ಸುದ್ದಿಮೂಲವಾರ್ತೆ
ಕೊಪ್ಪಳ,ಆ.3: ಕಾರಟಗಿಯಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿದ ಪ್ರಕರಣವನ್ನು ಕೊಪ್ಪಳ ಪೊಲೀಸರು ಬೇಧಿಸಿದ್ದಾರೆ.
ಜು 31 ರಂದು ಕಾರಟಗಿ ಹೊರವಲಯದಲ್ಲಿ ರಾಘವೇಂದ್ರ ರಡ್ಡಿ ಎಂಬ ವ್ಯಕ್ತಿ ಬೈಕ್ ನಲ್ಲಿ ಹೋಗಿ ಬಿದ್ದಿದ್ದ. ಈ ಪ್ರಕರಣದಲ್ಲಿ ಆತನ ಪಕ್ಕದಲ್ಲಿ ಬಡಿಗೆ ಹಾಗು ಗಾಯವಾಗಿರುವದು ಕಂಡು ಬಂದಿದ್ದರಿಂದ ಕೊಲೆ ಮಾಡಿರುವುದಾಗಿ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು.
ರಾಘವೇಂದ್ರ ಗೂಡೂರಿನಲ್ಲಿಯ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಇದೇ ಕಾರಣ ಆಕೆಯ ಮಗ ಗೌಡಪ್ಪ ಎಂಬುವವರು ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಿದ್ದಾನೆ. ಗೌಡಪ್ಪನನ್ನು ಬಂಧಿಸಲಾಗಿದೆ. ಸಹಾಯ ಮಾಡಿದ ವ್ಯಕ್ತಿಯನ್ನು ಇಷ್ಟರಲ್ಲಿ ಬಂಧಿಸಲಾಗುವುದು ಎಂದು ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಿಗೋಡ ತಿಳಿಸಿದ್ದಾರೆ.
ಆಗಲೇ ವಿವಾಹಿತನಾಗಿರುವ ರಾಘವೇಂದ್ರ ರಡ್ಡಿ ಅನೈತಿಕ ಸಂಬಂಧ ಹೊಂದಿರುವ ದ್ವೇಷಕ್ಕಾಗಿ ಕೊಲೆ ಮಾಡಿದ್ದಾನೆ. ಈಗಾಗಲೇ ಆತನನ್ನು ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.