆ ಎಂದು ದೂರಿದರು.
ಈ ಹಿಂದೆ 90ರಷ್ಟು ಕೇಂದ್ರದ, ಶೇ.10ರಷ್ಟು ರಾಜ್ಯದ ಪಾಲು ಉದ್ಯೋೋಗ ಖಾತ್ರಿಿಯಲ್ಲಿತ್ತು ಅದನ್ನೀಗ ಶೇ.60/40ರ ಅನುಪಾತದಲ್ಲಿ ಮಾಡಿ ರಾಜ್ಯಕ್ಕಿಿರುವ ಆರ್ಥಿಕ ಇತಿ, ಮಿತಿಗಳ ಬಗ್ಗೆೆ ಅರಿವಿದ್ದರೂ ಹೊಸ ಯೋಜನೆಯಂತೆ ಪಾವತಿ ಸಾಧ್ಯವೇ? ಪಾವತಿ ವ್ಯವಸ್ಥೆೆ ಕೇಂದ್ರೀಕೃತಗೊಳಿಸಿ ಸಂವಿಧಾನದ ಆಶಯಗಳನ್ನೇ ಗಾಳಿಗೆ ತೂರಿದ್ದಾಾರೆ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಈ ಹಿಂದೆ ಪಂಚಾಯಿತಿ ಮಟ್ಟದಲ್ಲಿ ಬೇಡಿಕೆ ಸಲ್ಲಿಸಬೇಕಿತ್ತು ಹೊಸ ಕಾಯಿದೆಯಲ್ಲಿ ಕೇಂದ್ರವೇ ಗುರುತಿಸಿದ ನಿಗದಿತ ಕ್ಷೇತ್ರದಲ್ಲಿಯೇ ಇಡೀ ದೇಶಕ್ಕೆೆ ಅನ್ವಯಿಸಿ ಮಾತ್ರ ಕೆಲಸ ಮಾಡಬೇಕಿದೆ. ಗ್ರಾಾಮ ಸಭೆಗಳ ಅಧಿಕಾರ ಮೊಟಕುಗೊಳಿಸಲಾಗಿದೆ. ಕಾಯ್ದಿಿರಿಸಿದ ಅನುದಾನ ಖರ್ಚಾದ ಮೇಲೆ ಯೋಜನೆ ಸ್ಥಗಿತಗೊಳಿಸುತ್ತದೆ ಎಂಬ ಅಂಶಗಳಿವೆ. ಇವೆಲ್ಲವನ್ನೂ ಮರೆ ಮಾಚಿ 125 ದಿನಗಳ ಕೆಲಸ ಎಂದು ಹೇಳಿ ವಾಸ್ತವಿಕ ಇತರ ಅಂಶಗಳ ಬಿಟ್ಟು ದಾರಿ ತಪ್ಪಿಿಸಲಾಗುತ್ತಿಿದೆ. ವೇತನ ಹೆಚ್ಚಿಿಸುವ ಅಧಿಕಾರ ರಾಜ್ಯಕ್ಕಿಿತ್ತು ಅದೀಗ ಕೇಂದ್ರವೇ ನಿರ್ಧರಿಸಲಿದೆ.ಹಿಂದಿನ ಯೋಜನೆಯಲ್ಲಿದ್ದ ಎಸ್ಸಿಿಎಸ್ಟಿ, ಒಬಿಸಿ, ಮಹಿಳೆಯರು ಪ್ರಾಾತಿನಿಧ್ಯ ಅಧಿಕಾರ ರದ್ದುಗೊಳಿಸಿದೆ. ಅಧಿಕಾರಿಗಳಿಲ್ಲದಿದ್ದರೂ ರಾಜ್ಯ ಸರ್ಕಾರ ಶೇ.40ರಷ್ಟು ಅನುದಾನ ನೀಡಬೇಕು ಇದು ಯಾವ ನ್ಯಾಾಯ, ಪ್ರಜಾಪ್ರಭುತ್ವಘಿ, ಸಂವಿಧಾನದ ಆಶಯವೇ ಎಂದು ಪ್ರಶ್ನಿಿಸಿದರು.
ಹೀಗಾಗಿ, ಈ ಹೊಸ ಯೋಜನೆಯಿಂದ ಬಲವಂತದ ವಲಸೆ, ಗ್ರಾಾಮೀಣ ಜೀವನೋಪಾಯಗಳ ಕುಸಿತವಾಗಲಿದೆ, ನಿರುದ್ಯೋೋಗದ ಪ್ರಮಾಣ ಹೆಚ್ಚಳವಾಗಲಿದೆ, ಮಹಿಳೆಯರ ಪಾಲುಗಾರಿಕೆ ಕಸಿಯುವಂತಿದೆ ಎಂದರು.
