ಸುದ್ದಿಮೂಲ ವಾರ್ತೆ
ಕೆ.ಆರ್.ಪುರ, ಅ.28:ಕವಿ ಮಹರ್ಷಿ ವಾಲ್ಮೀಕಿ ಅವರು ಒಂದು ಜಾತಿಗೆ ಸೀಮಿತವಾಗದೆ ಹಿಂದೂ ಧರ್ಮಕ್ಕೆ ಗುರುಗಳಿದ್ದಂತೆ ಹಿಂದೂ ಸಂಸ್ಕೃತಿಯನ್ನು ಇಡೀ ಜಗತ್ತಿಗೆ ಸಾರಿದರು ಪೂರ್ವ ತಾಲ್ಲೂಕು ವಿಶೇಷ ತಹಶೀಲ್ದಾರ್ ಮಹೇಶ್ ಹೇಳಿದರು.
ಕೆ.ಆರ್.ಪುರದ ತಾಲ್ಲೂಕು ಕಚೇರಿ ಆವರಣದಲ್ಲಿ ಬೆಂಗಳೂರು ಪೂರ್ವ ತಾಲ್ಲೂಕು ಆಡಳಿತ ಮಂಡಳಿ ಮತ್ತು ಪೂರ್ವ ತಾಲ್ಲೂಕು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಹಾಕಾವ್ಯ ರಾಮಾಯಣ ರಚಿಸಿದ ಮಹಾನ್ ಕವಿ ಮಹರ್ಷಿ ವಾಲ್ಮೀಕಿ ಅವರು ಅದರ್ಶ ತತ್ವಗಳು ಇಂದಿಗೂ ಪ್ರಸ್ತುತ. ಮಕ್ಕಳು ಇತಿಹಾಸವನ್ನು ಓದುವ ಮೂಲಕ ಆಗಾದ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡ ಎಂ.ನಾರಾಯಣಸ್ವಾಮಿ, ಈ ಹಿಂದೆ ಮುಖ್ಯಮಂತ್ರಿ ಅಗಿದ್ದ ಯಡಿಯೂರಪ್ಪ ಅವರು ವಾಲ್ಮೀಕಿ ಜಯಂತಿ ಆಚರಣೆಗೆ ಆದೇಶ ಹೊರಡಿಸಿ ಸರ್ಕಾರಿ ರಜೆ ಘೋಷಣೆ ಮಾಡಿದರು, ನಮ್ಮ ಸಮುದಾಯಕ್ಕೆ ಎಸ್ ಟಿ. ಮೀಸಲಾತಿ ದೊರೆಯದಿದ್ದರೆ ಬಹಳ ಹಿಂದೆ ಉಳಿಯಬೇಕಾಗಿತ್ತು ಎಂದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಈಶ್ವರಾನಂದ ಸ್ವಾಮೀಜಿ, ಎಸ್.ಟಿ.ಮೋರ್ಚಾ ಜಿಲ್ಲಾಧ್ಯಕ್ಷ ಬಾಕ್ಸರ್ ನಾಗರಾಜ್, ಮುಖಂಡರಾದ ಗಂಗನಬಿಡು ವೆಂಕಟಸ್ವಾಮಿ, ಕೆ.ಎಂ.ಗಣೇಶ್, ಕೇಶವ, ನಿವೃತ್ತ ಎಸಿಪಿ ಪಂಪಾಪತಿ, ಬೆಳ್ಳೂರು ಆಂಜಿನಪ್ಪ, ನರಸಿಂಹಯ್ಯ, ಶಿವಕುಮಾರ್, ರಾಜು, ಜಿ.ಕೆ ನಾಗೇಶ್ ಇದ್ದರು.