ಸುದ್ದಿಮೂಲ ವಾರ್ತೆ ರಾಯಚೂರು, ಅ.17
ಬೆಂಗಳೂರಿನಿಂದ ರಾಯಚೂರಿಗೆ ಆಗಮಿಸುತ್ತಿಿದ್ದ ಖಾಸಗಿ ಬಸ್ಗೆ ಬೆಂಕಿ ಹತ್ತಿಿ ಅದರೊಳಗಿದ್ದ ಪ್ರಯಾಣಿಕರು ಪವಾಡ ರೀತಿ ಪಾರಾಗಿದ್ದಾಾರೆ.
ಬೆಂಗಳೂರಿನಿಂದ ಹೊರಟ ಬಸ್ ಅನಂತಪುರದ ಬಳಿಯ ಗಾರಲದಿನ್ನೆೆ ಬಳಿಯ ರಾಷ್ಟ್ರೀಯ ಹೆದ್ದಾಾರಿ ಮೇಲೆ ಏಕಾಏಕಿ ಗ್ರೀನ್ ಲೈನ್ಸ್ ಸಂಸ್ಥೆೆಯ ಖಾಸಗಿ ಹವಾನಿಯಂತ್ರಿಿತ ಬಸ್ಗೆ ಬೆಂಕಿ ತಾಗಿ ಧಗಧಗ ಉರಿದು ಸಂಪೂರ್ಣ ಸುಟ್ಟು ಭಸ್ಮವಾಗಿ ಬಸ್ಸಿಿನಲ್ಲಿದ್ದ ಪ್ರಯಾಣಿಕರು ಎದ್ದು ಬಿದ್ದು ಹೊರಗೆ ಧುಮಕಿ ಪ್ರಾಾಣಾಪಾಯದಿಂದ ಬದುಕುಳಿದಿದ್ದಾಾರೆ.
ಬಸ್ಸಿಿನೊಳಗೆ ಕಾಂಗ್ರೆೆಸ್ ಮಹಿಳಾಧ್ಯಕ್ಷೆೆ ನಿರ್ಮಲಾ ಬೆಣ್ಣಿಿಘಿ, ಆಕಾಶವಾಣಿಯ ಪ್ರಭಾರಿ ಮುಖ್ಯಸ್ಥ ವೆಂಕಟೇಶ ಬೇವಿನಬೆಂಚಿ, ಚುಟುಕು ಸಾಹಿತ್ಯ ಪರಿಷತ್ನ ಕಾರ್ಯದರ್ಶಿ ಬಸವರಾಜ ಬ್ಯಾಾಗವಾಟ್ ಸೇರಿ ಹಲವರಿದ್ದರು.
ಬಸ್ನಲ್ಲಿದ್ದ ಪ್ರಯಾಣಿಕರಿಗೆ ಹೊಗೆಯ ವಾಸನೆ ಬಂದಾಗ ಚಾಲಕನ ಗಮನಕ್ಕೆೆ ತಂದರೂ ಕಿಲೋಮೀಟರ್ವರೆಗೆ ಬಸ್ ನಿಲ್ಲಿಸಿದೆ ಚಲಾಯಿಸಿಕೊಂಡೆ ಬಂದಿದ್ದು ಬೆಂಕಿ ಕೆನ್ನಾಾಲಿಗೆ ಹೆಚ್ಚಾಾಗಿ ಆತಂಕಗೊಂಡಿದ್ದರು ಎನ್ನಲಾಗಿದೆ.
ಬದುಕುಳಿದರೆ ಸಾಕು ಎಂದು ಬಸ್ನೊಳಗಿದ್ದ ವಿದ್ಯಾಾರ್ಥಿಗಳು, ಮಹಿಳೆಯರು ತಮ್ಮ ಎಲ್ಲ ಲಗೇಜ್ ಬ್ಯಾಾಗ್, ಲ್ಯಾಾಪ್ಟಾಪ್, ಹಣ, ಮೊಬೈಲ್ಗಳು ಬೆಂಕಿಗೆ ಆಹುತಿಯಾಗಿವೆ. ಆದರೆ, ಪ್ರಯಾಣಿಕರು ಬದುಕುಳಿದದ್ದೆೆ ಪವಾಡ ಎಂದು ಪ್ರಾಾಣಾಪಾಯದಿಂದ ಪಾರಾದ ಪ್ರಯಾಣಿಕರು ಹೇಳಿದರು.
ತಕ್ಷಣ ಇಂತಹ ಬಸ್ಗಳನ್ನು ಮೇಲಿಂದ ಮೇಲೆ ತಪಾಸಣೆ ಮಾಡಬೇಕು ಎಂದು ಆಗ್ರಹಿಸಿದ್ದಾಾರೆ.