ನಮ್ಮ ಆಕ್ಷೇಪ, ವಿರೋಧ ಇರುವುದು ಸಂವಿಧಾನ ಬದ್ದ ಕಾಯಿದೆಯನ್ನು ಯೋಜನೆಯನ್ನಾಾಗಿ ದುರ್ಬಲಗೊಳಿಸುವ ಹುನ್ನಾಾರಕ್ಕೆೆಘಿ. ಸಂವಿಧಾನದ ಆಶಯದಂತೆ ಗ್ರಾಾಮ ಪಂಚಾಯಿತಿಗಳ ವಿಕೇಂದ್ರೀಕರಣ ಅಧಿಕಾರ ಮೊಟಕುಗೊಳಿಸುವ ಕುತಂತ್ರದ ವಿರುದ್ಧ ಅಲ್ಲದೆ, ಒಕ್ಕೂಟ ವ್ಯವಸ್ಥೆೆಯಲ್ಲಿ ರಾಜ್ಯಗಳ ಅಧಿಕಾರ ಕಸಿದು ಜನರ ದಾರಿ ತಪ್ಪಿಿಸುವ, ಧರ್ಮದ ಹೆಸರಲ್ಲಿ ಬಲಪಂಥೀಯ ಪ್ರಖರ ಉಗ್ರವಾದ ಸೃಷ್ಟಿಿಸುವುದರ ವಿರುದ್ಧವಿದೆ ವಿನಃ ರಾಮ್ ಎಂಬ ಹೆಸರಿಗೆ ಅಲ್ಲ ಎಂದು ಸ್ಪಷ್ಟ ಪಡಿಸಿದರು.
ಮಹಾತ್ಮಗಾಂಧಿಯ ಹೆಸರಲ್ಲೇನಾದರೂ ಲೋಪವಿದೆಯಾ ಬದಲಿಸಲು. ವಿಬಿ ಜಿ ರಾಮ್ ಜಿ ಇದು ಹಿಂದಿ ಹೇರಿಕೆಯ ಮತ್ತೊೊಂದು ಹುನ್ನಾಾರವಲ್ಲವೆ.ಆಯಾ ಪ್ರಾಾದೇಶಿಕ ಭಾಷೆಗಳಲ್ಲಿ ಯೋಜನೆಗಳ ಘೋಷಿಸಿ ಒಕ್ಕೂಟ ವ್ಯವಸ್ಥೆೆ ಬಲಪಡಿಸಲು ಕೇಂದ್ರ ಸರ್ಕಾರ ಸಮನ್ವಯತೆಯ ಕೆಲಸ ಮಾಡಿದರೆ ಸ್ವಾಾಗತಿಸುತ್ತೇವೆ ಎಂದರು.
ಯುಪಿಎ ಅವಧಿಯಲ್ಲಿ ತಂದ ಮಾಹಿತಿ ಹಕ್ಕು ಕಾಯಿದೆ, ಶಿಕ್ಷಣ ಹಕ್ಕು ಕಾಯಿದೆ, ಉದ್ಯೋೋಗ ಖಾತ್ರಿಿ ಕಾಯಿದೆಗಳನ್ನು ಯೋಜನೆಗಳನ್ನಾಾಗಿ ಪರಿವರ್ತಿಸಿದ್ದು ಸರಿಯಲ್ಲಘಿ. ರಾಮನ ಕುರಿತು ತುಟಿ ಮೇಲಿನ ಪ್ರೀತಿ ತೋರಿಸುವ ಬಿಜೆಪಿಯವರಿಗೆ ಜನರ ಹೃದಯಲ್ಲಿ ರಾಮನಿದ್ದಾಾನೆಂಬುದನ್ನೆೆ ಕಡೆಗಣಿಸಿದ್ದಾಾರೆ ಎಂದು ಕುಟುಕಿದರು.
ಸುದ್ದಿಗೋಷ್ಠಿಿಯಲ್ಲಿ ಮುಖಂಡರಾದ ರವಿಬೋಸರಾಜ್, ಕೆ.ಶಾಂತಪ್ಪಘಿ, ಜಯವಂತರಾವ್ ಪತಂಗೆ, ಜಯಣ್ಣಘಿ, ರುದ್ರಪ್ಪ ಅಂಗಡಿ, ಮೊಹ್ಮದ್ ಶಾಲಂ, ಜಿ.ಶಿವಮೂರ್ತಿ, ಅಮರೇಗೌಡ ಹಂಚಿನಾಳ, ಶ್ರೀನಿವಾಸರೆಡ್ಡಿಿ, ಮರಿಸ್ವಾಾಮಿ ಇತರರಿದ್ದರು.

